ಮಂಡ್ಯ:ಡ್ರಗ್ಸ್ ದಂಧೆಯಲ್ಲಿ ಶಾಸಕ ಜಮೀರ್ ಅಹ್ಮದ್ ಶೇ.100 ಇದ್ದಾರೆ, ಅದರಲ್ಲಿ ಯಾವುದೇ ಸಂಶಯವಿಲ್ಲ. ರಾಜಕಾರಣದಲ್ಲಿ ವ್ಯವಹಾರ ಇಟ್ಟುಕೊಂಡಿರುವುದರಿಂದ ಜಮೀರ್​ನನ್ನು ಅರೆಸ್ಟ್ ಮಾಡ್ತಿಲ್ಲ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್​ ಮುತಾಲಿಕ್​ ಗಂಭೀರ ಆರೋಪ ಮಾಡಿದ್ದಾರೆ.
ನಟಿ ಸಂಜನಾ ಗಲ್ರಾನಿಯ ಗಂಡ ಅಜೀದ್ ಪಾಷಾ ಕೂಡ ಡ್ರಗ್ಸ್ ದಂಧೆಯಲ್ಲಿದ್ದಾನೆ. ಲವ್ ಜಿಹಾದ್ ಮತ್ತು ಡ್ರಗ್ಸ್ ಎರಡಕ್ಕೂ ನೇರ ಕನೆಕ್ಟ್ ಇದೆ. ಇದಕ್ಕೆ ದಾವುದ್ ಇಬ್ರಾಹಿಂ ಮೂಲ ಪುರುಷ. ಆಜೀಮ್ ಅಸ್ತಾನ ಎಂಬ ದೇಶ ದ್ರೋಹಿ ಇದ್ದ. ಇವರೆಲ್ಲರೂ ಇಡೀ ಚಿತ್ರರಂಗವನ್ನು ಆವರಿಸಿದ್ದಾರೆ. ಡ್ರಗ್ಸ್​ ಮಾಫಿಯಾದಲ್ಲಿ ರಾಜಕೀಯ ಮುಖಂಡರು ಇದ್ದಾರೆ ಎಂದು ಸ್ಫೋಟಕ ಹೇಳಿಕೆ ನೀಡಿದರು.
ಇದನ್ನೂ ಓದಿರಿಪ್ರಮೋದ್​ ಮುತಾಲಿಕ್​ರ ಗಂಭೀರ ಆರೋಪ ಒಪ್ಪಿಕೊಂಡ ಪ್ರತಾಪ್​ ಸಿಂಹ
ಶಾಸಕ ಜಮೀರ್ ಚುನಾವಣಾ ಪ್ರಚಾರಕ್ಕೆ ಮುಂಬೈನಿಂದ ಚಿತ್ರನಟರನ್ನು ಕರೆಸುತ್ತಾರೆ. ವ್ಯವಸ್ಥಿತ ಜಾಲದಲ್ಲಿ ಜಮೀರ್ ಪಾತ್ರ ನಿಶ್ಚಿತವಾಗಿದೆ ಎಂದ ಪ್ರಮೋದ್​ ಮುತಾಲಿಕ್​, ಪಾದರಾಯನಪುರ, ಡಿಜೆ ಹಳ್ಳಿ ಗಲಾಟೆಯಲ್ಲಿ ಡ್ರಗ್ಸ್ ಕಾರಣ ಎಂದು ಆರೋಪಿಸಿದರು.
ಸಿಸಿಬಿ ತನಿಖೆ ಬಗ್ಗೆ ನನಗೆ ವಿಶ್ವಾಸ ಇಲ್ಲ. ಈ ಪ್ರಕರಣವನ್ನು ಸರ್ಕಾರ ಮುಚ್ಚಿ ಹಾಕುತ್ತದೆ. ನಿಷ್ಪಕ್ಷಪಾತ ತನಿಖೆ ನಡೆಸುವ ಮೂಲಕ ದುಷ್ಟರನ್ನು ಮಟ್ಟ ಹಾಕಬೇಕು ಎಂದು ಒತ್ತಾಯಿಸಿದರು.
ಸಾಮಾಜಿಕ ಕಾರ್ಯಕರ್ತ ಪ್ರಶಾಂತ್​ ಸಂಬರಗಿ ಆರೋಪಕ್ಕೆ ಮೊನ್ನೆಯಷ್ಟೇ ತಿರುಗೇಟು ನೀಡಿದ್ದ ಜಮೀರ್​, ಡ್ರಗ್ಸ್ ಕೇಸ್​ನಲ್ಲಿ ನನ್ನ ಕೈವಾಡ ಇರುವುದು ಸಾಬೀತು ಮಾಡಲಿ. ಒಂದು ವೇಳೆ ಆರೋಪ ಸಾಬೀತಾದ್ರೆ ರಾಜ್ಯದಲ್ಲಿರುವ ನನ್ನ ಎಲ್ಲ ಆಸ್ತಿಯನ್ನೂ ಸರ್ಕಾರಕ್ಕೇ ಬರೆದುಕೊಡುವೆ ಎಂದು ಸವಾಲು ಹಾಕಿದ್ದರು.
‘ಏನಪ್ಪ ಜಮೀರ್ ನಿನ್ನ ಹೆಸರು ಮೀಡಿಯಾದಲ್ಲಿ ಬರ್ತಿದೆ…’

ಹಳ್ಳಿಯಲ್ಲಿ ಒಂಟಿಮನೆ ಬಾಡಿಗೆ ಪಡೆದ ಯುವಕ ರಾತ್ರಿಯಾಗುತ್ತಿದ್ದಂತೆ ತನ್ನ ವರಸೆ ಬದಲಿಸುತ್ತಿದ್ದ!

ಡೋಪಿಂಗ್​ ಟೆಸ್ಟ್​ಗೆ ಯೂರಿನ್​ ಕೇಳಿದ್ರೆ ರಾಗಿಣಿ ಕೊಟ್ಟದ್ದು ಮಾತ್ರ ಬೇರೇನೋ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × three =
Remember me
