ಬೆಂಗಳೂರು:ಡ್ರಗ್ಸ್​ ‘ಬಣ್ಣ’ದಾಟದಲ್ಲಿ ದಿನಕ್ಕೊಂದು ಸ್ಫೋಟಕ ಮಾಹಿತಿಗಳು ಬಹಿರಂಗವಾಗುತ್ತಲೇ ಇವೆ. ನಟಿ ರಾಗಿಣಿಗಾಗಿ ಆರ್​ಟಿಒ ಕಚೇರಿಯ ಎಸ್​ಡಿಎ ರವಿಶಂಕರ್​ ತನ್ನ ಹೆಂಡತಿಯನ್ನೂ ತೊರೆದಿದ್ದ ಎಂಬುದು ಸಿಸಿಬಿ ತನಿಖೆಯಲ್ಲಿ ಹೊರಬಿದ್ದಿತ್ತು. ಇದೀಗ ರಾಗಿಣಿ ಮತ್ತು ರವಿಶಂಕರ್​ ಇಬ್ಬರೂ ಒಟ್ಟಾಗಿ ಎಲ್ಲೆಲ್ಲಿ ಡ್ರಗ್ಸ್​ ಸೇವಿಸಿದ್ದರು ಎಂಬ ಬಗ್ಗೆಯೂ ಗೊತ್ತಾಗಿದೆ.
ತನ್ನ ಫ್ಯಾಮಿಲಿ ಸ್ನೇಹಿತನೂ ಆದ ಸಿನಿಮಾ ನಿರ್ಮಾಪಕ ಶಿವಪ್ರಕಾಶ್‌ ಮೂಲಕ ನಟಿ ರಾಗಿಣಿ ಪರಿಚಯ 2013ರಲ್ಲಿ ರವಿಶಂಕರ್​ಗೆ ಆಯ್ತಂತೆ. ಆ ವೇಳೆ ರಾಗಿಣಿ ಬಳಿಶಿವಪ್ರಕಾಶ್​ ವಿವಾಹ ಪ್ರಸ್ತಾಪ ಮಾಡಿದ್ದನಂತೆ. ಈ ಬಗ್ಗೆ ಉತ್ತರಿಸಲು ಸಮಯ ಕೇಳಿದ ರಾಗಿಣಿ, ಕೆಲದಿನಗಳಲ್ಲಿ ಶಿವಪ್ರಕಾಶ್‌ನಿಂದ ದೂರವಾಗಿ ರವಿಶಂಕರ್​ಗೆ ಆಪ್ತರಾದರಂತೆ. ಈ ಬಗ್ಗೆ ಸ್ವತಃ ರವಿಶಂಕರ್​ನೇ ಸಿಸಿಬಿ ತನಿಖೆಯಲ್ಲಿ ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ. ‘ನಟಿ ರಾಗಿಣಿ ಜತೆ ಸ್ನೇಹ ಬೆಳೆಯುತ್ತಿದ್ದಂತೆ ನನ್ನ ಪತ್ನಿ ನನ್ನಿಂದ ದೂರವಾದಳು. ರಾಗಿಣಿಯನ್ನು ಸುತ್ತಾಡಿಸಲು ಬಿಎಂಡಬ್ಲ್ಯು ಕಾರಿನಲ್ಲೇ ಹೋಗುತ್ತಿದೆ. ನಾವಿಬ್ಬರೂ ಒಟ್ಟಿಗೆ ಆದಿತ್ಯ ಆಳ್ವಾ ಫಾರಂ ಹೌಸ್‌ ಸೇರಿದಂತೆ ಹಲವು ಕಡೆ ಡ್ರಗ್ಸ್​ ತೆಗೆದುಕೊಂಡಿದ್ದೇವೆ’ ಎಂದು ತನಿಖೆ ವೇಳೆ ರವಿಶಂಕರ್ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.ಇದನ್ನೂ ಓದಿರಿಡೋಪಿಂಗ್​ ಟೆಸ್ಟ್​ಗೆ ಯೂರಿನ್​ ಕೇಳಿದ್ರೆ ರಾಗಿಣಿ ಕೊಟ್ಟದ್ದು ಮಾತ್ರ ಬೇರೇನೋ…
​‘ಶಿವಕುಮಾರ್​ರಿಂದ ದೂರವಾದ ರಾಗಿಣಿ ಮತ್ತು ನನ್ನ ನಡುವೆ ಗಾಢ ಸ್ನೇಹವಾಯಿತು. ಈ ವಿಚಾರ ಗೊತ್ತಾಗಿ ನನ್ನ ಪತ್ನಿ ನನ್ನೊಂದಿಗೆ ಗಲಾಟೆ ಮಾಡಿದ್ದಳು. ವಿಷಯ ತಿಳಿದ ರಾಗಿಣಿಯೂ, ಕೌಟುಂಬಿಕ ಸಮಸ್ಯೆ ಬಗೆಹರಿಸಿಕೊಳ್ಳಲು ನನಗೆ ಹೇಳಿದ್ದಳು. ಕೊನೆಗೆ ನಾನು ವಿವಾಹ ವಿಚ್ಛೇದನ ಪಡೆದೆ. ನನ್ನ ಸ್ನೇಹಿತ, ಕ್ಲಬ್‌ ಮಾಲೀಕ ಶ್ರೇಯಸ್‌ ಪಾಟೀಲ್‌ನ ಬಿಎಂಡಬ್ಲ್ಯು ಕಾರಿನಲ್ಲಿ ರಾಗಿಣಿಯನ್ನು ಹೋಟೆಲ್‌ಗೆ ಕರೆದೊಯ್ಯುತ್ತಿದ್ದೆ’ ಎಂದೂ ರವಿಶಂಕರ್ ಹೇಳಿದ್ದಾನೆ. ಹೀಗೆ ಸಿಸಿಬಿ ವಿಚಾರಣೆಯಲ್ಲಿ ರಾಗಿಣಿ ಆಪ್ತ ರವಿಶಂಕರ್​, ‘ಮಾದಕ’ ನಟಿಯ ನಂಟು, ಡ್ರಗ್ಸ್‌ ಪಾರ್ಟಿ, ಕೌಟುಂಬಿಕ ಕಲಹದ ಬಗ್ಗೆ ಮಹತ್ತರ ಮಾಹಿತಿಯನ್ನು ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ.
ಡ್ರಗ್ಸ್​ ಕೇಸ್​ನಲ್ಲಿ ಸಿಸಿಬಿ ಪೊಲೀಸರಿಗೆ ಸಿಕ್ಕಿಬಿದ್ದಿರುವ ರವಿಶಂಕರ್​, ಸರ್ಕಾರಿ ಕೆಲಸದಿಂದ ಅಮಾನತಿಗೂ ಒಳಗಾಗಿದ್ದಾನೆ.
ಐಂದ್ರಿತಾ ರೇ-ದಿಗಂತ್​ಗೆ ಸಿಸಿಬಿ ನೋಟಿಸ್

ಡ್ರಗ್ಸ್ ಆರೋಪಿ ಆದಿತ್ಯ ಆಳ್ವನ ‘ಹೌಸ್​ ಆಫ್​ ಲೈಫ್’ ನೋಡಿದ್ರೆ ಬೆಚ್ಚಿಬೀಳ್ತೀರಿ!

‘ಪ್ರಶಾಂತ್​ ಸಂಬರಗಿ ನನ್ನ ಜತೆಗೂ ಪಾರ್ಟಿಗಳಿಗೆ ಬಂದಿದ್ದ, ಜತೆಗೊಬ್ಬ ನಟಿಯನ್ನೂ ಕರೆತರುತ್ತಿದ್ದ’

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 4 =
Remember me
