ಬೆಂಗಳೂರು:ಸ್ಯಾಂಡಲ್​ವುಡ್ ಡ್ರಗ್ಸ್ ಜಾಲದ ನಂಟು ಕೇರಳದವರೆಗೂ ವಿಸ್ತರಿಸಿರುವ ಸ್ಪೋಟಕ ಸಂಗತಿ ಜಾರಿ ನಿರ್ದೇಶನಾಲಯ (ಇಡಿ) ತನಿಖೆಯಲ್ಲಿ ಪತ್ತೆಯಾದ ಬೆನ್ನಲ್ಲೇ 7 ಮಂದಿಗೆ ಸಮನ್ಸ್ ಜಾರಿ ಮಾಡಲಾಗಿತ್ತು. ಇದೀಗ ಸಮನ್ಸ್ ಪಡೆದವರ ಒಡನಾಟ ಹೊಂದಿರುವ ಹಲವು ಪೆಡ್ಲರ್​ಗಳು ತಮ್ಮ ಅಕ್ರಮ ಆಸ್ತಿ ದಾಖಲೆಗಳನ್ನು ಬೇರೆಡೆ ಸಾಗಿಸಲು ಯತ್ನಿಸಿದ್ದಾರೆ ಎಂಬ ಮಾಹಿತಿ ಇಡಿಗೆ ಲಭಿಸಿದೆ.
ಡ್ರಗ್ಸ್ ಜಾಲದಲ್ಲಿ ಎನ್​ಸಿಬಿ ಬಲೆಗೆ ಬಿದ್ದ ಮೊಹಮದ್ ಅನೂಪ್ ಜತೆ ಒಡನಾಟ ಹೊಂದಿದ್ದ ಕೇರಳದ ಪ್ರಭಾವಿ ರಾಜಕಾರಣಿ ಕೊಡಿಯೇರಿ ಬಾಲಕೃಷ್ಣ ಪುತ್ರ ಬಿನೀಶ್ ಕೊಡಿಯೇರಿಗೆ ಅ.6ರಂದು ವಿಚಾರಣೆಗೆ ಹಾಜರಾಗುವಂತೆ ಇಡಿ ಸಮನ್ಸ್ ಜಾರಿ ಮಾಡಿದೆ. ಜತೆಗೆ ಸಿಸಿಬಿ ಬಲೆಗೆ ಬಿದ್ದಿರುವ ಲೂಮ್ ಪೆಪ್ಪರ್, ವೈಭವ್ ಜೈನ್, ಪ್ರತೀಕ್ ಶೆಟ್ಟಿ ಸೇರಿ 6 ಮಂದಿಗೆ ಸಮನ್ಸ್ ನೀಡಲಾಗಿದೆ. ಇಡಿ ವಿಚಾರಣೆ ವೇಳೆ ತಮ್ಮ ಒಡನಾಟದಲ್ಲಿದ್ದ ಪೆಡ್ಲರ್​ಗಳು ಹಾಗೂ ಆಪ್ತರ ಅಕ್ರಮ ಆಸ್ತಿ, ಹಣ ವರ್ಗಾವಣೆ, ಅವ್ಯವಹಾರಗಳ ಬಗ್ಗೆ ಮಾಹಿತಿ ನೀಡುವ ಸಾಧ್ಯತೆಗಳಿವೆ. ಹೀಗಾಗಿ ಇಡಿ ಸಮನ್ಸ್ ನೀಡಿರುವ ಆರೋಪಿಗಳ ಒಡನಾಟದಲ್ಲಿದ್ದ ದೊಡ್ಡ ಡ್ರಗ್ ಪೆಡ್ಲರ್​ಗಳು ಅಕ್ರಮ ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆಗಳನ್ನು ಬೇರೆಡೆ ಸಾಗಿಸಿರುವ ಬಗ್ಗೆ ಇಡಿ ಅಧಿಕಾರಿಗಳಿಗೆ ಅನುಮಾನ ವ್ಯಕ್ತವಾಗಿದೆ. ಇನ್ನು ಕೆಲ ಪೆಡ್ಲರ್​ಗಳು ವಾಮಮಾರ್ಗದ ಮೂಲಕ ಆಸ್ತಿ ಮರೆ ಮಾಚಲು ಯತ್ನಿಸುತ್ತಿದ್ದಾರೆ.
ಕುಬೇರ ಪೆಡ್ಲರ್​ಗಳ ಮೇಲೆ ಕಣ್ಣು! :ಡ್ರಗ್ಸ್ ದಂಧೆಯಲ್ಲಿ ತೊಡಗಿ ಕೋಟ್ಯಂತರ ರೂ. ಅಕ್ರಮ ಹಣ ವರ್ಗಾವಣೆ ನಡೆಸಿ ಕುಬೇರರಾಗಿರುವ ಪೆಡ್ಲರ್​ಗಳ ಮೇಲೆ ಇಡಿ ಅಧಿಕಾರಿಗಳು ಕಣ್ಣಿಟ್ಟಿದ್ದಾರೆ. ಪೆಡ್ಲರ್​ಗಳಿಗೂ ಇದರ ಸುಳಿವು ಸಿಕ್ಕಿದ್ದು, ಬಂಧನ ಭೀತಿಯಿಂದ ಹೊರ ರಾಜ್ಯಗಳಿಗೆ ತೆರಳಿ ತಲೆಮರೆಸಿಕೊಂಡಿದ್ದಾರೆ. ಇತ್ತ ಇಡಿ ಡ್ರಗ್ಸ್ ದಂಧೆಯಲ್ಲಿ ಕೋಟ್ಯಂತರ ರೂ. ಅವ್ಯವಹಾರ ನಡೆಸಿದ ಪೆಡ್ಲರ್​ಗಳ ಪಟ್ಟಿ ಸಿದ್ದಪಡಿಸುತ್ತಿದೆ. ಸಮನ್ಸ್ ನೀಡಿರುವ ಆರೋಪಿಗಳನ್ನು ವಿಚಾರಣೆ ನಡೆಸಿ ದೊಡ್ಡ ಪೆಡ್ಲರ್​ಗಳಿಗೆ ಬಲೆ ಬೀಸಲು ಇಡಿ ಮುಂದಾಗಿದೆ.
ಕೇರಳದ ಪ್ರಭಾವಿಗಳಿಗೂ ಇಡಿ ಬಿಸಿ :ಬಿನೀಶ್ ಕೊಡಿಯೇರಿ ವಿಚಾರಣೆಯಿಂದ ಹಲವು ಪ್ರಭಾವಿಗಳ ಅವ್ಯವಹಾರ ಬೆಳಕಿಗೆ ಬರುವ ಸಾಧ್ಯತೆಗಳಿವೆ. ಈ ಬೆಳವಣಿಗೆ ಬೆನ್ನಲ್ಲೇ ಬಿನೀಶ್ ಒಡನಾಟ ಹೊಂದಿರುವ ಕೇರಳದ ಕೆಲ ಉದ್ಯಮಿಗಳು, ಪ್ರಭಾವಿಗಳಿಗೆ ಬೆಂಗಳೂರು ಇಡಿ ಅಧಿಕಾರಿಗಳ ನಡುಕ ಶುರುವಾಗಿದೆ. ಈತ ಕೇರಳದಲ್ಲಿ ಹಲವು ಪ್ರಭಾವಿಗಳು, ಖ್ಯಾತ ನಟ-ನಟಿಯರ ಜತೆ ಗುರುತಿಸಿಕೊಂಡಿದ್ದ. ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದ್ದ ಚಿನ್ನ ಸ್ಮಗ್ಲಿಂಗ್ ಕೇಸ್​ನಲ್ಲೂ ಈತನ ಹೆಸರು ತುಳುಕು ಹಾಕಿಕೊಂಡಿದೆ. ಅಕ್ರಮ ಹಣ ವರ್ಗಾವಣೆಯಲ್ಲಿ ತೊಡಗಿರುವ ಬಗ್ಗೆ ಸುಳಿವು ಸಿಕ್ಕಿದ ಹಿನ್ನೆಲೆಯಲ್ಲಿ ಈತನಿಗೆ ಸಮನ್ಸ್ ನೀಡಲಾಗಿದೆ ಎಂದು ಇಡಿ ಮೂಲಗಳು ತಿಳಿಸಿವೆ.
ಕುಸುಮಾ ತಲೆ ಮೇಲೆ ‘ಕೈ’ ಇಟ್ರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ !

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + sixteen =
Remember me
