ಔರದ್:ಕುಡಿದ ಮತ್ತಿನಲ್ಲಿ ಜನರು ಏನೇನೋ ಮಾಡುತ್ತಾರೆ. ಬುದ್ಧಿ ಮೇಲೆ ನಿಯಂತ್ರಣವಿಲ್ಲದ ನಶೆಯಲ್ಲಿರುವವರು ತಮ್ಮನ್ನು ಅಪಾಯಕ್ಕೆ ಸಿಲುಕಿಸುವುದರ ಜತೆಗೆ ಇತರರಿಗೂ ತೊಂದರೆ ನೀಡುತ್ತಾರೆ. ಇಂತಹದೇ ಘಟನೆಯೊಂದು ಔರದ್ ನಲ್ಲಿ ಬೆಳಕಿಗೆ ಬಂದಿದೆ.
ಔರದ್ ಡಿಪೋದಿಂದ ಸರ್ಕಾರಿ ಬಸ್ಸು ಒಂದು ಗಂಟೆ ಕಳೆದರೂ ಹೊರಡಲಿಲ್ಲ ಎಂದು ಸುಮಾರು ಹೊತ್ತಿನಿಂದ ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕಾಯುತ್ತಿದ್ದ. ಸೋಮವಾರ ನಡೆದ ಈ ಘಟನೆಯಲ್ಲಿ ಕುಡಿದ ಮತ್ತಿನಲ್ಲಿದ್ದ ಆ ಭೂಪ, ಡಿಪೋದಲ್ಲಿ ನಿಲ್ಲಿಸಿದ್ದ ಬಸ್ ಚಲಾಯಿಸಿದ್ದಾನೆ!
ಇದನ್ನೂ ಓದಿ:ಸಮಯಕ್ಕೆ ಸರಿಯಾಗಿ ಸಿಗದ KSRTC ಬಸ್; ಪ್ರತಿಭಟನೆಗೆ ಇಳಿದ ವಿದ್ಯಾರ್ಥಿಗಳು
ಬೆಳಿಗ್ಗೆ 11 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎನ್ನಲಾಗಿದ್ದು. ಆರೋಪಿಯನ್ನು ಯಶಪ್ಪ ಸೂರ್ಯವಂಶಿ ಎಂದು ಗುರುತಿಸಲಾಗಿದೆ. ಈತ KSRTC ಬಸ್ಸು ಇನ್ನೇನು ಹೊರಡಲಿದೆ ಎಂದು ಕಾದು ಕೊನೆಗೆ ಬೇಸತ್ತು ಕುಡಿದ ನಶೆಯಲ್ಲೇ ಚಲಾಯಿಸಿದ್ದಾನೆ. ಈ ಸಂದರ್ಭ ಒಳಗೆ ಕುಳಿತಿದ್ದ ಪ್ರಯಾಣಿಕರು ಭಯಭೀತರಾಗಿದ್ದಾರೆ.
ಇದನ್ನೂ ಓದಿ:ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ಕೊಟ್ಟ KSRTC; ಜೂನ್ 15ರ ವರೆಗೂ ಉಚಿತ ಪ್ರಯಾಣಕ್ಕೆ ಅವಕಾಶ
ಈತ ಬಸ್ಸನ್ನು ನಿಲ್ಲಿಸುವ ಮೊದಲು ಮತ್ತೊಂದು ಬಸ್ ಹಾಗೂ ಜೀಪಿಗೆ ಡಿಕ್ಕಿ ಹೊಡೆದಿದ್ದಾನೆ. ಪೊಲೀಸರು ಈತನ್ನು ಬೀದರ್ ಜಿಲ್ಲೆಯ ಕಾರಂಜಿ ನಿವಾಸಿ ಸೂರ್ಯವಂಶಿ ಎಂದು ಗುರುತಿಸಿದ್ದು ತಕ್ಷಣ ಬಂಧಿಸಿದ್ದಾರೆ. ಪೊಲೀಸರ ಪ್ರಕಾರ, ಸೂರ್ಯವಂಶಿ ತನ್ನ ಹಳ್ಳಿಯ ಕಡೆಗೆ ಹೋಗುತ್ತಿದ್ದ. ಆತನ ವಿರುದ್ಧ ಪ್ರಕರಣ ದಾಖಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.(ಏಜೆನ್ಸೀಸ್)
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:nine + 11 =
Remember me
