ಬೆಂಗಳೂರು:ಎನ್​ಸಿಬಿ (ಮಾದಕವಸ್ತು ನಿಯಂತ್ರಣ ಸಂಸ್ಥೆ) ಬಲೆಗೆ ಬಿದ್ದಿದ್ದ ಡ್ರಗ್ಸ್ ಜಾಲದ ಕಿಂಗ್​ಪಿನ್ ಅನಿಕಾಳನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದ್ದು, ಅಧಿಕಾರಿಗಳ ಮುಂದೆ ಸ್ಯಾಂಡಲ್​ವುಡ್ ನಟ-ನಟಿಯರು ಮತ್ತು ಮ್ಯೂಸಿಷಿಯನ್​ಗಳೇ ತನ್ನ ಗಿರಾಕಿಗಳು ಎಂದು ಬಾಯ್ಬಿಟ್ಟಿದ್ದಾಳೆ.
ಡ್ರಗ್ಸ್ ಜಾಲದ ಎ1 ಆರೋಪಿ ಅನಿಕಾಗೆ ಮೂರು ಹೆಸರು ಇವೆ. ಆ ಹೆಸರೇ ಅನಿಕಾ ಡಿ, ಅನಿ, ಬಿ ಮನಿ. ನೋಡೋಕೆ ಮಧ್ಯವಯಸ್ಕಳಂತೆ ಕಂಡರೂ ಆಕೆಯ ವಯಸ್ಸು 24 ವರ್ಷ. ಅನಿಕಾ ತಮಿಳುನಾಡಿನ ಸೇಲಂ ಸಮೀಪದ ಯರ್ಕಾಡ್ ಮೂಲದವಳು. ಇವಳ ತಂದೆ ದಿನೇಶ್ ಅವರಿಗೆ ಮೂವರು ಮಕ್ಕಳಿದ್ದು, ಈಕೆಯೇ ದೊಡ್ಡವಳು. ಒಬ್ಬಳು ತಂಗಿ, ಒಬ್ಬ ತಮ್ಮನಿದ್ದು, ತಮಿಳುನಾಡಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಯರ್ಕಾಡ್​ ಶೆವ್ರಾಯ್ಸ್ ಕಾಲೇಜಿನಲ್ಲಿ ಹೋಟೆಲ್ ಮ್ಯಾನೇಜ್​ಮೆಂಟ್ ಪದವಿ ಓದುತ್ತಿದ್ದ ಈಕೆ ಎರಡನೇ ವರ್ಷದಲ್ಲಿ ಫೇಲ್ ಆಗಿ ಡಿಸ್ಕಂಟಿನ್ಯೂ ಮಾಡಿಕೊಂಡಿದ್ದಾಳೆ. ಮೊದಲು ಕೆಲಸ ಅರಸಿ ಬೆಂಗಳೂರಿಗೆ ಬಂದಿದ್ದಳು, ಆ ಬಳಿಕ ಡ್ರಗ್ಸ್ ಜಾಲಕ್ಕೆ ಸೇರಿದ್ದು, ಇದೀಗ ಸಿಕ್ಕಿಬಿದ್ದಿದ್ದಾಳೆ. ಸ್ಯಾಂಡಲ್​ವುಡ್​ನ ಕೆಲ ನಟ-ನಟಿಯರಿಗೆ ಡ್ರಗ್ಸ್​ ಸಪ್ಲೈ ಮಾಡುತ್ತಿದ್ದ ಅನಿಕಾಳಿಗೆ ಆ ಡ್ರಗ್ಸ್​ ಎಲ್ಲಿಂದ ಬರುತ್ತಿತ್ತು ಗೊತ್ತಾ? ಆ ಬಗ್ಗೆ ಇಲ್ಲಿದೆ ಡಿಟೇಲ್ಸ್ ನೋಡಿ.
ಇದನ್ನೂ ಓದಿರಿಇತ್ತೀಚೆಗೆ ಮೃತಪಟ್ಟ ಯುವನಟನ ಶವಪರೀಕ್ಷೆ ಯಾಕೆ ಮಾಡ್ಲಿಲ್ಲ?: ಸ್ಯಾಂಡಲ್ವುಡ್​ ರಹಸ್ಯ ಬಿಚ್ಚಿಟ್ಟ ಇಂದ್ರಜಿತ್​!
ಬೆಂಗಳೂರಿನ ದೊಡ್ಡಗುಬ್ಬಿಯ ಐಶ್ವರ್ಯಾ ನಿಲಯದಲ್ಲಿ ವಾಸವಿದ್ದ ಡ್ರಗ್ಸ್​ ಜಾಲದ ಕಿಂಗ್​ಪಿನ್​ ಅನಿಕಾಳನ್ನು ಆ.21ರ ಸಂಜೆ ಎನ್​ಸಿಬಿ ವಶಕ್ಕೆ ಪಡೆದಿತ್ತು. ಪಾರ್ಟಿ ಮುಗಿಸಿ ಸಾದಹಳ್ಳಿ ಗೇಟ್ ಬಳಿ‌ ಬಂದಿದ್ದ ಅನಿಕಾ, ತನ್ನ ಸ್ನೇಹಿತೆಗಾಗಿ ಕಾಯುತ್ತ ನಿಂತಿದ್ದಳು. ಅಲ್ಲೇ ಅನಿಕಾಳನ್ನು ಸುತ್ತುವರೆದ ಎನ್​ಸಿಬಿ ಅಧಿಕಾರಿಗಳು, ಆಕೆಯನ್ನು ವಶಕ್ಕೆ ಪಡೆದು ಅವಳ ಮನೆಯನ್ನು ತಪಾಸಣೆ ಮಾಡಿದಾಗ ಅಲ್ಲಿ ಮಾದಕ ವಸ್ತು MDMA ಮಾತ್ರೆಗಳು ಪತ್ತೆಯಾಗಿತ್ತು.
ಎನ್​ಸಿಬಿ ಮುಂದೆ ಅನಿಕಾ ಬಾಯ್ಬಿಟ್ಟ ಮಾಹಿತಿ ಪ್ರಕಾರ ಡ್ರಗ್ಸ್​ ಜಾಲದಲ್ಲಿ ‌ನೈಜೀರಿಯಾ ಪ್ರಜೆಗಳ ಕೈವಾಡ ಇರೋದು ಕನ್ಫರ್ಮ್ ಆಗಿದೆ. ನೈಜೀರಿಯಾದ ಡ್ರಗ್ಸ್ ಪೆಡ್ಲರ್ ಟಮ್ ಟಮ್ ಎಂಬಾತ ಅನಿಕಾಗೆ ಡ್ರಗ್ಸ್​ ಸಪ್ಲೈ ಮಾಡುತ್ತಿದ್ದ. ಆತನಿಂದ ಅನಿಕಾ ಇತ್ತೀಚಿಗೆ 250 MDMA ಮಾತ್ರೆಗಳನ್ನು ಖರೀದಿಸಿದ್ದಳು. ಒಂದು ಮಾತ್ರೆಗೆ 550 ರೂಪಾಯಿ ರೇಟ್ ಕೊಟ್ಟು ಖರೀದಿ ಮಾಡಿದ್ದಾಗಿ ಹಾಗೂ ಆತ ಡಾರ್ಕ್ ವೆಬ್ ಮೂಲಕ ವಿದೇಶದಿಂದ ತರಿಸಿಕೊಳ್ತಿದ್ದ ಎಂದು ವಿಚಾರಣೆಯಲ್ಲಿ ತಿಳಿಸಿದ್ದಾಳೆ. ಅಲ್ಲದೆ, ಈ ಬಗ್ಗೆ ಟಮ್ ಟಮ್ ಬಳಿ ಚಾಟ್ ಮಾಡಿರುವ ಎವಿಡೆನ್ಸ್ ಅನ್ನೂ ಎನ್​ಸಿಬಿ ಸೀಜ್ ಮಾಡಿದೆ.
ಸದ್ಯ ಅನಿಕಾಳ ವಿರುದ್ಧ ಎನ್​ಸಿಬಿ‌ ಅಧಿಕಾರಿಗಳು NDPS Act ಸೆಕ್ಷನ್ 22, 27(a), 28,29 ಮತ್ತು R/W ಸೆಕ್ಷನ್ 8 ರ ಅಡಿ ಕೇಸ್ ಹಾಕಿದ್ದಾರೆ.
ಬ್ರೇಕಿಂಗ್ ನ್ಯೂಸ್: ‘ಅಪಘಾತದ ವೇಳೆ ನಟಿ ಶರ್ಮಿಳಾ ಮಾಂಡ್ರೆ ಪಕ್ಕದಲ್ಲೇ ಕುಳಿತ್ತಿದ್ದ ಡ್ರಗ್ಸ್ ಪೆಡ್ಲರ್’

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 5 =
Remember me
