ಬೆಂಗಳೂರು:ಡ್ರಗ್ಸ್​ ಮಾಫಿಯಾ ಪ್ರಕರಣ ಸಂಬಂಧ ಸ್ಯಾಂಡಲ್​ವುಡ್​ ನಟಿ ರಾಗಿಣಿ ದ್ವಿವೇದಿಗೆ ಸಿಸಿಬಿ ಪೊಲೀಸ್​ ನೋಟಿಸ್​ ಕೊಟ್ಟಿದ್ದು, ಗುರುವಾರ ಬೆಳಗ್ಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.
ಸ್ಯಾಂಡಲ್​ವುಡ್​ನ ಹಲವರು ನಟ-ನಟಿಯರು ಡ್ರಗ್ಸ್​ ಜಾಲದಲ್ಲಿ ಭಾಗಿಯಾಗಿದ್ದಾರೆ ಎಂಬ ಸುದ್ದಿ ಇತ್ತೀಚಿಗೆ ಸ್ಫೋಟಗೊಂಡಿತ್ತು. ಡ್ರಗ್ಸ್​ ದಂಧೆಯಲ್ಲಿ ತೊಡಗಿರುವ ಆರೋಪದ ಮೇರೇಗೆ ನಟಿ ರಾಗಿಣಿ ಆಪ್ತ, ಜಯನಗರದ ಆರ್​ಟಿಒ ಕಚೇರಿಯ ದ್ವೀತಿಯ ದರ್ಜೆ ಸಹಾಯಕ ರವಿಶಂಕರ್​ನನ್ನು ಬುಧವಾರ ವಶಕ್ಕೆ ಪಡೆದು ಜಂಟಿ ಪೊಲೀಸ್​ ಆಯುಕ್ತ ಸಂದೀಪ್​ ಪಾಟೀಲ್​ ಮತ್ತು ಡಿಸಿಪಿ ಕೆ.ಪಿ. ರವಿಕುಮಾರ್​ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ಇದನ್ನೂ ಓದಿರಿರಾಜ್ಯಕ್ಕೆ ಎಲ್ಲಿಂದ ಬರುತ್ತೆ ಡ್ರಗ್ಸ್? ಈ ಬಗ್ಗೆ ಪೊಲೀಸ್​ ಮಹಾನಿರ್ದೇಶಕರಿಂದ ಸ್ಫೋಟಕ ಮಾಹಿತಿ
ಪಬ್​, ಪಂಚತಾರ ಹೋಟೆಲ್​ ಮತ್ತು ಹೊರವಲಯದ ರೆಸಾರ್ಟ್​ಗಳಲ್ಲಿ ನಡೆದಿರುವ ಪಾರ್ಟಿಗಳಲ್ಲಿ ರವಿಶಂಕರ್​ ಮತ್ತು ರಾಗಿಣಿ ಕಾಣಿಸಿಕೊಂಡಿದ್ದರು. ಈ ಔತಣ ಕೂಟಗಳಲ್ಲಿ ಡ್ರಗ್ಸ್​ ಸೇವನೆ ನಡೆದಿರಬಹುದು ಎಂದು ಸಿಸಿಬಿ ಶಂಕೆ ವ್ಯಕ್ತಪಡಿಸಿದೆ. ಈ ಅನುಮಾನದ ಮೇಲೆ ರವಿಶಂಕರ್​ನನ್ನು ಬುಧವಾರ ಬೆಳಗ್ಗೆ ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಿದ ಸಿಸಿಬಿ, ಆತನ ಹೇಳಿಕೆ ಆಧರಿಸಿ ರಾಗಿಣಿಗೆ ನೋಟಿಸ್​ ಜಾರಿಗೊಳಿಸಿದೆ.
ಕೆಲ ತಿಂಗಳ ಹಿಂದೆ ಅಶೋಕನಗರ ಸಮೀಪದ ಹೋಟೆಲ್​ನಲ್ಲಿ ರಾಗಿಣಿ ಜತೆ ಸ್ನೇಹದ ವಿಚಾರವಾಗಿ ರವಿಶಂಕರ್​ ಹಾಗೂ ರಿಯಲ್​ ಎಸ್ಟೇಟ್​ ಉದ್ಯಮಿ ಶಿವಪ್ರಕಾಶ್​ ಗಲಾಟೆ ಮಾಡಿಕೊಂಡಿದ್ದರು. ಈಗ ಡ್ರಗ್ಸ್​ ಜಾಲದಲ್ಲಿ ರಾಗಿಣಿ ಹಾಗೂ ರವಿಶಂಕರ್​ ಹೆಸರು ಕೇಳಿ ಬಂದಿದೆ.
ಸಿಸಿಬಿ ಪೊಲೀಸರ ತನಿಖೆಯಲ್ಲಿ ಮತ್ತಷ್ಟು ನಟ-ನಟಿಯರಿಗೂ ಕಂಟಕ ಕಾದಿದೆ. ಇವರ ಜೊತೆಗೆ ಸಂಪರ್ಕ ಹೋದಿರುವ ರಾಜಕೀಯ, ಗಣ್ಯರ ಮತ್ತು ಉದ್ಯಮಿ ಮಕ್ಕಳಿಗೂ ಡ್ರಗ್ಸ್​ ಮತ್ತಿನ ಕಂಟಕ ತಪ್ಪಿದಲ್ಲ. ನಟಿ ಮತ್ತು ಆಕೆ ಆಪ್ತ ಕೊಡುವ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಮತ್ತಷ್ಟು ಮಂದಿಯನ್ನು ವಿಚಾರಣೆಗೆ ಸಿದ್ಧತೆ ನಡೆಸುತ್ತಿದ್ದಾರೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.
ಡ್ರಗ್ಸ್​ ಜಾಲದ ಕಿಂಗ್​ಪಿನ್​ ಅನಿಕಾ ಬಾಯ್ಬಿಟ್ಲು ಸ್ಫೋಟಕ ರಹಸ್ಯ, ಕನ್ನಡ ನಟ-ನಟಿಯರೇ ಗಿರಾಕಿಗಳು!

ಡ್ರಗ್ಸ್ ಮಾಫಿಯಾ ಬಗ್ಗೆ ಹೊಸ ಬಾಂಬ್​ ಸಿಡಿಸಿದ ಪ್ರಮೋದ್​ ಮುತಾಲಿಕ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + 13 =
Remember me
