ಬೆಂಗಳೂರು:ಡ್ರಗ್ಸ್ ಕೇಸ್​ನಲ್ಲಿ ಶಾಸಕ ಜಮೀರ್ ಅಹ್ಮದ್ ಹೆಸರು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್​ ನಾಯಕರಿಗೆ ಟೆನ್ಷನ್​ ಶುರುವಾಗಿದೆ.ಗಾಂಧಿ ಭವನ ರಸ್ತೆಯಲ್ಲಿ ಇರುವ ತಮ್ಮ ನಿವಾಸಕ್ಕೆ ಜಮೀರ್​ರನ್ನು ಕರೆಸಿಕೊಂಡ ಸಿದ್ದರಾಮಯ್ಯ, ‘ಏನಪ್ಪ ಜಮೀರ್ ನಿನ್ನ ಹೆಸರು ಮೀಡಿಯಾದಲ್ಲಿ ಬರ್ತಿದೆ. ಪ್ರತಿ ಬಾರಿಯೂ ನಿನ್ನ ಹೆಸರು ಬರುತ್ತೆ’ ಎಂದು ಪಶ್ನಿಸಿದ್ದಾರೆ.
‘ಈ ಹಿಂದೆ ಪಾದರಾಯನಪುರ, ಡಿಜೆ ಹಳ್ಳಿ ಗಲಭೆಯಲ್ಲೂ ನಿನ್ನ ಹೆಸರು ಕೇಳಿಬಂತು. ಇದೀಗ ಡ್ರಗ್ಸ್ ಕೇಸ್​ನಲ್ಲೂ ನಿನ್ನದೇ ಹೆಸರು ಬರ್ತಿದೆ’ ಎಂದ ಸಿದ್ದರಾಮಯ್ಯ, ಸಾಮಾಜಿಕ ಕಾರ್ಯಕರ್ತ ಪ್ರಶಾಂತ್​ ಸಂಬರಗಿ ಮಾಡಿರುವ ಆರೋಪದ ಬಗ್ಗೆ ಪ್ರಸ್ತಾಪಿಸಿದರು.ಇದನ್ನೂ ಓದಿರಿಅಖಂಡ ಶ್ರೀನಿವಾಸಮೂರ್ತಿ ಮನೆಗೆ ಮೊದಲು ಬೆಂಕಿ ಇಟ್ಟವ ಪೊಲೀಸರಿಗೆ ಸಿಕ್ಕಿಬಿದ್ದದ್ದೇ ರೋಚಕ!
ಇದಕ್ಕೆ ಪ್ರತಿಕ್ರಿಯಿಸಿದ ಜಮೀರ್​, ‘ಆರೋಪ ಮಾಡುತ್ತಿರುವ ವ್ಯಕ್ತಿಯೂ ಗೊತ್ತಿಲ್ಲ. ಆ ಸಂಜನಾ ಕೂಡ ನನಗೆ ಗೊತ್ತಿಲ್ಲ ಸರ್. ಆದರೂ ನನ್ನನ್ನೇ ಟಾರ್ಗೆಟ್ ಮಾಡಿದ್ದಾರೆ. ಈ ಸಂಬಂಧ ಪ್ರಶಾಂತ್​ ಸಂಬರಗಿ ವಿರುದ್ಧ ಕ್ರಿಮಿನಲ್ ಒಳಸಂಚು, ಉದ್ದೇಶಪೂರ್ವಕವಾಗಿ ಅಪಮಾನ, ನಕಲಿ ದಾಖಲೆ ಸೃಷ್ಟಿ, ಉದ್ದೇಶ ಪೂರ್ವಕವಾಗಿ ದುಷ್ಕೃತ್ಯ ಎಸಗಿರುವ ಬಗ್ಗೆ ಕೇಸ್​ ದಾಖಲಿಸಿಸುವೆ’ ಎಂದು ವಿವರಿಸಿದರು.
ಡ್ರಗ್ಸ್​ ಮಾಫಿಯಾದಲ್ಲಿ ಸಿನಿಮಾ ನಟ-ನಟಿಯರು ಮಾತ್ರವಲ್ಲ ಕೆಲ ರಾಜಕಾರಣಿಗಳ ಕುಟುಂಬಸ್ಥರ ಕೈವಾಡ ಇರುವುದು ಬೆಳಕಿಗೆ ಬರುತ್ತಿದೆ. ಬಿಬಿಎಂಪಿ ಕಾಂಗ್ರೆಸ್ ಕಾರ್ಪೋರೇಟರ್​ವೊಬ್ಬರ ಪುತ್ರನ ಹೆಸರು ಡ್ರಗ್ಸ್ ದಂಧೆಯಲ್ಲಿ ಕೇಳಿಬಂದಿದ್ದು, ಪಕ್ಷಕ್ಕೆ ಡ್ಯಾಮೇಜ್ ಆಗುವ ಭೀತಿ ಕೆಪಿಸಿಸಿಗೆ ಎದುರಾಗಿದೆ. ಈ ನಡುವೆ ಜಮೀರ್​ ಹೆಸರು ಪ್ರಸ್ತಾಪ ಆಗುತ್ತಿರುವುದು ಕಾಂಗ್ರೆಸ್​ಗೆ ತಲೆಬಿಸಿ ಮಾಡಿದೆ.
ಮೂರ್ನಾಲ್ಕು ದಿನದ ಹಿಂದೆಯೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಪಕ್ಷಕ್ಕೆ ಡ್ಯಾಮೇಜ್​ ತರುವವರ ವಿಚಾರದಲ್ಲಿ ನಾವು ರಾಜಿ ಮಾಡಿಕೊಳ್ಳುವುದಿಲ್ಲ. ಸಮಸ್ಯೆ ಆಗದಂತೆ ಎಚ್ಚೆತ್ತುಕೊಳ್ಳಿ ಎಂದು ಬೆಂಗಳೂರು ಕಾಂಗ್ರೆಸ್​ ನಾಯಕರಿಗೆ ಎಚ್ಚರಿಕೆ ನೀಡಿದ್ದರು.
ರಾಜ್ಯ ಸರ್ಕಾರಕ್ಕೆ ಬಂಪರ್​ ಆಫರ್​ ಕೊಟ್ಟ ಶಾಸಕ ಜಮೀರ್​

https://www.vijayavani.net/sanjana-galrani-marriage-photo-viral/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + seventeen =
Remember me
