ಬೆಂಗಳೂರು :ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಪ್ರಕರಣದ ಬೆನ್ನಲ್ಲಿಯೇ ಡಾರ್ಕ್ ವೆಬ್‌ಸೈಟ್‌ನಲ್ಲಿ ಮಾದಕ ದ್ರವ್ಯದ ದಂಧೆ ಕೇಸಿನಲ್ಲಿ ಕಾಂಗ್ರೆಸ್ ಮಾಜಿ ಸಚಿವರ ಪುತ್ರ ಸೇರಿದಂತೆ 8 ಆರೋಪಿಗಳನ್ನು ಬೆಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ.ಹಾವೇರಿಯ ಕಾಂಗ್ರೆಸ್ ಮಾಜಿ ಸಚಿವ ರುದ್ರಪ್ಪ ಲಮಾಣಿ ಪುತ್ರ ದರ್ಶನ್ ಲಮಾಣಿ ಹಾಗೂ ಹೇಮಂತ್ ಮುದ್ದಪ್ಪ, ಸುನೀಶ್ ಹೆಗಡೆ, ಪ್ರಸಿದ್ಧ ಶೆಟ್ಟಿ, ಪಂಕಜ್ ಕೊಠಾರಿ, ಮದನ್ ಮತ್ತು ಆಶಿಶ್ ಬಂಧಿತರು. ಕೆಂಪೇಗೌಡನಗರ ಠಾಣೆಯಲ್ಲಿ ನ.4ರಲ್ಲಿ ದಾಖಲಾಗಿದ್ದ ಡಾರ್ಕ್ ವೆಬ್‌ನಲ್ಲಿ ಡ್ರಗ್ಸ್ ದಂಧೆ ಪ್ರಕರಣದ ಸಂಬಂಧ ಸ್ಥಳೀಯ ಪೊಲೀಸರು ಮತ್ತು ಸಿಸಿಬಿ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಗೋವಾದಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಡ್ರಗ್ಸ್ ಕೇಸಿಗೆ ಹೇಮಂತ್ ಕಿಂಗ್‌ಪಿನ್ ಆಗಿದ್ದು, ಡಾರ್ಕ್‌ವೆಬ್ನಲ್ಲಿ ಮಾದಕ ದ್ರವ್ಯ ಖರೀದಿಸಿ ಪಾರ್ಟಿಗಳಿಗೆ ಪೂರೈಕೆ ಮಾಡುತ್ತಿದ್ದ. ಅಲ್ಲದೆ, ತನ್ನ ಸಹಚರರ ಜತೆಗೆ ಸದಾಶಿವನಗರದ ಸುನೀಶ್ ಶೆಟ್ಟಿ ಮನೆಯಲ್ಲಿ ಪಾರ್ಟಿಗಳನ್ನು ನಡೆಸುತ್ತಿದ್ದರು. ಈ ಕುರಿತು ದಕ್ಷಿಣ ವಿಭಾಗ ಡಿಸಿಪಿ ಹರೀಶ್ ಪಾಂಡೇ ಸೋಮವಾರ ಕೆಂಪೇಗೌಡನಗರ ಪೊಲೀಸ್ ಠಾಣೆಯಲ್ಲಿ ಆರೋಪಿಗಳನ್ನು ವಿಚಾರಣೆ ನಡೆಸಿದ್ದಾರೆ.
ಚಾಮರಾಜಪೇಟೆಯಲ್ಲಿನ ವಿದೇಶಿ ಅಂಚೆ ಕಚೇರಿಗೆ ವಿದೇಶದಿಂದ ಸಿಬಿಐ ಮುಖ್ಯ ರಸ್ತೆ ಎಸ್‌ಬಿಐ ಬ್ಯಾಂಕ್ ಎದುರು ಮನೆ ನಂ-43, ಅರ್ನವ್ ಗೌಡ ಎಂಬಾತನ ಹೆಸರಿಗೆ ಪಾರ್ಸೆಲ್ ಕಳುಹಿಸಲಾಗಿತ್ತು. ಈ ಪಾರ್ಸೆಲ್ ವಿಚಾರಿಸಲು ಹೇಮಂತ್, ಅಂಚೆ ಕಚೇರಿಗೆ ಪದೇ ಪದೆ ಬಂದು ಹೋಗುತ್ತಿದ್ದ. ಅನುಮಾನ ಬಂದು ಕಸ್ಟಮ್ಸ್ ಅಧಿಕಾರಿಗಳು, ನ.4ರಂದು ಅಂಚೆ ಕಚೇರಿ ಪಾರ್ಸೆಲ್ ಬಂದಾಗ ತೆರೆದು ಪರಿಶೀಲನೆ ನಡೆಸಿದಾಗ ಹೈಡೋ ಗಾಂಜಾ ಪತ್ತೆ ಆಗಿತ್ತು.
]ಈ ಕುರಿತು ಸಿಸಿಬಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಅದೇ ಸಮಯಕ್ಕೆ ಪಾರ್ಸೆಲ್ ಪಡೆಯಲು ಸುಜಯ್ ಮತ್ತು ಹೇಮಂತ್ ಬಂದಿದ್ದರು. ವಿಷಯ ತಿಳಿದ ಸಿಸಿಬಿ ಇನ್‌ಸ್ಪೆಕ್ಟರ್ ಶ್ರೀಧರ್ ಕೆ. ಪೂಜಾರ್ ನೇತೃತ್ವದ ತಂಡ ಅಂಚೆ ಕಚೇರಿಗೆ ಬಂದಾಗ ಹೇಮಂತ್ ತಪ್ಪಿಸಿಕೊಂಡಿದ್ದ.ಸುಜಯ್ ಪೊಲೀಸರಿಗೆ ಸೆರೆಸಿಕ್ಕಿದ್ದ. ಪಾರ್ಸೆಲ್ ಪರಿಶೀಲನೆ ನಡೆಸಿದಾಗ 500 ಗ್ರಾಂ ಹೈಡ್ರೋ ಗಾಂಜಾ ಪತ್ತೆಯಾಗಿತ್ತು. ಪ್ರಕರಣ ಬೆಳಕಿಗೆ ಬರುತ್ತಿದಂತೆ ಆರೋಪಿಗಳಾದ ಹೇಮಂತ್ ಮತ್ತು ಅರ್ನವ್ ಗೌಡ ಇನ್ನಿತ್ತರರು ತಲೆಮರೆಸಿಕೊಂಡಿದ್ದರು. ಸಿಸಿಬಿ ಇನ್‌ಸ್ಪೆಕ್ಟರ್ ಕೊಟ್ಟ ದೂರಿನ ಮೇರೆಗೆ ಕೆಂಪೇಗೌಡನಗರ ಠಾಣೆಯಲ್ಲಿ ಎ್ಐಆರ್ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದರು.
ಕೆಂಪೇಗೌಡನಗರ ಠಾಣೆ ಮತ್ತು ಸಿಸಿಬಿ ಪೊಲೀಸರು ಜಂಟಿ ಕಾರ್ಯಾಚರಣೆಗೆ ಕೈಗೊಂಡು ಪೆಡ್ಲರ್‌ಗಳ ಚಲನವಲನದ ಮೇಲೆ ನಿಗಾವಹಿಸಿದ್ದರು. ತಪ್ಪಿಸಿಕೊಂಡಿದ್ದ ಹೇಮಂತ್ ಹಾಗೂ ಸುನೀಶ್ ಜತೆಗೆ ದರ್ಶನ್ ಲಮಾಣಿ ಇರುವುದು ಖಚಿತವಾಗಿತ್ತು. ಬಂಧನ ಭೀತಿಯಿಂದ ಪೆಡ್ಲರ್‌ಗಳು ಆಶ್ರಯ ಕೋರಿ ಲಮಾಣಿ ಮೋರೆ ಹೋಗಿದ್ದರು. ದರ್ಶನ್ ಲಮಾಣಿ ಮತ್ತು ಇನ್ನಿತ್ತರ ಆರೋಪಿಗಳು ವಿವಿಧೆಡೆ ಸುತ್ತಾಡಿಸಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡಿದಲ್ಲದೆ ಉಳಿದುಕೊಳ್ಳಲು ಆಶ್ರಯ ಕೊಟ್ಟಿದ್ದ. ಇತ್ತೀಚೆಗೆ ಗೋವಾದಲ್ಲಿ ಆರೋಪಿಗಳು ಇರುವ ಬಗ್ಗೆ ಖಚಿತ ಮಾಹಿತಿ ಪಡೆದ ವಿಶೇಷ ತಂಡ ಕಾರ್ಯಾಚರಣೆ ನಡೆಸಿ ಎಲ್ಲರನ್ನು ಬಂಧಿಸಿ ಬೆಂಗಳೂರಿಗೆ ಕರೆತಂದಿದ್ದಾರೆ. ವಿಚಾರಣೆ ಸಲುವಾಗಿ ಆರೋಪಿಗಳನ್ನು ಕಸ್ಟಡಿ ಪಡೆದಿದ್ದಾರೆ. ಈ ಕೇಸಿನಲ್ಲಿ ದರ್ಶನ್ ಲಮಾಣಿ ಪಾತ್ರದ ಬಗ್ಗೆ ಮಾಹಿತಿ ಕಲೆ ಹಾಕುತ್ತಿರುವುದಾಗಿ ಸಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − thirteen =
Remember me
