ಬೆಂಗಳೂರು:ಭೂಗತ ಲೋಕದ ಮಾಜಿ ಡಾನ್​ ದಿ. ಮುತ್ತಪ್ಪ ರೈ ಅವರ ಪುತ್ರ ರಿಕ್ಕಿರೈ ಇಂದು(ಬುಧವಾರ) ಬೆಳಗ್ಗೆ ಸಿಸಿಬಿ ಕಚೇರಿಗೆ ಹಾಜರಾದರು.
ಮಂಗಳವಾರ ಬೆಳಗ್ಗೆ 6.30ಕ್ಕೆ ಸರ್ಚ್ ವಾರೆಂಟ್​ನೊಂದಿಗೆ ಬಿಡದಿಗೆ ಬಂದ 20ಕ್ಕೂ ಹೆಚ್ಚು ಸಿಸಿಬಿ ಸಿಬ್ಬಂದಿ, ಸತತ 8 ತಾಸು ಮುತ್ತಪ್ಪ ರೈ ಮನೆಯವರನ್ನು ವಿಚಾರಣೆಗೆ ಒಳಪಡಿಸಿದ್ದರು. ಬೆಂಗಳೂರಿನ ಸದಾಶಿವನಗರ ಮನೆ ಮೇಲೂ ಸಿಸಿಬಿ ರೇಡ್​ ಆಗಿತ್ತು. ದಾಳಿ ವೇಳೆ ರಿಕ್ಕಿ ರೈ ಮೊಬೈಲ್, ಲ್ಯಾಪ್​ಟಾಪ್ ಹಾಗೂ ಕೆಲ ದಾಖಲಾತಿಗಳನ್ನ ಜಪ್ತಿ ಮಾಡಲಾಗಿದೆ. ಇಂದು ವಿಚಾರಣೆಗೆ ಹಾಜರ್​ ಆಗುವಂತೆ ನಿನ್ನೆಯೇ ರಿಕ್ಕಿ ರೈಗೆ ಸಿಸಿಬಿ ನೋಟಿಸ್​ ಜಾರಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ತನ್ನ ವಕೀಲರೊಂದಿಗೆ ಸಿಸಿಬಿ ಕಚೇರಿಗೆ ರಿಕ್ಕಿ ರೈ ಆಗಮಿಸಿದ್ದಾರೆ.
ರಿಕ್ಕಿ ರೈ ಡ್ರಗ್ಸ್ ಜಾಲದ ನಂಟು ಹೊಂದಿದ್ದಾರೆ ಎಂಬ ಶಂಕೆ ಇದೆ. ಡ್ರಗ್ಸ್​ ಕೇಸ್​ನ ಪ್ರಮುಖ ಆರೋಪಿಗಳಾದ ಆದಿತ್ಯ ಆಳ್ವ ಮತ್ತು ವಿರೇನ್ ಖನ್ನಾರೊಂದಿಗೆ ರಿಕ್ಕಿ ರೈಗೆ ನಿಕಟ ಸಂಪರ್ಕವಿದೆ ಎನ್ನಲಾಗಿದ್ದು, ಇದೇ ಕಾರಣಕ್ಕೆ ಸಿಸಿಬಿ ದಾಳಿ ನಡೆಸಿತ್ತು. ಈ ದಾಳಿ ನಡೆದಿದೆ. ಎಸಿಪಿ ವೇಣುಗೋಪಾಲ್ ನೇತೃತ್ವದಲ್ಲಿ ರಿಕ್ಕಿ ರೈ ವಿಚಾರಣೆ ನಡೆಯುತ್ತಿದೆ.
ಮುತ್ತಪ್ಪ ರೈ ಮನೆಗೆ ಇಂದು ಬೆಳಗ್ಗೆಯೇ ದಾಳಿ ನಡೆಸಿದ್ದ ಸಿಸಿಬಿ ಪೊಲೀಸರು: ಮಾಹಿತಿ ಏನಾದ್ರೂ ಸಿಕ್ತಾ?

ನನ್ನ ಮಗನನ್ನು ಅವರ ಮನೆಯಲ್ಲೇ ಕೂರಿಸಿಕೊಳ್ಳಲಿ… ನಮಗೆ ಊಟ ಕೊಟ್ಟರೆ ಸಾಕೆಂದ ಡಿಕೆಶಿ ತಾಯಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × three =
Remember me
