ಬೆಂಗಳೂರು:ಡ್ರಗ್ಸ್​ ಮಾಫಿಯಾ ಪ್ರಕರಣ ಸಂಬಂಧ ಶನಿವಾರ ಸತತ ಮೂರು ತಾಸು ಸಿಸಿಬಿ ವಿಚಾರಣೆಗೊಳಪಟ್ಟು ಕಚೇರಿಯಿಂದ ಹೊರ ಬಂದ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್​ ಸಂಬರಗಿ ಕೆಲ ಮಹತ್ತರ ವಿಚಾರಗಳನ್ನು ಮಾಧ್ಯಮಗಳ ಬಳಿ ಹಂಚಿಕೊಂಡರು.
ಶುಕ್ರವಾರ ಮತ್ತೆ ವಿಚಾರಣೆಗೆ ಬರುವಂತೆ ಸಿಸಿಬಿ ಅಧಿಕಾರಿಗಳು ಹೇಳಿದ್ದಾರೆ. ಈ ಸಂಬಂಧ ಮತ್ತೆ ನೋಟಿಸ್ ಕೊಡ್ತಾರಂತೆ. ಈಗ ಕೆಲ ಮಹತ್ವದ ಸಾಕ್ಷಿಗಳನ್ನು ನೀಡಿದ್ದೇನೆ. ಶಾಸಕ ಜಮೀರ್ ಅಹ್ಮದ್​ ಕುರಿತಾಗಿಯೂ ಕೆಲ ಮಾಹಿತಿ ನೀಡಲಾಗಿದೆ. ನಾನು ಯಾವುದೇ ರಾಜಕೀಯ ಪಕ್ಷಕ್ಕೆ ಸಂಬಂಧಿಸಿದವನಲ್ಲ ಎಂದರು.ಇದನ್ನೂ ಓದಿರಿಕೊಲಂಬೋ ಪ್ರವಾಸ; ಜಮೀರ್​ ಹೇಳಿಕೆಗೆ ತಿರುಗೇಟು ಕೊಟ್ಟ ಎಚ್​ಡಿಕೆ
ಶುಕ್ರವಾರ ಮತ್ತೊಮ್ಮೆ ವಿವಾರಣೆಗೆ ಬರುವಾಗ ಕೆಲವೊಂದು ಸಾಕ್ಷಿಗಳನ್ನು ತರಲು ಹೇಳಿದ್ದಾರೆ. ವಿಚಾರಣೆಯಲ್ಲಿ ಪ್ರಸ್ತಾಪವಾಗಿ ಗೌಪ್ಯ ವಿಚಾರದ ಕುರಿತು ಹೊರಗೆ ಬಹಿರಂಗ ಮಾಡಬೇಡಿ ಎಂದು ಸಿಸಿಬಿ ಹೇಳಿದೆ. ಕೇಸ್ ತನಿಖಾ ಹಂತದಲ್ಲಿರುವ ಕಾರಣ ಮಾಧ್ಯಮಗಳಿಗೆ ಕೆಲವೊಂದು ವಿಚಾರವನ್ನು ಹೇಳಲು ಆಗಲ್ಲ. ನನ್ನ ಟಾರ್ಗೆಟ್ ಶ್ರೀಲಂಕಾದಲ್ಲಿ ಕ್ಯಾಸಿನೋ ವ್ಯವಹಾರ ನಡೆಸುತ್ತಿದ್ದ ಶೇಖ್ ಫಾಸಿಲ್ ಮಾತ್ರ. ಆತನನ್ನು ವಿಚಾರಣೆಗೆ ಒಳಪಡಿಸಿದರೆ ಜಮೀರ್‌ ವ್ಯವಹಾರ ಗೊತ್ತಾಗತ್ತೆ ಎಂದು ಸಂಬರಗಿ ಹೇಳಿದರು.
ಸ್ಯಾಂಡಲ್​ವುಡ್​ಗೂ ಡ್ರಗ್ಸ್​ ಮಾಫಿಯಾಗೂ ನಂಟಿದೆ ಎಂದಿದ್ದ ಸಾಮಾಜಿಕ ಕಾರ್ಯಕರ್ತ ಪ್ರಸಾಂತ್​ ಸಂಬರಗಿ , ಪದೇಪದೆ ನಟಿ ಸಂಜನಾ ಗಲ್ರಾನಿ ವಿರುದ್ಧ ಮತ್ತು ಶಾಸಕ ಜಮೀರ್​ ಅಹ್ಮದ್​ರ ಆಪ್ತ ಶೇಖ್ ಫಾಸಿಲ್​ನ ವ್ಯವಹಾರದ ಬಗ್ಗೆ ಆರೋಪ ಮಾಡಿದ್ದರು. ಈ ಬಗ್ಗೆ ಮಾಹಿತಿ ಕೇಳಲು ಸಿಸಿಬಿ ಶನಿವಾರ ಬೆಳಗ್ಗೆ ಪ್ರಶಾಂತ್​ ಸಂಬರಗಿಯನ್ನು ವಿಚಾರಣೆಗೆ ಒಳಪಡಿಸಿತ್ತು.
‘ಡ್ರಗ್ಸ್ ದಂಧೆಯಲ್ಲಿ ಜಮೀರ್ ಅಹ್ಮದ್ ಪಾತ್ರ ನೂರರಷ್ಟಿದೆ’, ಆದ್ರೂ ಅರೆಸ್ಟ್​ ಮಾಡ್ತಿಲ್ಲ ಏಕೆ?

‘ಡ್ರಗ್ಸ್​ ದಂಧೆಯಲ್ಲಿ 32 ರಾಜಕಾರಣಿಗಳು! ಸಾಕ್ಷಿ ಸಮೇತ ಗೃಹ ಸಚಿವರ ಕೈ ಸೇರಲಿದೆ ಲಿಸ್ಟ್’

ಡೋಪಿಂಗ್​ ಟೆಸ್ಟ್​ಗೆ ಯೂರಿನ್​ ಕೇಳಿದ್ರೆ ರಾಗಿಣಿ ಕೊಟ್ಟದ್ದು ಮಾತ್ರ ಬೇರೇನೋ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + ten =
Remember me
