ಬಾಗಲಕೋಟೆ:ಕುಡಿದ ಮತ್ತಲ್ಲಿ ಮನೆಯಲ್ಲಿ ಜಗಳ ಮಾಡಿಕೊಂಡು ಬೇಸರಗೊಂಡ ವ್ಯಕ್ತಿಯೊಬ್ಬ ಮೊಬೈಲ್​ಪೋನ್ ಟವರ್ ಏರಿ ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದಷ್ಟೇ ಅಲ್ಲದೆ ಕೆಲವರಿಗೆ ಮನರಂಜನೆ ಕೇಂದ್ರವಾಗಿ ಕಂಡುಬಂದ. ಮತ್ತೊಂದೆಡೆ ಪೊಲೀಸರಿಗೆ ಹಾಗೂ ಅಗ್ನಿಶಾಮಕ ದಳದವರಿಗೆ ಈತ ಕೆಲಕಾಲ ತಲೆನೋವಾಗಿ ಕಾಡಿದ ಪ್ರಸಂಗವೊಂದು ನಡೆದಿದೆ.
ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಗಿರಿಸಾಗರದಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ಇಲ್ಲಿನ ಹನಮಂತ ಎಂಬ ವ್ಯಕ್ತಿ ಇಂಥದ್ದೊಂದು ಅವಾಂತರ ಮಾಡಿಕೊಂಡಿದ್ದಾನೆ. ಪಾನಮತ್ತನಾಗಿ ಬಂದು ಮನೆಯಲ್ಲಿ ಜಗಳವಾಡಿದ ಈತ ಬಳಿಕ ಸಮೀಪದ ಮೊಬೈಲ್​ಫೋನ್​ ಟವರ್​ ಏರಿದ್ದಾನೆ.
ಇದನ್ನೂ ಓದಿ:ಹೆಂಡತಿಗೆ ಕಿರುಕುಳ ಕೊಟ್ಟು ಸಾವು ತಂದುಕೊಂಡ ಗಂಡ; ಆಕೆ ಹೊಡೆಯಿರಿ ಎಂದಳು, ಅವರಿಬ್ಬರು ಕೊಂದೇ ಬಿಟ್ಟರು…
ಈತ ಟವರ್​ ಏರಿ ಕುಳಿತು ಕೆಳಗೆ ಬರಲು ನಿರಾಕರಿಸಿದ್ದರಿಂದ ಸ್ಥಳೀಯರು ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಹನಮಂತನನ್ನು ಕೆಳಗಿಳಿಸಲು ಸುಮಾರು ಎರಡು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಬೇಕಾಯಿತು. ಕೊನೆಗೂ ಈತನ ಮನವೊಲಿಸುವಲ್ಲಿ ಯಶಸ್ವಿಯಾದ ಸಿಬ್ಬಂದಿ, ಹಗ್ಗ ಕಟ್ಟಿ ಈತನನ್ನು ಕೆಳಕ್ಕೆ ಇಳಿಸಿದ್ದಾರೆ. ಈ ಮೂಲಕ ಸ್ಥಳೀಯರು ನಿಟ್ಟುಸಿರು ಬಿಡುವಂತಾಯಿತು.

ಆತ್ಮಹತ್ಯೆ ಮಾಡಿಕೊಂಡ್ರಾ ಈ ಖ್ಯಾತ ರ‍್ಯಾಪರ್?; ಆದಿತ್ಯ ತಿವಾರಿ ನಾಪತ್ತೆ, ಇನ್​ಸ್ಟಾಗ್ರಾಮ್​ನಲ್ಲಿದೆ ಸಂದೇಹಾಸ್ಪದ ಪೋಸ್ಟ್!

ನಗರಸಭೆ ಆಯುಕ್ತರ ಮೇಲೆಯೇ ಹಲ್ಲೆ: ಜನಪ್ರತಿನಿಧಿಯ ಪತಿ-ಪುತ್ರನೇ ಆರೋಪಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 2 =
Remember me
