ಬೆಂಗಳೂರು:: ಮಾದಕ ಜಾಲದಲ್ಲಿ ಸ್ಯಾಂಡಲ್​ವುಡ್​ ನಂಟಿನ ಪ್ರಕರಣ ಕುರಿತು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಸ್ಫೋಟಕ ಮಾಹಿತಿ ನೀಡಿದ್ದಾರೆ.
ನಟಿ ರಾಗಿಣಿ ದ್ವಿವೇದಿ ಮನೆ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ನಟಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿದ ಪೊಲೀಸ್ ಆಯುಕ್ತರು, ಡ್ರಗ್ಸ್​ ದಂಧೆ ಕುರಿತು ಮಹತ್ತರ ವಿಚಾರಗಳನ್ನು ತಿಳಿಸಿದ್ದಾರೆ. ರಾಗಿಣಿ ವಿರುದ್ಧ ಕಾಟನ್​ಪೇಟೆಯಲ್ಲಿ ಸುಮೋಟೋ ಕೇಸ್​ ದಾಖಲಾಗಿದೆ.ಇದನ್ನೂ ಓದಿರಿನಾನೇ ಬರ್ತಿದ್ನಲ್ಲಾ ಅಂತ ರಾಗ ಎಳೆದ್ರು ರಾಗಿಣಿ: ಮೊಬೈಲ್, ಲ್ಯಾಪ್​ಟಾಪ್ ಸಿಸಿಬಿ ವಶ
ಡ್ರಗ್ಸ್​ ಮಾಫಿಯಾದಲ್ಲಿ ಸ್ಯಾಂಡಲ್​ವುಡ್​ ನಂಟಿನ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ್ದೇವೆ. ಸಿಸಿಬಿ ಅಧಿಕಾರಿಗಳು ಡ್ರಗ್ಸ್ ಬಗ್ಗೆ ತನಿಖೆ ಕೈಗೊಂಡಿದ್ರು. ಕೆಲ ಚಲನಚಿತ್ರ ನಟ-ನಟಿಯರಿಗೆ ಡ್ರಗ್ಸ್ ಮಾಫಿಯಾ ಸಂಪರ್ಕ ಇದೆ ಎಂಬ ಮಾಹಿತಿ ಇತ್ತು. ಆರ್​ಟಿಒ ಕಚೇರಿಯಲ್ಲಿ ಕ್ಲರ್ಕ್ ಕೆಲಸ ಮಾಡ್ತಿದ್ದ ರವಿಶಂಕರ್​ನನ್ನು ವಶಕ್ಕೆ ಪಡೆದು ಸುದೀರ್ಘವಾಗಿ ವಿಚಾರಣೆ ಮಾಡಿದಾಗ ಹಲವು ಮಹತ್ತರ ವಿಚಾರವನ್ನು ಆತ ಬಾಯ್ಬಿಟ್ಟಿದ್ದಾನೆ. ಅವನು ಕೆಲ ಪಾರ್ಟಿಗಳಿಗೆ ಹೋಗ್ತಾ ಇದ್ದ. ಬೇರೆ ಕಡೆಯಿಂದ ಡ್ರಗ್ಸ್ ತರಿಸಿಕೊಂದು ಪಾರ್ಟಿಗಳಿಗೆ ಸಪ್ಲೈ ಮಾಡ್ತಿದ್ದ ಅನ್ನೋ ಮಾಹಿತಿ ನಮಗೆ ಸಿಕ್ಕಿದೆ. ಹಲವರ ಹೆಸರನ್ನು ಆತ ಹೇಳಿದ್ದು, ಎರಡನೇ ಹಂತದ ತನಿಖೆ ಶುರುವಾಗಿದೆ ಎಂದು ಕಮಲ್​ ಪಂತ್​ ಹೇಳಿದರು.
ಇಲ್ಲಿಯವರೆಗೆ ಇಬ್ಬರನ್ನು ಅರೆಸ್ಟ್ ಮಾಡಿದ್ದೇವೆ. ಒಬ್ಬ ರಾಗಿಣಿ ಆಪ್ತ ರವಿಶಂಕರ್​, ಮತ್ತೊಬ್ಬ ಸಂಜನಾ ಗುಲ್ರಾನಿಯ ಆಪ್ತ ರಾಹುಲ್. ರಾಗಿಣಿ ದ್ವಿವೇದಿ ವಿರುದ್ಧ ಪೊಲೀಸರು ಕಾಟನ್​ಪೇಟೆಯಲ್ಲಿ ಎಫ್​ಐಆರ್​ ದಾಖಲಿಸಿದ್ದಾರೆ.
ಸದ್ಯ ನಟಿ ರಾಗಿಣಿಯನ್ನು ಸಿಸಿಬಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಅವರನ್ನು ವಶಕ್ಕೆ ಪಡೆಯುವ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ವಿಚಾರಣೆ ಬಳಿಕ ಮಾಹಿತಿ ನೀಡುತ್ತೇವೆ. ಈ ಪ್ರಕರಣದಲ್ಲಿ ಯಾರೇ ಇದ್ರೂ ಅವರ ವಿರುದ್ಧ ಕ್ರಮ ತೆಗೆದುಕೊಳ್ತೀವಿ ಎಂದು ತಿಳಿಸಿದರು.
https://www.facebook.com/DighvijayNews/videos/787014748777634/
ರೈತನ ಜಮೀನು ಪಡೆದು ಬರೋಬ್ಬರಿ ನಾಲ್ಕೂವರೆ ಎಕರೆಯಲ್ಲಿ ಗಾಂಜಾ ಬೆಳೆದ ದುಷ್ಕರ್ಮಿ

Sign in to your account
Please enter an answer in digits:9 + nineteen =
Remember me
