ಬೆಂಗಳೂರುಬೆಂಗಳೂರಿನ ಇ-ಪ್ರಗತಿ ರಿಸೈಕ್ಲಿಂಗ್ ಸಂಸ್ಥೆಯ ವಹಿವಾಟಿನ ಆಡಿಟ್ ವರದಿಯನ್ನು ತೋರಿಸಿ ತುಮಕೂರಿನ ಇ- ಪ್ರಗತಿ ರಿಸೈಕ್ಲಿಂಗ್ ಪ್ರೈ.ಲಿ. ಸಂಸ್ಥೆಯ ದಾಖಲೆಗಳೆಂದು ತೋರಿಸಿ ಟೆಂಡರ್ ಪಡೆದಿರುವುದು ತಾಂತ್ರಿಕವಾಗಿ ಸಾಬೀತಾಗಿರುವುದೇ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (ಸಿಎಸ್‌ಇಆರ್‌ಟಿ)ಯಯಲ್ಲಿನ ಇ-ಟೆಂಡರ್ ಅಕ್ರಮ ಬಯಲಾಗಲು ಕಾರಣವಾಗಿದೆ.
ಇನ್ನದೇ ಕಂಪನಿಯ ಹೆಸರಿನಲ್ಲಿದ್ದ ಪಾನ್, ಜಿಎಸ್‌ಟಿ ನಂಬರ್ ಹಾಗೂ ಆಡಿಟ್ ವರದಿ ತೋರಿಸಿ ಟೆಂಡರ್ ಕರೆಯಲಾಗಿತ್ತು. ನಿಯಮ ಉಲ್ಲಂಸಿ ನೀಡಿದ್ದ ಟೆಂಡರ್‌ನಿಂದ ಇಲಾಖೆಗೆ 1.62 ಕೋಟಿ ರೂ. ನಷ್ಟವಾಗಿರುವುದು ಇಲಾಖೆಯ ಆಂತರಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಡಿಎಸ್‌ಇಆರ್‌ಟಿಯಲ್ಲಿದ್ದ ಹಳೆಯ ಮಾನಿಟರ್‌ಗಳು, ಬ್ಯಾಟರಿ ಮತ್ತು ಕೇಬಲ್‌ಗಳು ಸೇರಿ ಕಚೇರಿಯಲ್ಲಿದ್ದ ಅನುಪಯುಕ್ತ ಇ- ತ್ಯಾಜ್ಯ ವಸ್ತುಗಳ ಸಂಗ್ರಃನೆ ಮತ್ತು ವಿಲೇವಾರಿ ಮಾಡುವ ಟೆಂಡರ್ ಕರೆಯಲಾಗಿತ್ತು. ಇ- ಪ್ರಗತಿ ರೀಸೈಕ್ಲಿಂಗ್ ಪ್ರೈ.ಲಿ. ಸಂಸ್ಥೆಗೆ ತಾಂತ್ರಿಕ ಬಿಡ್‌ನಲ್ಲಿ ಅರ್ಹತೆ ಇಲ್ಲದಿದ್ದರೂ ಎಲ್-1 ಎಂದು ಪರಿಗಣಿಸಿ ಕಾರ್ಯಾದೇಶ ನೀಡಲಾಗಿತ್ತು ಹಾಗೂ ಬಿಡ್‌ಗೆ ಅನುಕೂಲ ಮಾಡಿಕೊಡಲು ಟೆಂಡರ್‌ನಲ್ಲಿ ರೀಸೈಕ್ಲಿಂಗ್ ಸಾಮರ್ಥ್ಯವನ್ನು 1,00 ಎಂಟಿಎಸ್‌ನಿಂದ 1206.06 ಎಂಟಿಎಸ್‌ಗೆ ತಿದ್ದುಪಡಿ ಮಾಡಲಾಗಿದೆ.
ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅಗತ್ಯ ಪ್ರಮಾಣ ಪತ್ರಗಳನ್ನು ಹೊಂದಿಲ್ಲದೇ ಇರುವುದಾಗಿ ಹಾಗೂ ಹಿಂದಿನ ಟೆಂಡರ್‌ನಲ್ಲಿ ಎಚ್-1ರ ದರ 9.87 ಕೋಟಿಗಳಾಗಿತ್ತು. ಇದರಿಂದ 1.62 ಕೋಟಿ ರೂ. ನಷ್ಟವಾಗಿರುವುದು ಹಾಗೂ ಟೆಂಡರ್ ನಿಯಮಗಳನ್ನು ಉಲ್ಲಂಸಿ ಇ-ಪ್ರಗತಿ ರೀಸೈಕ್ಲಿಂಗ್ ಪ್ರೈ ಲಿ. ಸಂಸ್ಥೆಗೆ ಕಾರ್ಯಾದೇಶ ನೀಡಿರುವುದು ಮೇಲ್ನೋಟಕ್ಕೆ ಕಂಡು ಬಂದಿತ್ತು.ಈ ಸಂಬಂಧ ಸಮಗ್ರ ತನಿಖೆ ನಡೆಸಿ ವರದಿ ನೀಡುವಂತೆ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತಾಲಯದ ಕಚೇರಿಯ ಮುಖ್ಯ ಲೆಕ್ಕಾಧಿಕಾರಿಗಳಿಗೆ ಸೂಚಿಸಿದ್ದರು. ಇಲಾಖೆ ಸಚಿವರ ಆದೇಶದ ಮೇರೆಗೆ ನಡೆಸಿದ ತನಿಖೆಯಲ್ಲಿ ಅಕ್ರಮ ಬಯಲಾಗಿದೆ.
ಡಿಎಸ್‌ಇಆರ್‌ಟಿಯು 2021ರ ೆ.22, ಸೆ.2 ಮತ್ತು 2022ರ ಜೂ.28 ಹಾಗೂ ನ.23 ಸೇರಿ ಒಟ್ಟು 4 ಬಾರಿ ಟೆಂಡರ್ ಕರೆಯಲಾಗಿತ್ತು. ಇ- ಪ್ರಗತಿ ರೀಸೈಕ್ಲಿಂಗ್ ಪ್ರೈ.ಲಿ. ಸಂಸ್ಥೆಗೆ ಟೆಂಡರ್ ನೀಡಲಾಗಿತ್ತು. ಸೌಮ್ಯ ಅಂಡ್ ಅಸೋಸಿಯೇಟ್ಸ್ ಚಾರ್ಟಡ್ ಅಕೌಂಟೆಂಟ್ ಸಂಸ್ಥೆಯವರು ಇ- ಪ್ರಗತಿ ರೀಸೈಕ್ಲಿಂಗ್ ಸಂಸ್ಥೆಯ 2018-19, 2029-20, 2020-21ರ ವಾರ್ಷಿಕ ವಹಿವಾಟು ಕ್ರಮವಾಗಿ 29.48 ಕೋಟಿ ರೂ., 23.04 ಕೋಟಿ ರೂ. ಮತ್ತು 20.71 ಕೋಟಿ ರೂ. ಎಂದು ದೃಢೀಕರಿಸಿದೆ. ಇದೇ ವಾರ್ಷಿಕ ವಟಿವಾಟನ್ನು ನಮೂದಿಸಿ ಇ- ಪ್ರಗತಿ ರೀಸೈಕ್ಲಿಂಗ್ ಪ್ರೈ.ಲಿ. ಸಂಸ್ಥೆಯು ದಾಖಲೆಗಳನ್ನು ಸಲ್ಲಿಸಿದೆ. ಆದರೆ, ಈ ಸಂಸ್ಥೆಯು ಆಡಿಟ್ ವರದಿಯನ್ನು ದೃಢೀಕರಿಸದಿರುವುದು ಮತ್ತು ಮತ್ತೊಂದು ಸಂಸ್ಥೆಯ ವಹಿವಾಟನ್ನು ಬಿಂಬಿಸಿ ಟೆಂಡರ್‌ನಲ್ಲಿ ದಾಖಲೆ ಸಲ್ಲಿಸಿರುವುದು ತಿಳಿದು ಬಂದಿದೆ.
– ಬ್ಯಾಂಕ್ ಗ್ಯಾರಂಟಿಯನ್ನು ಇ- ಪ್ರಗತಿ ರೀಸೈಕ್ಲಿಂಗ್ ಹೆಸರಿನಲ್ಲಿ ನೀಡಿರುವುದು. ಇಲಾಖೆಗೆ ಸಲ್ಲಿಸುವ ಸಲುವಾಗಿ ಉದ್ದೇಶಪೂರ್ವಕವಾಗಿ ಇದರ ಮುಖಪುಟವನ್ನು ಮಾತ್ರ ಇ- ಪ್ರಗತಿ ರೀಸೈಕ್ಲಿಂಗ್ ಪ್ರೈ.ಲಿ. ಸಂಸ್ಥೆಯ ಹೆಸರಿನಲ್ಲಿ ಸಲ್ಲಿಸಲಾಗಿದೆ.
– ಎರಡೂ ಸಂಸ್ಥೆಗಳ ಪಾನ್ ಕಾರ್ಡ್ ನಂಬರ್, ಜಿಎಸ್‌ಟಿ ಮತ್ತು ವಿಳಾಸವನ್ನು ಪರಿಶೀಲಿಸಿದಾಗ ಇ-ಪ್ರಗತಿ ಹಾಗೂ ಇ- ಪ್ರಗತಿ ರೀಸೈಕ್ಲಿಂಗ್ ಪ್ರೈ.ಲಿ. ಪ್ರತ್ಯೇಕ ಸಂಸ್ಥೆಗಳೆಂದು ತಿಳಿದು ಬಂದಿದೆ.
– ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ನೀಡಲಾಗುವ ಪ್ರಮಾಣ ಪತ್ರದಲ್ಲಿಯೂ ವ್ಯತ್ಯಾಸವಾಗಿದೆ. ಈ ಕಡತಗಳನ್ನು ಪರಿಶೀಲಿಸಿದಾಗ ಪ್ರಗತಿ ಹೆಸರಿನಲ್ಲಿ (ಈ ಪ್ರಗತಿ, ಈ-ಪ್ರಗತಿ ರಿಸೈಕ್ಲಿಂಗ್ ಮತ್ತು ಈ- ಪ್ರಗತಿ ರಿಸೈಕಲ್ ಪ್ರೈ.ಲಿ.) ಮೂರು ಸಂಸ್ಥೆಗಳಿರುವುದು ಕಂಡು ಬಂದಿದೆ.
– ಇ- ತ್ಯಾಜ್ಯ ಸಂಸ್ಕರಿಸಲು 2020ನೇ ಸಾಲಿನಲ್ಲಿ ಮಾತ್ರ ಅನುಮತಿ ಪಡೆದಿದ್ದು, 2018-19 ಮತ್ತು 2019-20ರಲ್ಲಿ ಯಾವುದೇ ಅನುಮತಿಯನ್ನು ಪಡೆದಿರುವುದಿಲ್ಲ. ಅವಶ್ಯವಿರುವ ಮೂಲ ದಾಖಲೆಗಳು ಇಲ್ಲದಿದ್ದರೂ ಟೆಂಡರ್ ಒಪ್ಪಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಲೆಡ್ ಆಸಿಡ್ ಬ್ಯಾಟರಿಗಳ ವಿಲೇವಾರಿಗೆ ದಾಖಲೆಗಳಿಲ್ಲದಿದ್ದರೂ ತಾಂತ್ರಿಕ ಅರ್ಹತೆ ನೀಡಿರುವುದು.
– ಅಲ್ಲದೆ, ಎರಡೂ ಸಂಸ್ಥೆಗಳು ಕಾನೂನಾತ್ಮಕವಾಗಿ ವಿಲೀನವಾಗಿಲ್ಲ. ಟರ್ನ್‌ಓವರ್ ಮತ್ತು ನೆಟ್‌ವರ್ತ್‌ಗೆ ಸಂಬಂಧಿಸಿದ ಐಟಿ ರಿಟರ್ನ್ಸ್ ಕೂಡ ತಾಳೆಯಾಗಿಲ್ಲ.
– ಟೆಂಡರ್‌ದಾರರ ಕಾರ್ಯಕ್ಷಮತೆಯನ್ನು ಪರರಿಶೀಲಿಸದೆ ಕೇವಲ ಸ್ವಯಂ ದೃಢೀಕರಣ ಪತ್ರವನ್ನು ನೋಡಿ ಟೆಂಡರ್ ನೀಡಲಾಗಿದೆ. ಕೆಟಿಪಿಟಿ ನಿಯಮಗಳನ್ನು ಪಾಲಿಸದೆ ಹಾಗೂ ಕೆಸಿಎಸ್ ನಿಯಮಗಳ ನಿಯಮ 3 ಮತ್ತು 20ರ ಸ್ಪಷ್ಟ ಉಲ್ಲಂಘನೆಯಾಗಿದೆ.
ಡಿಎಸ್‌ಇಆರ್‌ಟಿ ನಿರ್ದೇಶಕಿಗೆ ನೀಡಿದ ನೋಟಿಸ್‌ನಲ್ಲಿ ಏನಿದೆ?
– ಎರಡೂ ಸಂಸ್ಥೆಗಳ ನೋಂದಣಿ ಹಾಗೂ ಕಾರ್ಯನಿರ್ವಹಿಸುತ್ತಿರುವ ಸ್ಥಳವೂ ಸಹ ಪ್ರತ್ಯೇಕವಾಗಿದೆ. ಅಗತ್ಯ ಭೌತಿಕ ಸಾಮರ್ಥ್ಯ ಇ-ಪ್ರಗತಿ ರಿಸೈಕ್ಲಿಂಗ್ ಪ್ರೈ ಲಿ. ನಿರ್ದಿಷ್ಟಪಡಿಸಿದ ವರ್ಷಗಳಿಗೆ ಇಲ್ಲದಿರುವುದು ಕಂಡುಬಂದಿದೆ. ನಿರ್ದೇಶಕರ ಸಮಜಾಯಿಷಿಯನ್ನು ಒಪ್ಪುವುದಿಲ್ಲ.
– ಎಚ್-1 ದರ 9.87 ಕೋಟಿ ರೂ.ಗಳಿಗೆ 2ನೇ ಟೆಂಡರ್‌ನಲ್ಲಿ ಬಿಡ್‌ದಾರರು ಅತಿ ಹೆಚ್ಚು ಬಿಡ್ ಅನ್ನು ಸಲ್ಲಿಸಿರುವುದು ಕಂಡುಬಂದಿದೆ. ಇವರಿಗೆ ಬಿಡ್ ನೀಡದೆ ಟೆಂಡರ್ ಅನ್ನು ಮುಕ್ತಾಯಗೊಳಿಸಲಾಗಿದೆ. ಮರು ಟೆಂಡರ್ ಕರೆದು ತಾಂತ್ರಿಕ ನ್ಯೂನ್ಯತೆಗಳಿದ್ದರೂ ಟೆಂಡರ್ ಅಂಗೀಕರಿಸಿರುವುದು ಏಕೆ ಎಂದು ಪ್ರಶ್ನಿಸಲಾಗಿದೆ.
ತನಿಖೆಯಲ್ಲಿ ಕಂಡು ಬಂದ ಅಂಶಗಳು
– 2ನೇ ಟೆಂಡರ್‌ನಲ್ಲಿ ಕೆಲವು ವಸ್ತುಗಳನ್ನು ಶೂನ್ಯವೆಂದು ತೋರಿಸಿ 4ನೇ ಟೆಂಡರ್‌ನಲ್ಲಿ ಹೆಚ್ಚಿನ ಮಟ್ಟದಲ್ಲಿ ತೋರಿಸಿರುವುದು.
– 2ನೇ ಟೆಂಡರ್‌ನಲ್ಲಿ ಲೆಡ್ ಬ್ಯಾಟರಿಗಳಿಗೆ ಪರಿಗಣಿಸಿದ್ದಲ್ಲಿ 12,12,200 ಕೆಜಿಗಳಲಿದ್ದು, ಏಕಾಏಕಿ 4ನೇ ಟೆಂಡರ್‌ನಲ್ಲಿ ಕೇವಲ 7,13,475 ಕೆಜಿಗಳಷ್ಟು ಇರುವುದು ಕಂಡುಬಂದಿದೆ. 4,98,725 ಕೆಜಿಗಳಷ್ಟು ಒಂದೇ ಬಾರಿ ಕಡಿಮೆಯಾಗಿದೆ.
– ಮಾನಿಟರ್ ಮತ್ತು ಯುಪಿಎಸ್ ಸಿಸ್ಟಂಗಳನ್ನು ಅವಲೋಕಿಸಿದಾಗ ಅಂದಾಜು ತೂಕದಲ್ಲಿ ವ್ಯತ್ಯಾಸವಾಗಿದೆ. ಕರ್ತವ್ಯ ನಿರ್ಲಕ್ಷ್ಯ ಹಾಗೂ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + 19 =
Remember me
