ಬೆಂಗಳೂರು:ಬೆಳಗಿನ ಜಾವ 3ರಿಂದ 4 ಗಂಟೆಯವರೆಗೂ ಡಾನ್ಸ್ ಬಾರ್‌ಗಳಲ್ಲಿ ಪಾರ್ಟಿಗಳು ನಡೆಯುತ್ತವೆ. ಅದೇ ಡ್ರಗ್ಸ್ ಬಳಸುವ ಮೊದಲ ಮೂಲ. ಲೀ ಮೆರಿಡಿಯನ್ ಹೋಟೆಲ್‌ನಲ್ಲಿ ಬೆಳಗಿನವರೆಗೆ ನಡೆಯುತ್ತಿತ್ತು. ಅನೇಕ ಹೆಣ್ಣುಮಕ್ಕಳು ರಸ್ತೆಯಲ್ಲಿ ಬಿದ್ದಿರುವುದನ್ನು ಜನ ನೋಡಿದ್ದಾರೆ. ಮಲ್ಯ ರಸ್ತೆಯ ಮೈಕ್ರೋ ಬ್ರೀವರಿಸ್ ಯಾರದ್ದು? ಸರ್ಕಾರದಲ್ಲಿರುವವರೇ ಈ ರೆಸ್ಟೋರೆಂಟ್‌ಗೆ ಹೂಡಿಕೆ ಮಾಡಿದ್ದಾರೆ. ಪಾಪದ ಹಣವನ್ನು ಇದಕ್ಕೆ ತೊಡಗಿಸ್ತಿದ್ದಾರೆ. ಈ ಬಗ್ಗೆ ಪ್ರಾಮಾಣಿಕ ತನಿಖೆ ನಡೆಸಿದ್ದರಷ್ಟೇ ತಾರ್ಕಿಕ ಅಂತ್ಯ ಕಾಣಿಸಬಹುದು ಎಂದು ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್​ಡಿಕೆ, ಡ್ರಗ್ಸ್​ ಕೇಸ್​ನಲ್ಲಿ ಬರೀ ಮೂರ್ನಾಲ್ಕು ಜನರನ್ನು ಹಿಡಿದುಕೊಂಡು ಎಳೆದಾಡಿದ್ರೆ ಪ್ರಯೋಜನ ಆಗಲ್ಲ. ರಾಜಕಾರಣಿಗಳು ಮಾತ್ರವಲ್ಲ, ಹಲವು ಅಧಿಕಾರಿಗಳು ಕೂಡ ಇದರಲ್ಲಿ ಭಾಗಿಯಾಗಿದ್ದಾರೆ. ಈ ಬಗ್ಗೆ ಅಧಿವೇಶನದಲ್ಲಿ ಚರ್ಚೆ ಮಾಡಿದರೆ ಹಾರಿಕೆ ಉತ್ತರ ಸಿಗಲಿದೆಯಷ್ಟೆ ಎಂದು ಅಸಮಾಧಾನ ಹೊರಹಾಕಿದರು.
ಇದನ್ನೂ ಓದಿರಿ1982ರಲ್ಲೇ ನನ್ನ ಧರ್ಮಪತ್ನಿ ಜತೆ ಮಲೇಶಿಯಾದಲ್ಲಿ ಕ್ಯಾಸಿನೋ ನೋಡಿದ್ದೀನಿ; ಕುಮಾರಸ್ವಾಮಿ
ಡಾನ್ಸ್ ಬಾರ್​, ಕ್ರಿಕೆಟ್ ಬೆಟ್ಟಿಂಗ್ ಹಣ ಬಳಸಿ ಸಮ್ಮಿಶ್ರ ಸರ್ಕಾರವನ್ನು ಪತನ ಮಾಡಲಾಯಿತು ಎಂಬ ಕುಮಾರಸ್ವಾಮಿ ಹೇಳಿಕೆ ಕುರಿತು ಇತ್ತೀಚಿಗೆ ಎಚ್​.ವಿಶ್ವನಾಥ್​ ಟೀಕಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಎಚ್​ಡಿಕೆ, ಆ ವ್ಯಕ್ತಿ ಬಗ್ಗೆ ಮಾತನಾಡಿ ನಾನೇ ಡಿಗ್ರೇಡ್ ಮಾಡಿಕೊಳ್ಳಲ್ಲ. ಆ ವ್ಯಕ್ತಿಯ ಅಭಿರುಚಿ ಏನು ಅನ್ನೋದು ಎಲ್ಲರಿಗೂ ಗೊತ್ತಿದೆ ಎಂದು ವಾಗ್ದಾಳಿ ನಡೆಸಿದರು. ಕಾಂಗ್ರೆಸ್​​ನಲ್ಲೂ ಸರ್ಕಾರ ತೆಗಿಯಬೇಕು ಎಂದು ಕೆಲವು ಇದ್ದರು. ನಾನು ಮತ್ತಲ್ಲಿ ಮಲಗಿರಲಿಲ್ಲ. ಈ ರಾಜ್ಯಕ್ಕೆ ನನ್ನದೇ ಆದ ಕೊಡುಗೆ ಕೊಟ್ಟಿದ್ದೀನಿ ಎಂದರು.
ಡ್ರಗ್ಸ್​ ವಿಚಾರವಾಗಿ ಇನ್ನು ಹದಿನೈದು ದಿನ ಕಳೆದರೆ ಎಲ್ಲವೂ ನಿಮಗೆ ಗೊತ್ತಾಗಲಿದೆ ಎಂದರು.
‘ನಾವಿಬ್ಬರೂ ಒಟ್ಟಿಗೆ ಡ್ರಗ್ಸ್​ ಸೇವಿಸುತ್ತಿದ್ದೆವು, ಬಿಎಂಡಬ್ಲ್ಯು ಕಾರಿನಲ್ಲೇ ಹೋಟೆಲ್​ಗೆ ಕರೆದೊಯ್ಯುತ್ತಿದ್ದೆ…’

‘ರಾಗಿಣಿಗೆ ನಾನೇ ಡ್ರಗ್ಸ್​ ಕೊಡುತ್ತಿದ್ದೆ… ಡ್ರಗ್ಸ್​ ಅಡಗಿಸಿಟ್ಟಿರುವ ಜಾಗವನ್ನೂ ತೋರಿಸುವೆ’

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 4 =
Remember me
