ರಾಮನಗರ:ಇವತ್ತು ಕುಡುಕರಿಗೆ ಸ್ವಾತಂತ್ರ್ಯ ಸಿಕ್ಕಂತಾಗಿದೆ. ರಾಜ್ಯದೆಲ್ಲೆಡೆ ಮದ್ಯಪ್ರಿಯರೇ ಇಂದು ಕೇಂದ್ರ ಬಿಂದು.ಅದರಲ್ಲೂ ರಾಮನಗರದಲ್ಲಂತೂ ಒಂದಷ್ಟು ಜನ ಬೆಳ್ಳಂಬೆಳಗ್ಗೆ ಫುಲ್​ ಟೈಟ್​ ಆಗಿ, ಮಾಗಡಿ ಶಾಸಕ ಎ. ಮಂಜು ಅವರಿಗೆ ಬಹಿರಂಗವಾಗಿ ಆವಾಜ್​ ಹಾಕಿದ್ದಾರೆ. ಮಾಗಡಿ ತಾಲೂಕಿನ ಬಸವನಪಾಳ್ಯ ಗ್ರಾಮದಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ:VIDEO| ಈ ಅಂಗಡಿಯಲ್ಲಿ ಎಣ್ಣೆ ಖರೀದಿಸುವವರಿಗೆ ಮಾಲೀಕರು ವಿಶೇಷ ವ್ಯವಸ್ಥೆ ಕಲ್ಪಿಸಿದ್ದಾರೆ, ಅದು ಏನು?
ಎ.ಮಂಜು ಅವರು ನೀಡಿದ್ದ ಹಳೇ ಭರವಸೆಗಳನ್ನೆಲ್ಲ ನೆನಪಿಸಿಕೊಂಡು ಬೈದಿದ್ದಾರೆ. ಎಣ್ಣೆ ಹೊಟ್ಟೆಗೆ ಹೋಗುತ್ತಿದ್ದಂತೆ ಡೋಂಟ್ ಕೇರ್​ ಮೂಡ್​ಗೆ ಜಾರಿದ ಒಂದಷ್ಟು ಜನರು, ಎ. ಮಂಜು ಅವರಿಗೆ ಹಿಗ್ಗಾಮುಗ್ಗಾ ಬೈದಿದ್ದಾರೆ.
ರಸ್ತೆ ಕಾಮಗಾರಿ ಪೂಜೆಗೆ ಸಂಬಂಧಪಟ್ಟಂತೆ ಎ. ಮಂಜು ಅವರು ಇಂದು ಬಸವನಪಾಳ್ಯ ಗ್ರಾಮಕ್ಕೆ ಭೇಟಿ ನೀಡಿದ್ದರು. ಅಷ್ಟರಲ್ಲಾಗಲೇ ಕುಡಿದು, ಟೈಟ್​ ಆಗಿದ್ದವರು, ಗ್ರಾಮದ ಹಾಲಿನ ಡೇರಿ ಸೂಪರ್ ಸೀಡ್ ಆದರೂ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ. ಇದೇ ವಿಚಾರವಾಗಿ ಶಾಸಕರಿಗೆ ಬಹಿರಂಗವಾಗಿ ಆವಾಜ್​ ಹಾಕಿದ್ದಾರೆ. ನಮ್ಮೂರಿನಲ್ಲಿ ಏನು ಕೆಲಸ ಮಾಡಿದ್ದೀರಿ? ಎಂದು ಪ್ರಶ್ನಿಸಿದ್ದಾರೆ.
ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ. (ದಿಗ್ವಿಜಯ ನ್ಯೂಸ್​)
ಇದನ್ನೂ ಓದಿ:ಹೊರ ರಾಜ್ಯಗಳಿಂದ ಆಗಮಿಸಿದ್ದ 3 ಸಾವಿರ ಕಾರ್ಮಿಕರು ತವರಿನತ್ತ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 5 =
Remember me
