ಹಾಸನ:ಕರ್ನಾಟಕ ಸರ್ಕಾರದ ಬೊಕ್ಕಸಕ್ಕೆ ಕುಡುಕರಿಂದ ಶೇ.30 ರಷ್ಟು ಆದಾಯ ಸಂಗ್ರವಾಗುತ್ತಿದೆ. ಹೀಗಿದ್ದೂ ಈವರೆಗೆ ಮದ್ಯಪಾನ ಪ್ರಿಯರಿಗೆ ಸರ್ಕಾರ ಯಾವುದೇ ಸೌಲಭ್ಯ ನೀಡಿಲ್ಲ. ಹೀಗಾಗಿ ತಕ್ಷಣವೇ ನಾವು ಕುಡಿಯುವಂತಹ ಮದ್ಯಪಾನದ ಬಾಟಲ್​ ಮೇಲೆ 1 ಲಕ್ಷ ರೂ. ಸರ್ಕಾರದ ವತಿಯಿಂದ ವಿಮೆ ಮಾಡಬೇಕೆಂಬ ಆಗ್ರಹ ಕೇಳಿ ಬಂದಿದೆ.
ಎಂಥಾ ಕಾಲ ಬಂತಪ್ಪಾ..? ಸರ್ಕಾರಕ್ಕೆ ಬಗೆ ಹರಿಸಲು ಬೆಟ್ಟದಷ್ಟು ಸಮಸ್ಯೆಗಳಿವೆ. ಇದರ ನಡುವೆ ಇಂತಹ ಆಗ್ರಹ ಎಲ್ಲಿಂದ ಕೇಳಿ ಬಂತು ಎಂದು ಯೋಚಿಸುತ್ತಿದ್ದರೆ ಇದಕ್ಕೆ ಉತ್ತರ, ಹಾಸನದಲ್ಲಿ ನೂತನವಾಗಿ ಆರಂಭವಾಗಿರುವ ಮದ್ಯಪಾನ ಪ್ರಿಯರ ಹೋರಾಟ ಸಂಘದಿಂದ.
ಇದೀಗ ಮದ್ಯಪಾನ ಪ್ರಿಯರ ಹೋರಾಟ ಸಂಘದ ಪದಾಧಿಕಾರಿಗಳು ಸಾರ್ವಜನಿಕವಾಗಿ ಮಾತನಾಡುತ್ತಾ, ನಮ್ಮ ದಿನ ನಿತ್ಯದ ಕುಡಿತದ ಚಟದಿಂದ ಒಂದು ವೇಳೆ ನಾವು ಸತ್ತು ಹೋದರೆ ನಮ್ಮ ಕುಟುಂಬಕ್ಕೆ 1 ಲಕ್ಷ ರೂಪಾಯಿ ಹಣ ಸಿಗಬೇಕು. ಹೀಗಾಗಿ ಪ್ರತಿಯೊಂದು ಬಾಟಲಿಯ ಮೇಲೂ ವಿಮೆ ಮಾಡಬೇಕು ಎಂದು ಕೇಳಿಕೊಂಡಿದ್ದಾರೆ.

ಬಹುತೇಕ ಮದ್ಯಪಾನ ಪ್ರಿಯರಾದ ನಾವುಗಳು ನಿತ್ಯ ಮನೆಯಲ್ಲಿ ಹೋಗಿ ಜಗಳ ಮಾಡುತ್ತಿರುತ್ತೇವೆ. ಇದರಿಂದ ನಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ. ಹೀಗಾಗಿ ನಮ್ಮಂತಹ ಕುಡುಕರ ಮಕ್ಕಳಿಗೆ ಸರ್ಕಾರಿ ವಸತಿ ನಿಲಯದಲ್ಲಿ 10ಶೇ. ಮೀಸಲಾತಿ ನೀಡಬೇಕು ಎಂದು ಮದ್ಯಪಾನ ಪ್ರಿಯರ ಹೋರಾಟ ಸಂಘದ ಪದಾದಿಕಾರಿಗಳು ಸರ್ಕಾರಕ್ಕೆ ಬೇಡಿಕೆ ಸಲ್ಲಿಸಿದ್ದಾರೆ.
ಇಷ್ಟಕ್ಕೆ ಸುಮ್ಮನಾಗದ ಪದಾಧಿಕಾರಿಗಳು, ದುಡಿದ ದುಡ್ಡನ್ನೆಲ್ಲಾ ಕುಡುಕರು ತಮ್ಮ ಕುಡಿತದ ಚಟಕ್ಕೆ ವಿನಿಯೋಗಿಸುತ್ತಿದ್ದಾರೆ. ಹೀಗಾಗಿ ಆದಷ್ಟು ಬೇಗ ಸರ್ಕಾರದ ವತಿಯಿಂದ ನಿಗಮವೊಂದನ್ನು ಪ್ರಾರಂಭಿಸಬೇಕು. ನಂತರ ವರ್ಷಕ್ಕೆ ನೂರು ಮನೆಗಳನ್ನು ಮದ್ಯಪಾನ ಪ್ರಿಯರಿಗೆ ನಿಗಮದ ವತಿಯಿಂದ ನಿರ್ಮಾಣ ಮಾಡಬೇಕು. ಇದಲ್ಲದೆ ನಿತ್ಯವೂ ನಾವೆಲ್ಲಾ ಕುಡಿದು ಕಿಡ್ನಿ ಸಮಸ್ಯೆಗೆ ಓಳಗಾದಾಗ ಆಸ್ಪತ್ರೆ ಸೇರುತ್ತೇವೆ. ಇಲ್ಲಿ ಸಾವು ಬದುಕಿನ ನಡುವೆ ಹೋರಾಡುವಾಗ ನಿಗಮದ ವತಿಯಿಂದ 4-5 ಲಕ್ಷ ರೂ ನೀಡುವ ಮೂಲಕ ಸಹಾಯ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಕುಡುಕರಿಗೆ ಆಗಾಗ ಆರೋಗ್ಯ ಸಮಸ್ಯೆ ಬಂದೊದಗುತ್ತಿದೆ. ಹೀಗಾಗಿ ಮೂರು ತಿಂಗಳಿಗೆ ಒಂದು ಬಾರಿ ತಾಲೂಕು ಮಟ್ಟದಲ್ಲಿ ಉಚಿತ ಆರೋಗ್ಯ ತಪಾಸಣೆ ನಡೆಸಬೇಕು. ಇದಲ್ಲದೆ ಮದ್ಯಪಾನ ಅಂಗಡಿಗಳಲ್ಲಿ ಸ್ವಚ್ಛತೆಗೆ ಹಾಗೂ ಶೌಚಾಲಯ ನಿರ್ಮಾಣಕ್ಕೆ ಆದ್ಯತೆ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × four =
Remember me
