ಬಾಗಲಕೋಟೆ:ಮದ್ಯಪಾನ ಮಾಡಿದ ಬಳಿಕ ಅದರ ಅಮಲಿನಲ್ಲಿ ಏನೇನೋ ಸಾಹಸ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡ ಪ್ರಕರಣಗಳು ಹಲವಾರು ಇವೆ. ಅಂಥದ್ದೇ ಒಂದು ಪ್ರಕರಣ ರಾಜ್ಯದಲ್ಲಿ ಇನ್ನೊಂದು ನಡೆದಿದೆ.
ಬಾಗಲಕೋಟೆ ತಾಲೂಕಿನ ಮುರನಾಳ ಪುನರ್ ವಸತಿ ಕೇಂದ್ರದ ಕೆರೆಯಲ್ಲಿ ಈ ಪ್ರಕರಣ ನಡೆದಿದೆ. ಮದ್ಯಪಾನ ಮಾಡಿದ್ದ ಮೌಲಾಸಾಬ್ ವಾಲೀಕಾರ ಎಂಬಾತ ಮದ್ಯದ ಅಮಲಿನಲ್ಲಿ ದುಸ್ಸಾಹಸಕ್ಕೆ ಇಳಿದು ಎಡವಟ್ಟು ಮಾಡಿಕೊಂಡಿದ್ದಾನೆ.
ಕಳೆದ ನಾಲ್ಕೈದು ದಿನಗಳಿಂದ ಗ್ರಾಮದ ಈ ಕೆರೆಯಲ್ಲಿ ಕಂಡುಬಂದಿರುವ ಮೊಸಳೆಯನ್ನು ನೋಡಲು ಜನರು ಮುಗಿಬಿದ್ದಿದ್ದರು. ಆ ಜಾಗಕ್ಕೆ ಕಂಠಪೂರ್ತಿ ಕುಡಿದಿದ್ದ ಮೌಲಾಸಾಬ್​ ಕೂಡ ಬಂದಿದ್ದು, ಮೊಸಳೆ ಹಿಡಿಯುವುದಾಗಿ ಹೇಳಿ ಮದ್ಯದ ನಶೆಯಲ್ಲಿ ಕೆರೆಗೆ ಧುಮುಕಿದ್ದಾನೆ.
ಹೀಗೆ ಕೆರೆಯ ಮಧ್ಯಕ್ಕೆ ಹೋದ ಮೌಲಾಸಾಬ್ ಈಜಲಾಗದೆ ನೀರಿನಲ್ಲಿ ಮುಳುಗಲಾರಂಭಿಸಿದ್ದ. ಇದನ್ನು ಗಮನಿಸಿದ ಸ್ಥಳೀಯರು ಕೆರೆಗೆ ಧುಮುಕಿ ಮೌಲಾಸಾಬ್​ನನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ. ಮದ್ಯದ ಅಮಲಿನಲ್ಲಿ ಎಡವಟ್ಟು ಮಾಡಿಕೊಂಡು ಈತ ನೆರೆದಿದ್ದ ಜನರ ಎದುರು ಮುಖಭಂಗ ಎದುರಿಸುವಂತಾಗಿತ್ತು.
ವಾಟ್ಸ್​ಆ್ಯಪ್​ ಬಳಕೆ ಅಪಾಯಕಾರಿಯೇ?; ಇಲ್ಲಿದೆ ಆತಂಕಕಾರಿ ಮಾಹಿತಿ!

‘ಎಲ್ರೂ ನನ್ನ ಶವ ನೋಡಲು ಬನ್ನಿ, ಇಲ್ಲಂದ್ರೆ ದೆವ್ವ ಆಗಿ ಬರ್ತೀನಿ’; ಡೆತ್​ನೋಟ್​ನಲ್ಲಿತ್ತು ಈ ಕೊನೇ ಆಸೆ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:19 + 18 =
Remember me
