ಬೆಂಗಳೂರು:ಕ್ರಿಕೆಟ್​ ಬೆಟ್ಟಿಂಗ್​ ಮತ್ತು ಡ್ರಗ್ಸ್​ ಮಾಫಿಯಾ ಹಣ ಬಳಸಿ ಮೈತ್ರಿ ಸರ್ಕಾರ ಪತನ ಮಾಡಲಾಯಿತು ಎಂದು ಆರೋಪಿಸಿದ್ದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಬಿಜೆಪಿ ಸಚಿವರು ಒಬ್ಬರಾದ ಮೇಲೆ ಒಬ್ಬರಂತೆ ಮುಗಿಬಿದ್ದಿದ್ದಾರೆ.
ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್​ ಹಾಗೂ ಕುಮಾರಸ್ವಾಮಿ ನಡುವೆ ಸೋಮವಾರ ಟ್ವೀಟ್​ ಮೂಲಕ ಮಾತಿನ ಸಮರ ನಡೆದಿತ್ತು. ಇದರ ಬೆನ್ನಲ್ಲೇ “ಕುಮಾರಸ್ವಾಮಿ ಅವರು ಸಹಜ ಸ್ಥಿತಿಯಲ್ಲಿ ಹೇಳಿಕೆ ನೀಡಿದ್ದಾರೋ ಅಥವಾ ಮತ್ತಿನಲ್ಲಿ ಹೇಳಿಕೆ ನೀಡಿದ್ದಾರೋ ತಿಳಿಯುತ್ತಿಲ್ಲ’ ಎಂದು ಸಚಿವ ಸಿ.ಟಿ.ರವಿ ಲೇವಡಿ ಮಾಡಿದ್ದಾರೆ.ಇದನ್ನೂ ಓದಿರಿಕೆಪಿಸಿಸಿ ಕಚೇರಿಗೆ ಅರಮನೆ ಟಚ್​, ವಾಸ್ತುದೋಷ ರಿಪೇರಿಗೆ ಬಾಗಿಲನ್ನೇ ಬದಲಿಸಿದ ಡಿಕೆಶಿ
ಡ್ರಗ್ಸ್​ ಮಾಫಿಯಾದಿಂದ ಮೈತ್ರಿ ಸರ್ಕಾರ ಪತನವಾಯಿತು ಎಂಬ ಆರೋಪಕ್ಕೆ ಮಂಗಳವಾರ ತಿರುಗೇಟು ಕೊಟ್ಟಿರುವ ಸಿ.ಟಿ.ರವಿ, ‘ಕುಮಾರಸ್ವಾಮಿ ಸರ್ಕಾರಪತನಗೊಳ್ಳಲು ಅವರ ಸಹವರ್ತಿಗಳೇ ಕಾರಣ. ಅವರದ್ದೇ ಪಕ್ಷದ ರಾಜ್ಯಾಧ್ಯಕ್ಷರೇ ರಾಜೀನಾಮೆ ಕೊಟ್ಟು ಹೊರಗೆ ಬಂದರು. ಹಾಗೆ ಬರಲು ಕಾರಣವೇನು? ಎಂಬುದನ್ನೂ ಅವರೇ ವಿವರಿಸಿದ್ದಾರೆ. ಆದರೂ ಬಿಜೆಪಿ ವಿರುದ್ಧ ಈ ರೀತಿ ಹೇಳಿದ್ದಾರೆಂದರೆ ಕುಮಾರಸ್ವಾಮಿಯನ್ನು ಒಮ್ಮೆ ಪರೀಕ್ಷೆಗೆ ಒಳಪಡಿಸಬೇಕು’ ಎಂದು ಲೇವಡಿ ಮಾಡಿದರು.
‘ಮೈತ್ರಿ ಸರ್ಕಾರ ಯಾಕೆ ಬಿತ್ತು ಎನ್ನುವುದು ಎಲ್ಲರಿಗೂ ಗೊತ್ತಿದೆ’ ಎಂದು ಟಾಂಗ್​ ಕೊಟ್ಟ ಸಿಟಿ ರವಿ, ‘ನಮ್ಮ ಸರ್ಕಾರದ ಮೇಲೆ ಡ್ರಗ್ಸ್​ ಆರೋಪ ಮಾಡುತ್ತಿರುವ ನಿಮ್ಮ ಬಳಿಯೇ ಅಧಿಕಾರ ಇತ್ತು. ಗುಪ್ತಚರ ಇಲಾಖೆ ಇತ್ತು. ಹಾಗಾದರೆ ನೀವು ಅಷ್ಟು ದುರ್ಬಲರಾಗಿದ್ದೀರಾ? ಅಥವಾ ನಿಮಗೆ ಡ್ರಗ್ಸ್ ಮಾಫಿಯಾದವರ ಒತ್ತಡ ಇತ್ತೆ? ಆಂತರಿಕ ಬಾಂಧವ್ಯ ಇತ್ತೆ? ನೀವು ಸಿಎಂ ಆಗಿದ್ದವರು ಹೀಗೆಲ್ಲ ಮಾತನಾಡಿ ನಗೆಪಾಟಲಿಗೆ ಈಡಾಗಬೇಡಿ. ನಮಗೆ ಜೆಡಿಎಸ್​ ಮೇಲೆ ಗೌರವವಿದೆ’ ಎಂದು ವಾಗ್ದಾಳಿ ನಡೆಸಿದರು.
ಸಚಿವ ಸಿ.ಟಿ.ರವಿಗೆ ಖಡಕ್​ ವಾರ್ನಿಂಗ್ ಕೊಟ್ಟ ಎಚ್​ಡಿಕೆ !

ರಂಗೇರೇತ್ತಿದೆ ಹಳ್ಳಿ ಫೈಟ್​, ಗ್ರಾಪಂ ಚುನಾವಣೆ ಯಾವಾಗ ಗೊತ್ತಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + 20 =
Remember me
