ಬಿಡದಿ:ಮಾಜಿ ಭೂಗತದೊರೆ ಮುತ್ತಪ್ಪ ರೈ ಮನೆಗೆ ಇಂದು ಬೆಳಗ್ಗೆಯೇ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು. ಬೆಳಗ್ಗೆ 6.30ಕ್ಕೆ ಸರ್ಚ್ ವಾರೆಂಟ್ ನೊಂದಿಗೆ ಬೆಂಗಳೂರಿನಿಂದ ಆರು ವಾಹನಗಳಲ್ಲಿ 20ಕ್ಕೂ ಹೆಚ್ಚು ಸಿಸಿಬಿ ಸಿಬ್ಬಂದಿ ಆಗಮಿಸಿ, ಸತತ ಎಂಟು ಗಂಟೆ ಕಾಲ ಮುತ್ತಪ್ಪ ರೈ ಮನೆಯವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮುತ್ತಪ್ಪ ರೈ ಪುತ್ರ ರಿಕ್ಕಿರೈ ಡ್ರಗ್ಸ್​ ಕೇಸ್​ನಲ್ಲಿ ವಿಚಾರಣೆ ಎದುರಿಸುತ್ತಿದ್ದು, ಸಾಕ್ಷ್ಯ ಕಲೆ ಹಾಕುವ ಸಲುವಾಗಿ ಸಿಸಿಬಿ ಅಲ್ಲಿಗೆ ತೆರಳಿತ್ತು. ಡ್ರಗ್​ ಪೆಡ್ಲರ್​ಗಳ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ ಎಂದೂ ಹೇಳಲಾಗುತ್ತಿದೆ. ಆದರೆ, ಮಾಹಿತಿ ಸಿಕ್ಕಿತಾ ಇಲ್ಲವೇ ಎಂಬುದು ಇನ್ನೂ ಖಚಿತವಾಗಿಲ್ಲ.
ಇದನ್ನೂ ಓದಿ:ಡಿ.ಕೆ. ರವಿಯಿಂದ ಡಿಕೆಶಿಗೆ ದುರಾದೃಷ್ಟ ವರ್ಗಾವಣೆ ಎಂದ ಪ್ರಶಾಂತ್​ ಸಂಬರಗಿಗೆ ಕುಸುಮಾ ತಿರುಗೇಟು..!
ಈ ನಡುವೆ, ಬೆಳಗ್ಗೆ 11 ಗಂಟೆ ಸುಮಾರಿಗೆ ಸಿಸಿಬಿಯ ಮತ್ತೊಂದು ತಂಡ ರಿಕಿಯನ್ನೂ ಬಿಡದಿ ನಿವಾಸಕ್ಕೆ ಕರೆತಂದಿದೆ. 2.30ರ ತನಕ ಈ ತಂಡ ರೈ ಅವರ ಬಿಡದಿ ನಿವಾಸದಲ್ಲಿತ್ತು. ಆದರೆ, ಏನು ವಿಚಾರಣೆ ನಡೆಸಿದ್ರು, ಏನೇನು ಸಾಕ್ಷ್ಯಗಳನ್ನು ಕಲೆ ಹಾಕಿದ್ರು ಎಂಬಿತ್ಯಾದಿ ಮಾಹಿತಿ ಬಹಿರಂಗವಾಗಿಲ್ಲ.
ಮುತ್ತಪ್ಪ ರೈ ಮಗನಿಗೆ ಡ್ರಗ್ಸ್​ ನಂಟು? ನಸುಕಿನಲ್ಲಿಯೇ ಸಿಸಿಬಿ ಶಾಕ್​- ಮನೆ ಮೇಲೆ ದಾಳಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + 14 =
Remember me
