ಕಲಬುರಗಿ:ಹಾಡಹಗಲೇ ನಕಲಿ ಗನ್​ ಹಿಡಿದು ಐಸಿಐಸಿಐ ಬ್ಯಾಂಕ್​ಗೆ ಎಂಟ್ರಿ ಕೊಟ್ಟ ವ್ಯಕ್ತಿಯೊಬ್ಬ ಕೆಲಕಾಲ ಆತಂಕ ಸೃಷ್ಟಿಸಿದ್ದ ಘಟನೆ ನಗರದಲ್ಲಿ ಶನಿವಾರ ಸಂಭವಿಸಿದೆ.
ಮದ್ಯದ ಅಮಲಿನಲ್ಲಿ ಗಂಜ್‌ನ ಐಸಿಐಸಿಐ ಬ್ಯಾಂಕ್ ಒಳಗೆ ನುಗ್ಗಿದ ಕುಡುಕನೊಬ್ಬ ಕುರ್ಚಿ ರಿಪೇರಿ ಮಾಡುವ ನೆಪದಲ್ಲಿ ಬ್ಯಾಂಕ್‌ನ‌ ಡೆಪ್ಯೂಟಿ ಬ್ರ್ಯಾಂಚ್ ಮ್ಯಾನೇಜರ್ ಚೇಂಬರ್ ಹೊಕ್ಕಿದ್ದ.
ಇದನ್ನೂ ಓದಿರಿಪತ್ನಿ ಮನೆಗೆ ಹೋಗಿ ವಾಪಸ್​ ಬರುತ್ತಿದ್ದ ಪತಿ ರಸ್ತೆಯಲ್ಲೇ ಸುಟ್ಟುಕರಕಲಾದ!
ಬ್ಯಾಂಕ್​ನ ಡಿಬಿಎಂ, ತಾವು ಯಾವುದೇ ಚೇರ್ ರಿಪೇರಿ ಇದೆ ಅಂತಾ ಹೇಳಿಲ್ಲ. ಆದರೂ ನೀವೇಕೆ ಬಂದ್ರಿ? ನಿಜಕ್ಕೂ ನೀನ್ಯಾರು ಎಂದು ಪ್ರಶ್ನಿಸಿದ್ದಾರೆ. ಕೂಡಲೇ ಆತನ ಬಗ್ಗೆ ಅನುಮಾನ ಬಂದು ಬ್ರ್ಯಾಂಚ್ ಮ್ಯಾನೇಜರ್​ಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ. ಬ್ಯಾಂಕ್​ ಒಳಗೆ ಅಪರಿಚಿತ ನುಗ್ಗಿರುವ ಬಗ್ಗೆ ತಕ್ಷಣ ಬ್ರ್ಯಾಂಚ್ ಮ್ಯಾನೇಜರ್​ರಿಂದ ಪೊಲೀಸರಿಗೆ ಮಾಹಿತಿ ಹೋಗಿದ್ದು, ಸ್ಥಳಕ್ಕೆ ಬಂದ ಪೊಲೀಸರು ದುಷ್ಕರ್ಮಿಗೆ ಲಾಠಿ ‌ರುಚಿ ತೋರಿಸಿದರು.
ನಕಲಿ ಗನ್​ ಹಿಡಿದು ಬ್ಯಾಂಕ್​ಗೆ ಬಂದ ವ್ಯಕ್ತಿಯನ್ನು ಕಲಬುರಗಿಯ ಮಿಜಗುರಿ ನಿವಾಸಿ ಸುಲ್ತಾನ್‌ ಎಂದು ಗೊತ್ತಾಗಿದೆ. ‘ಎಣ್ಣೆ’ನಶೆಯಲ್ಲಿ ಬ್ಯಾಂಕ್​ಗೆ ನುಗ್ಗಿದ್ದ ಹಿನ್ನೆಲೆಯಲ್ಲಿ ಬ್ಯಾಂಕ್ ಸಿಬ್ಬಂದಿ ದೂರು ದಾಖಲಿಸಿಲ್ಲ. ಆದರೆ, ಸುಲ್ತಾನ್‌ ಮನೆಯವರಿಂದ ಚೌಕ್ ಪೊಲೀಸರು ಮುಚ್ಚಳಿಕೆ ಬರೆಸಿಕೊಂಡು‌ ಆತನನ್ನು ಬಿಡುಗಡೆ ಮಾಡಿದ್ದಾರೆ.
ಕಾಂಗ್ರೆಸ್​ ವಿರುದ್ಧ ಅಖಂಡ ಶ್ರೀನಿವಾಸ್​ ಮೂರ್ತಿ ಆಕ್ರೋಶ… ಸುಟ್ಟಿರೋದು ನನ್ನ ಮನೆ, ಡಿಕೆಶಿಯದ್ದಲ್ಲ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − three =
Remember me
