ತುಮಕೂರು:ಆಸ್ಪತ್ರೆಯೊಂದರಲ್ಲಿ ವೈದ್ಯರಿಲ್ಲದೆ ಬಾಲಕ ಸಾವಿಗೀಡಾಗಿದ್ದು, ಶವವನ್ನು ಕುಟುಂಬಸ್ಥರು ಮಾಜಿ ಮುಖ್ಯಮಂತ್ರಿಯವರ ಮುಂದಿಟ್ಟು ನ್ಯಾಯ ಕೊಡಿಸುವಂತೆ ಮನವಿ ಮಾಡಿಕೊಂಡ ಪ್ರಕರಣ ನಡೆದಿದೆ. ತುಮಕೂರು ಜಿಲ್ಲೆಯಲ್ಲಿ ಈ ಪ್ರಕರಣ ನಡೆದಿದೆ.
ಮಧುಗಿರಿ ತಾಲೂಕಿನ ಕೊಡಿಗೆನಹಳ್ಳಿಯಲ್ಲಿ ಈ ಪ್ರಕರಣ ನಡೆದಿದೆ. ಕೊಡಿಗೆನಹಳ್ಳಿ ನಿವಾಸಿ ಚೌಕತ್ ಎಂಬವರ ಪುತ್ರ ಸಾದೀಕ್ ಸಾವಿಗೀಡಾದ ಬಾಲಕ. ಬೆಳಗ್ಗೆ ಶಾಲೆಗೆ ಹೋಗಿದ್ದ ಈತ ಮನೆಗೆ ಬಂದಾಗ ನೀರಿನ ಸಂಪ್​ಗೆ ಬಿದ್ದು ಅಸ್ವಸ್ಥನಾಗಿದ್ದ. ಕೂಡಲೇ ಈತನನ್ನು ಕೊಡಿಗೆನಹಳ್ಳಿ ಆಸ್ಪತ್ರೆಗೆ ಕುಟುಂಬಸ್ಥರು ಕರೆತಂದಿದ್ದರು.
ಆದರೆ ಆಸ್ಪತ್ರೆಯಲ್ಲಿ ಆ ಸಮಯದಲ್ಲಿ ವೈದ್ಯರಿಲ್ಲದೆ ಚಿಕಿತ್ಸೆ ಸಿಗದ್ದರಿಂದ ಬಾಲಕ ಮೃತಪಟ್ಟಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಅಲ್ಲದೆ ಪಂಚರತ್ನ ಯಾತ್ರೆಯಲ್ಲಿದ್ದ ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ಅವರ ಬಳಿಕ ಬಾಲಕನ ಶವ ತಂದಿರಿಸಿ, ನ್ಯಾಯ ಕೊಡಿಸುವಂತೆ ಮನವಿ ಮಾಡಿಕೊಂಡಿದ್ದಾರೆ.
ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಕುಮಾರಸ್ವಾಮಿ, ಸ್ಥಳದಲ್ಲೇ ಸಿಎಂ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್​ಗೆ ಕರೆ ಮಾಡಿ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಡಿಎಚ್​ಒ ವಿರುದ್ಧ ಕ್ರಮಕೈಗೊಳ್ಳುವಂತೆ ಹೇಳಿದ್ದಲ್ಲದೆ, ವೈದ್ಯರ ವಿರುದ್ಧ ಕೊಡಿಗೆನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುವಂತೆ ಕುಟುಂಬಸ್ಥರಿಗೆ ಸೂಚನೆ ನೀಡಿದ್ದಾರೆ.
ಮೂರೂವರೆ ನಿಮಿಷಗಳಲ್ಲಿ ಪಾಸ್ತಾ ಆಗ್ತಿಲ್ಲ ಅಂತ ಕಂಪನಿ ವಿರುದ್ಧ ಸುಮಾರು 40 ಕೋಟಿ ರೂ. ಕೇಸ್ ಹಾಕಿದ ಯುವತಿ!

ನಿಮ್ಮ ದಾಖಲೆಗಳನ್ನು ನೀಡಿ ಬೇರೆ ಯಾರೋ ಸಿಮ್​ ಪಡೆದಿರಬಹುದು!; ಚೆಕ್ ಮಾಡಿಕೊಳ್ಳುವುದು ಹೇಗೆ? ಇಲ್ಲಿದೆ ಮಾಹಿತಿ..

ಮದ್ವೆ ಆಗದೆ 2 ವರ್ಷ ಒಂದೇ ರೂಮಲ್ಲಿದ್ರು ಬ್ಯೂಟಿಷಿಯನ್​-ಬಾರ್ಬರ್; ಕೊನೆಗೆ ಅವನ ಸಿಟ್ಟಿಗೆ ಅವಳ ಪ್ರಾಣವೇ ಹೋಯ್ತು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 8 =
Remember me
