ಬೆಂಗಳೂರು :ಅಂತರಾಷ್ಟ್ರೀಯ ಮಾದಕ ವಸ್ತು ಸರಬರಾಜು ಜಾಲವೊಂದನ್ನು ಬೆಂಗಳೂರು ವಲಯದ ಎನ್.ಸಿ.ಬಿ. ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಮಾದಕ ಪದಾರ್ಥವಾದ ಹ್ಯಾಶಿಶ್​ ಆಯಿಲ್​ಅನ್ನು ಪರದೇಶಗಳಿಗೆ ಸಾಗಿಸುವ ಕೃತ್ಯದಲ್ಲಿ ತೊಡಗಿದ್ದ ಈರ್ವರನ್ನು ಬಂಧಿಸಿದ್ದಾರೆ.
ಜೂನ್ 4 ರಂದು ಕತಾರ್​ಗೆ ಕಳಿಸಲಾಗುತ್ತಿದ್ದ ಮಾದಕ ವಸ್ತುಗಳನ್ನು ಕಾರ್ಯಾಚರಣೆ ನಡೆಸಿ ಎನ್.ಸಿ.ಬಿ. ಪತ್ತೆ ಹಚ್ಚಿತ್ತು. 13 ಬ್ಯಾಕ್ ಪ್ಯಾಕ್​ಗಳಲ್ಲಿ 1.2 ಕೆ.ಜಿ ಹ್ಯಾಶಿಶ್ ಆಯಿಲ್ಅನ್ನು ವಶಪಡಿಸಿಕೊಂಡಿತ್ತು. ತನಿಖೆ ಮುಂದುವರೆಸಿದ ಎನ್​ಸಿಬಿ ಅಧಿಕಾರಿಗಳು, ಇಬ್ಬರು ಆರೋಪಿಗಳನ್ನು ಬಂಧಿಸಿದರು. ಕತಾರ್, ಮಾಲ್ಡೀವ್ಸ್, ಶ್ರೀಲಂಕಾಗೆ ಮಾದಕ ವಸ್ತುಗಳ ಸರಬರಾಜು ಮಾಡುತ್ತಿದ್ದ ಆರ್.ಖಾನ್ ಹಾಗೂ ಎಸ್.ಹುಸೈನ್ ಬಂಧಿತರು.
ಇದನ್ನೂ ಓದಿ:ದೇಶವನ್ನುದ್ದೇಶಿಸಿ ಇಂದು ಪ್ರಧಾನಿ ಮೋದಿ ಭಾಷಣ: ಜನತೆಯಲ್ಲಿ ತೀವ್ರ ಕುತೂಹಲ
ಆರೋಪಿಗಳ ಬಳಿಯಿಂದ 2.6 ಕೆಜಿ ಹ್ಯಾಶಿಶ್ ಆಯಿಲ್ ಜಪ್ತಿಪಡಿಸಿಕೊಂಡಿದ್ದು, ಎನ್.ಡಿ.ಪಿ.ಎಸ್. ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಈ ಮಾದಕ ಪದಾರ್ಥವನ್ನು ಕಾಸರಗೋಡಿನಿಂದ ಕತಾರ್​​ಗೆ ಸರಬರಾಜು ಮಾಡುತ್ತಿದ್ದರು ಎನ್ನಲಾಗಿದೆ. ಈ ಜಾಲದ ಕಿಂಗ್​​ಪಿನ್​ಗಳನ್ನು 2019ರಲ್ಲಿ‌ ಎನ್​ಸಿಬಿ ಅಧಿಕಾರಿಗಳು ಬಂಧಿಸಿದ್ದರು.
VIDEO| ಮನೆ ಬಾಗಿಲಿಗೆ ಹೋಗಿ ಕರೆದರೂ ಕರೊನಾ ವ್ಯಾಕ್ಸಿನ್​ ಪಡೆಯಲು ಸೋಲಿಗರು ಹಿಂದೇಟು

ಮಕ್ಕಳ ಮೇಲೆ ಕೋವಾಕ್ಸಿನ್ ಟ್ರಯಲ್ಸ್​ಗೆ ದೆಹಲಿ ಏಮ್ಸ್​ ಸಜ್ಜು

ಅಮೆಜಾನ್ ವಿರುದ್ಧ ಕಾನೂನು ಕ್ರಮ : ಸಚಿವ ಅರವಿಂದ ಲಿಂಬಾವಳಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − nine =
Remember me
