*ಪತ್ತೆಯಾಯ್ತು ಆಸ್ತಿ ಕೋಟಿ ಕೋಟಿ*ಬಂಧಿತರ ನಶೆ ಇಳಿಸಿದ ಇ.ಡಿ.
ಅವಿನಾಶ ಮೂಡಂಬಿಕಾನ
ಬೆಂಗಳೂರು:ಸ್ಯಾಂಡಲ್​ವುಡ್ ಡ್ರಗ್ಸ್ ಮಾಫಿಯಾ ದಂಧೆಯಲ್ಲಿ ಸಿಕ್ಕಿಬಿದ್ದಿರುವವರ ಕೋಟಿ ಕೋಟಿ ಖಜಾನೆ ಗುಟ್ಟು ಬಯಲಾಗಿದೆ! ಬಂಧಿತರ ಆಸ್ತಿ ಮೌಲ್ಯದ ಮಾಹಿತಿ ಸಿಕ್ಕ ಬೆನ್ನಲ್ಲೇ ಜಾರಿ ನಿರ್ದೇಶನಾಲಯ (ಇ.ಡಿ.) ಆದಾಯ ತೆರಿಗೆ ಇಲಾಖೆಯ (ಐಟಿ) ಕದ ತಟ್ಟಿದೆ. ಇದರಿಂದಾಗಿ ದಂಧೆಕೋರರಿಗೆ ಜೈಲು ಶಿಕ್ಷೆ ಭೀತಿಯ ನಡುವೆಯೇ ಆಸ್ತಿ ಕೂಡ ಕೈಜಾರುವ ಆತಂಕ ಶುರುವಾಗಿದೆ.
ಸಾಕ್ಷ್ಯಕ್ಕಾಗಿ ಇ.ಡಿ ಪರದಾಟ
ರಾಗಿಣಿ ಹಾಗೂ ಸಂಜನಾ ಮನೆ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ ಸಂದರ್ಭದಲ್ಲಿ ಸಣ್ಣ ಸಿಗರೇಟ್ ತುಂಡೂ ಸಹ ಸಿಕ್ಕಿಲ್ಲ. ಸಿಸಿಬಿ ಪೊಲೀಸರು ರವಿಶಂಕರ್​ನ್ನು ವಶಕ್ಕೆ ಪಡೆಯುತ್ತಿದ್ದಂತೆ ಈತನ ಸಂಪರ್ಕದಲ್ಲಿದ್ದ ಎಲ್ಲರೂ ಎಚ್ಚೆತ್ತುಕೊಂಡಿದ್ದರೆಂಬುದನ್ನು ಸಿಸಿಬಿ ಪೊಲೀಸರು ಇಡಿ ಅಧಿಕಾರಿಗಳಿಗೆ ತಿಳಿಸಿದ್ದಾರೆ. ರಾಗಿಣಿ ಹಾಗೂ ಸಂಜನಾ ಇಡಿ ಅಧಿಕಾರಿಗಳಿಗೆ ಸಣ್ಣ ಸುಳಿವನ್ನೂ ಕೊಟ್ಟಿಲ್ಲ. ಡ್ರಗ್ಸ್ ಜಾಲದ ಬಗ್ಗೆಯೂ ಗೊತ್ತಿಲ್ಲ. ಇದರಲ್ಲಿ ನಡೆದ ಅಕ್ರಮ ಹಣಕಾಸು ವಹಿವಾಟಿನ ಬಗ್ಗೆಯೂ ತಿಳಿದಿಲ್ಲ ಎಂಬುದಾಗಿ ಹೇಳಿದ್ದಾರೆಂದು ಇಡಿ ತನಿಖಾಧಿಕಾರಿಗಳು ತಿಳಿಸಿದ್ದಾರೆ. ಇದೀಗ ಆರೋಪಿಗಳ ಅಕ್ರಮದ ಬಗ್ಗೆ ಸಾಕ್ಷ್ಯ ಕಲೆ ಹಾಕುವುದು ಇಡಿಗೆ ದೊಡ್ಡ ಸವಾಲಾಗಿದೆ.
ಡ್ರಗ್ಸ್ ಕಿಂಗ್​ಪಿನ್ ವಿರೇನ್ ಖನ್ನಾ, ಆರ್​ಟಿಒ ಎಸ್​ಡಿಎ ರವಿಶಂಕರ್, ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾಣಿ, ಸೆನೆಗಲ್ ದೇಶದ ಲೂಮ್ ಪೆಪ್ಪರ್, ಪ್ರಕರಣದ ಮೊದಲನೇ ಆರೋಪಿ ಶಿವಪ್ರಕಾಶ್ ಸೇರಿ ಇನ್ನಿತರ ಆರೋಪಿಗಳ ಬಳಿ ಕೋಟ್ಯಂತರ ರೂ. ಮೌಲ್ಯದ ಆಸ್ತಿ ಇರುವುದು ಪ್ರಾಥಮಿಕ ತನಿಖೆಯಲ್ಲಿ ದೃಢಪಟ್ಟಿದೆ. ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹಾಗೂ ತೆರಿಗೆ ವಂಚಿಸಿರುವ ಶಂಕೆ ವ್ಯಕ್ತವಾಗಿದೆ.
ಇ.ಡಿ. ಪತ್ರದ ಮೇರೆಗೆ ಪರಿಶೀಲನೆ ಆರಂಭಿಸಿರುವ ಐಟಿ ಅಧಿಕಾರಿಗಳು ಮಾಹಿತಿ ಕಲೆಹಾಕಿದ ಬಳಿಕ ದಾಳಿ ನಡೆಸಿ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಸಾಧ್ಯತೆ ಇದೆ. ಒಂದೊಮ್ಮೆ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವುದು ದೃಢಪಟ್ಟರೆ ಡ್ರಗ್ಸ್ ಮಾಫಿಯಾದ ಜತೆಗೆ ತೆರಿಗೆ ವಂಚನೆ ಆರೋಪದಲ್ಲೂ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸದ್ಯದಲ್ಲೇ ದಾಳಿ ಸಾಧ್ಯತೆಡ್ರಗ್ಸ್ ಪೆಡ್ಲರ್​ಗಳ ಅಕ್ರಮ ಆಸ್ತಿ ಬಗ್ಗೆ ಐಟಿ ಹಾಗೂ ಇ.ಡಿ ಕಣ್ಣಿಟ್ಟಿದ್ದು, ಸದ್ಯದಲ್ಲೇ ದಾಳಿ ನಡೆಯುವ ಸಾಧ್ಯತೆಗಳಿವೆ. ಡ್ರಗ್ಸ್ ಪೆಡ್ಲರ್​ಗಳು ಹೊಂದಿರುವ ಕೋಟ್ಯಂತರ ರೂ. ಆಸ್ತಿಗೆ ಸೂಕ್ತ ದಾಖಲೆಗಳಿವೆಯೇ ಎಂಬ ಆಯಾಮದಲ್ಲಿ ತನಿಖೆ ನಡೆಯುತ್ತಿದೆ. ಡ್ರಗ್ಸ್ ಜಾಲದಲ್ಲಿ ಸಿಕ್ಕಿಬಿದ್ದವರಿಗೆ ಸಿಸಿಬಿಯಿಂದ ಪಾರಾದರೂ ಇಡಿ, ಐಟಿ ಸಂಕಷ್ಟ ಎದುರಾಗಲಿದೆ.
ಕ್ರಿಕೆಟ್​ನಲ್ಲೂ ಹಣ ಹೂಡಿಕೆಶಾಸಕ ಜಮೀರ್ ಅಹಮದ್ ಆಪ್ತ, ಶಿವಾಜಿನಗರದ ನಿವಾಸಿ ಶೇಖ್ ಪಾಝೀಲ್ ಶ್ರೀಲಂಕಾ, ದುಬೈನಲ್ಲಿ ಕ್ಯಾಸಿನೋದ ಮೇಲ್ವಿಚಾರಕನಾಗಿದ್ದ. ಸ್ಯಾಂಡಲ್​ವುಡ್, ಬಾಲಿವುಡ್, ಟಾಲಿವುಡ್ ನಟರ ಒಡನಾಟ ಹೊಂದಿದ್ದ. ಯುಬಿಸಿಟಿ ಮುಂಭಾಗದ ಅಪಾರ್ಟ್​ವೆುಂಟ್​ನ ಫ್ಲಾ್ಯಟ್​ನಲ್ಲಿ ಪಾರ್ಟಿ ನಡೆಸುತ್ತಿದ್ದ. ಡ್ರಗ್ಸ್ ಪೂರೈಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ. ಈತ ಕರ್ನಾಟಕ ಟಸ್ಕರ್ಸ್ ತಂಡದಲ್ಲಿ ಕೋಟ್ಯಂತರ ರೂ. ಹೂಡಿಕೆ ಮಾಡಿರುವುದು ತಿಳಿದು ಬಂದಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × one =
Remember me
