ಬೆಂಗಳೂರು:ಡ್ರಗ್ಸ್​ ಜಾಲದ ಕಿಂಗ್​ಪಿನ್​ ಅನಿಕಾ ಎನ್​ಸಿಬಿ ಬಲೆಗೆ ಬೀಳುತ್ತಿದ್ದಂತೆ ಸ್ಫೋಟಕ ರಹಸ್ಯ ಹೊರಬಿದ್ದಿದೆ. ಡ್ರಗ್ಸ್​ ದಂಧೆ ಹೇಗಿತ್ತು? ಕೋಡ್​ವರ್ಡ್​ ಏನು? ಕೂತಲ್ಲೇ ಹೇಗೆಲ್ಲ ವ್ಯವಹಾರ ಕುದುರಿಸುತ್ತಿದ್ದಳು? ಎಂಬುದರ ಬಗ್ಗೆ ಸ್ವತಃ ಎ1 ಆರೋಪಿ ಅನಿಕಾಳೇ ಬಾಯ್ಬಿಟ್ಟಿದ್ದಾಳೆ.
ಅನಿಕಾಗಳ ಡ್ರಗ್ಸ್ ದಂಧೆಯ ಕೋಡ್ ನೇಮ್ “ಬಿಮನಿ”. ಇದೇ ಹೆಸರು ಅವಳ ನಂಬರ್​ನ ಐಡಿ ನೇಮ್ ಕೂಡ ಆಗಿತ್ತು. ಇವಳ ಸೋಷಿಯಲ್​ ಮಿಡೀಯಾ ಅಕೌಂಟ್ ನೇಮ್ ಕೂಡ ‘B Money’. ಸೋಷಿಯಲ್ ಮೀಡಿಯಾ ಆ್ಯಪ್​ ಮೂಲಕ ದಂಧೆ ನಡೆಸುತ್ತಿದ್ದ ಅನಿಕಾ, ಅದಕ್ಕಾಗಿ ವಾಟ್ಸ್ಆ್ಯಪ್​ ಮತ್ತು ಟೆಲಿಗ್ರಾಮ್ ಆ್ಯಪ್ ಬಳಸುತ್ತಿದ್ದಳು. ಈ ಆ್ಯಪ್​ಗಳ ಮೂಲಕವೇ ಕಸ್ಟಮರ್​ಗಳನ್ನು ಸಂಪರ್ಕಿಸುತ್ತಿದ್ದಳು. ಈಕೆ ಮಾರಾಟ ಮಾಡುತ್ತಿದ್ದ ಮಾದಕ ವಸ್ತು MDMA ಮತ್ತು LSDಗೆ ಪ್ರತ್ಯೇಕ ಹೆಸರನ್ನೂ ಇಟ್ಟಿದ್ದಳು. ಪಿಂಕ್ ಬಣ್ಣದ ಎಂಡಿಎಂಎಗೆ ‘ರೆಡ್ ಬುಲ್’, LSDಗೆ ‘ಲವ್ ಡೋಸ್’ ಎಂದು ಕೋಡ್​ ನೇಮ್​ ಇಟ್ಟು ಮಾರಾಟ ಮಾಡುತ್ತಿದ್ದಳು.
ಇದನ್ನೂ ಓದಿರಿಡ್ರಗ್ಸ್​ ಜಾಲದ ಕಿಂಗ್​ಪಿನ್​ ಅನಿಕಾ ಬಾಯ್ಬಿಟ್ಲು ಸ್ಫೋಟಕ ರಹಸ್ಯ, ಕನ್ನಡ ನಟ-ನಟಿಯರೇ ಗಿರಾಕಿಗಳು!
ವಿದ್ಯಾರ್ಥಿಗಳು, ಸ್ಯಾಂಡಲ್​ವುಡ್​ನ ಕೆಲ ನಟ-ನಟಿಯರು, ಮ್ಯೂಸಿಕ್ ಡೈರೆಕ್ಟರ್​ಗಳನ್ನು ನೇರವಾಗಿ ಭೇಟಿ ಮಾಡದೆ ಕೂತಲ್ಲೇ ವ್ಯವಹಾರ ನಡೆಸುತ್ತಿದ್ದಳು. ಇವರಿಗೆಲ್ಲ ಡ್ರಗ್ಸ್ ಸಪ್ಲೈ ಮಾಡಲು ಅನಿಕಾಗೆ ಸಾಥ್ ಕೊಟ್ಟದ್ದು ಕೊಚ್ಚಿ‌ ಮೂಲದ ಅನೂಪ್ ಮತ್ತು ಚೆನ್ನೈನ ರಿಜೇಶ್ ರವಿಚಂದ್ರನ್, ಇವರಿಬ್ಬರೂ ಅನಿಕಾಳಿಂದ ಪಡೆದ ಡ್ರಗ್ಸ್​ ಅನ್ನು ಸಾಫ್ಟ್ ಟಾಯ್ಸ್ (ಬಟ್ಟೆಯ ಬೊಂಬೆಗಳು)ನಲ್ಲಿ ಇಟ್ಟು ಕೋರಿಯರ್ ಮೂಲಕ ಕಳುಹಿಸುತ್ತಿದ್ದರು. ಇದರ ಜತಗೆ ನೇರವಾಗಿ ಪಾರ್ಟಿಗಳಿಗೆ ಮತ್ತು ಕೆಲವರ ಪಿಓ ಬಾಕ್ಸ್​ಗಳಿಗೆ ಕಳುಹಿಸುತ್ತಿದ್ದರು.
ಉದ್ಯೋಗ ಅರಸಿ ಬೆಂಗಳೂರಿಗೆ ಬಂದ ಅನಿಕಾ, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವಾಗ ನೈಜೀರಿಯಾ ಮೂಲದ ಆ್ಯಂಡಿ ಜುಂಬೋ ಎಂಬಾತ ಪರಿಚಯವಾಗಿತ್ತು. ಈತನೊಂದಿಗೆ ಸ್ನೇಹ, ಪ್ರೀತಿಗೆ ತಿರುಗಿ ಬಳಿಕ ಮದುವೆಯಾಗಿದ್ದರು. ಆ್ಯಂಡಿ ಜುಂಬೋ ವಿದೇಶದಿಂದ ಬಟ್ಟೆ ಎಕ್ಸ್​ಪೋರ್ಟ್ ಬಿಸಿನೆಸ್ ಮಾಡುತ್ತಿದ್ದ. ಈತನೂ ಡ್ರಗ್ಸ್​ ಸೇವನೆಯ ಮತ್ತಿನಲ್ಲಿ ಸ್ಥಳೀಯ ಪೊಲೀಸರ ಮೇಲೆ ಹಲ್ಲೆ ಮಾಡಿ ಜೈಲು ಸೇರಿದ್ದಾನೆ. ಈ ನಡುವೆ ಅನಿಕಾಗೆ ಅಮೀನಂ ಖಾನ್ ಮೊಹಮದ್ ಎಂಬಾತನ ಪರಿಚಯವಾಗಿದ್ದು, ಈತನ ಮೂಲಕ ಡ್ರಗ್ಸ್​ ದಂಧೆಗೆ ಇಳಿದಿದ್ದಳು.
ಸದ್ಯ ಅನಿಕಾ ಜೊತೆ ನಗರದ ವಿವಿಧ ಮೂಲೆಯ 18 ಮಂದಿ ಪೆಡ್ಲರ್​ಗಳ ಲಿಂಕ್ ಇರುವುದು ತನಿಖೆಯಲ್ಲಿ ಗೊತ್ತಾಗಿದೆ. ಅನಿಕಾಳ ಶಿಷ್ಯರಾಗಿ ರಿಜೇಶ್ ಮತ್ತು ಅನೂಪ್ ಕೆಲಸ ಮಾಡುತ್ತಿದ್ದರು. ಇವರ ಜೊತೆಗಿದ್ದ ಇನ್ನೊಬ್ಬ ಪೆಡ್ಲರ್ ಡುಗಯ್ ಡುಂಜೋ ಎಂಬಾತ ತಲೆಮರೆಸಿಕೊಂಡಿದ್ದಾನೆ.
ಬ್ರೇಕಿಂಗ್ ನ್ಯೂಸ್: ‘ಅಪಘಾತದ ವೇಳೆ ನಟಿ ಶರ್ಮಿಳಾ ಮಾಂಡ್ರೆ ಪಕ್ಕದಲ್ಲೇ ಕುಳಿತ್ತಿದ್ದ ಡ್ರಗ್ಸ್ ಪೆಡ್ಲರ್’

ಇತ್ತೀಚೆಗೆ ಮೃತಪಟ್ಟ ಯುವನಟನ ಶವಪರೀಕ್ಷೆ ಯಾಕೆ ಮಾಡ್ಲಿಲ್ಲ?: ಸ್ಯಾಂಡಲ್ವುಡ್​ ರಹಸ್ಯ ಬಿಚ್ಚಿಟ್ಟ ಇಂದ್ರಜಿತ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 6 =
Remember me
