ಬೆಂಗಳೂರು: ಹೊರರಾಜ್ಯದಿಂದ ಮಾದಕವಸ್ತು ತರಿಸಿಕೊಂಡು ನಗರದಲ್ಲಿ ಪೂರೈಕೆ ಮಾಡುತ್ತಿದ್ದ ಡೆಲಿವರಿ ಬಾಯ್ ಸೇರಿ ಮೂವರು ಆರೋಪಿಗಳನ್ನು ಮೈಕೋ ಲೇಔಟ್ ಪೊಲೀಸರು ಬಂಧಿಸಿದ್ದಾರೆ. ಜಾರ್ಖಂಡ್ ಮೂಲದ ಆಯುಷ್ ಪಾಂಡೆ (22), ರೋಹಿತ್ ರಾಮ್ (22) ಹಾಗೂ ಅಸ್ಸಾಂ ಮೂಲದ ಡೆಲಿವರಿ ಬಾಯ್ ನೂರ್ ಅಲಿ (30) ಬಂಧಿತರು. ಆರೋಪಿಗಳಿಂದ 23.80 ಲಕ್ಷ ರೂ. ಮೌಲ್ಯದ 8 ಕೆ.ಜಿ ಗಾಂಜಾ, 4 ಕೆ.ಜಿ. 330 ಗ್ರಾಂ. ಚರಸ್, 120 ಗ್ರಾಂ ಹಶೀಶ್, 8 ಗ್ರಾಂ. ಬ್ರೌನ್ ಶುಗರ್, 9 ಗ್ರಾಂ. ಎಂಡಿಎಂಎ ಮಾತ್ರೆ, 100 ಎಲ್‌ಎಸ್‌ಡಿ ಸ್ಟ್ರಿಪ್ಸ್ ಹಾಗೂ 2 ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಿಕ್ಕಿ ಬಿದ್ದಿದ್ದು ಹೀಗೆ?:ಗುರುವಾರ ಸಂಜೆ 6 ಗಂಟೆಯಲ್ಲಿ ಬಿಟಿಎಂ ಲೇಔಟ್‌ನಲ್ಲಿ ಡೂನ್ಜೋ ಡೆಲಿವರಿ ಬಾಯ್ ಡ್ರಗ್ಸ್ ಸರಬರಾಜು ಮಾಡುತ್ತಿದ್ದ ಬಗ್ಗೆ ಮುಖ್ಯಪೇದೆ ಚಂದ್ರಪ್ಪಗೆ ಮಾಹಿತಿ ಬಂದಿತ್ತು. ಅದನ್ನು ಗಂಭೀರವಾಗಿ ಪರಿಗಣಿಸಿ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಬಿಟಿಎಂ 2ನೇ ಹಂತದಲ್ಲಿ ಸ್ಕೂಟರ್‌ನಲ್ಲಿ ಹೋಗುತ್ತಿದ್ದ ಡೆಲಿವರಿ ಬಾಯ್ ನೂರ್ ಅಲಿಯನ್ನು ತಡೆದು ತಪಾಸಣೆ ನಡೆಸಿದಾಗ, ಬ್ಯಾಗಿನಲ್ಲಿ ಮಾದಕವಸ್ತುಗಳಾದ ಚರಸ್, ಗಾಂಜಾ ಪತ್ತೆಯಾಗಿತ್ತು. ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಮುಖ ಆರೋಪಿಗಳಾದ ಆಯುಷ್ ಪಾಂಡೆ ಮತ್ತು ರೋಹಿತ್ ರಾಮ್ ಬಗ್ಗೆ ಬಾಯ್ಬಿಟ್ಟಿದ್ದ. ಆತ ನೀಡಿದ ಮಾಹಿತಿ ಆಧರಿಸಿ ಬೇಗೂರಿನ ಎಇಸಿಎಸ್ ಲೇಔಟ್ ಬಾಡಿಗೆ ಮನೆಯಲ್ಲಿ ನೆಲೆಸಿದ್ದ ಆಯೂಷ್ ಪಾಂಡೆ ಮತ್ತು ರೋಹಿತ್ ರಾಮ್‌ನನ್ನು ಬಂಧಿಸಲಾಗಿದೆ.
ಕಾಲೇಜು ಸ್ನೇಹಿತರು:ಆಯುಷ್ ಮತ್ತು ರೋಹಿತ್ ಕಾಲೇಜು ದಿನಗಳಲ್ಲಿ ಸ್ನೇಹಿತರಾಗಿದ್ದರು. ಇಬ್ಬರೂ ಮಾದಕ ವ್ಯಸನಿಗಳಾಗಿದ್ದು, ಮೋಜಿನ ಜೀವನ ನಡೆಸುತ್ತಿದ್ದರು. ಡ್ರಗ್ಸ್ ಮಾರಾಟದಲ್ಲಿ ಹೆಚ್ಚಿನ ಹಣ ಗಳಿಸಬಹುದು ಎಂಬುದು ಗೊತ್ತಿತ್ತು. ಸೇವನೆಗಾಗಿ ಡ್ರಗ್ಸ್ ಖರೀದಿಸುತ್ತಿದ್ದವರ ಮೂಲಕ ಅಂತಾರಾಜ್ಯ ಡ್ರಗ್ ಪೆಡ್ಲರ್‌ಗಳ ಪರಿಚಯ ಮಾಡಿಕೊಂಡಿದ್ದರು. ರಾಜಸ್ಥಾನ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶದಿಂದ ಕೋರಿಯರ್ ಮೂಲಕ ಕಂಪ್ಯೂಟರ್‌ನ ಸಿಪಿಯು, ಸ್ಪೀಕರ್ ಬಾಕ್ಸ್, ಮೆಡಿಕಲ್ ಕಿಟ್ ಹಾಗೂ ಗೊಂಬೆಗಳಲ್ಲಿ ಡ್ರಗ್ಸ್ ಪಾರ್ಸೆಲ್ ತರಿಸಿಕೊಳ್ಳುತ್ತಿದ್ದರು. ಡೆಲಿವರಿ ಬಾಯ್ ನೂರ್ ಅಲಿಗೆ ಹೆಚ್ಚಿನ ಹಣದ ಆಮಿಷವೊಡ್ಡಿ ದಂಧೆ ನಡೆಸುತ್ತಿದ್ದರು.
ವ್ಯಾಟ್ಸ್‌ಆ್ಯಪ್‌ನಲ್ಲಿ ಆರ್ಡರ್:ರೋಹಿತ್ ಮತ್ತು ಆಯುಷ್‌ಗೆ ಡ್ರಗ್ಸ್ ಖರೀದಿಸುವ ಕಾಯಂ ಗ್ರಾಹಕರಿದ್ದಾರೆ. ಫೋನ್ ಕರೆ ಹಾಗೂ ವ್ಯಾಟ್ಸ್‌ಆ್ಯಪ್‌ನಲ್ಲಿ ಡ್ರಗ್ಸ್ ಪೂರೈಕೆಗೆ ವ್ಯಸನಿಗಳಿಂದ ಆರ್ಡರ್ ಬರುತ್ತಿತ್ತು. ಅವರಿಂದ ಲೋಕೇಷನ್ ಪಡೆದು, ಡೆಲಿವರಿ ಬಾಯ್ ನೂರ್ ಅಲಿ ವ್ಯಾಟ್ಸ್‌ಆ್ಯಪ್‌ಗೆ ರವಾನಿಸುತ್ತಿದ್ದರು. ಆರೋಪಿಗಳು ಪ್ಯಾಕ್ ಮಾಡಿರುತ್ತಿದ್ದ ಪಾರ್ಸೆಲ್‌ಗಳನ್ನು ತೆಗೆದುಕೊಂಡು ಅವರು ಸೂಚಿಸಿದ ಲೊಕೆಷನ್‌ಗೆ ಸರಬರಾಜು ಮಾಡುತ್ತಿದ್ದ. ಒಂದು ಪಾರ್ಸೆಲ್‌ಗೆ 500 ರೂ. ನೀಡುತ್ತಿದ್ದರು ಎಂಬುದು ವಿಚಾರಣೆಯಿಂದ ಗೊತ್ತಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − seven =
Remember me
