|ರುದ್ರಣ್ಣ ಹರ್ತಿಕೋಟೆಬೆಂಗಳೂರು
ರೈತರು ಆಹಾರ ಧಾನ್ಯಗಳ ಉತ್ಪಾದನೆಗಿಂತ ವಾಣಿಜ್ಯ ಬೆಳೆಗಳ ಕಡೆ ಹೆಚ್ಚಿನ ಆಸಕ್ತಿ ತೋರಿಸುತ್ತಿರುವುದು ರಾಜ್ಯದಲ್ಲಿ ಆಹಾರ ಧಾನ್ಯದ ಕೊರತೆ ಉಂಟಾಗಬಹುದೇ? ಎಂಬ ಆತಂಕ ಹುಟ್ಟುಹಾಕಿದೆ. ಕಳೆದೊಂದು ದಶಕಗಳ ಅವಧಿಯಲ್ಲಿ ಆಹಾರ ಧಾನ್ಯಗಳನ್ನು ಬೆಳೆಯುವ ಕೃಷಿ ಪ್ರದೇಶ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತ ಬರುತ್ತಿದೆ. ಇದು ಉತ್ಪಾದನೆ ಮೇಲೂ ಪರಿಣಾಮ ಉಂಟುಮಾಡಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಸಮಸ್ಯೆ ಬಿಗಡಾಯಿಸಬಹುದೆನ್ನ ಲಾಗುತ್ತಿದೆ.ಭತ್ತ, ಜೋಳ, ರಾಗಿಯಂತಹ ಬೆಳೆಗಳು ಲಾಭ ತರುವ ಬೆಳೆಗಳಲ್ಲ ಎಂಬ ಭಾವನೆ ರೈತರಲ್ಲಿ ಮನೆ ಮಾಡಲಾರಂಭಿಸಿದೆ. ಆದ್ದರಿಂದಲೇ ಅಡಕೆ, ಹತ್ತಿ, ಸೋಯಾಬಿನ್, ಮೆಕ್ಕೆಜೋಳದಂತಹ ಬೆಳೆಗಳ ಕಡೆ ರೈತ ವರ್ಗ ಗಮನ ಕೇಂದ್ರೀಕರಿಸುತ್ತಿದೆ.
ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ರೈತರು ವಾಣಿಜ್ಯ ಬೆಳೆಗಳಿಂದ ಮಾತ್ರ ಹಣ ನೋಡಬಹುದೆಂಬ ಮಹದಾಶಯ ಹೊಂದಿದ್ದಾರೆ. ಇದು ಆಹಾರದ ಲಭ್ಯತೆ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂಬುದು ಕೃಷಿ ತಜ್ಞರ ಅಭಿಪ್ರಾಯ.
ಎಷ್ಟು ಕಡಿಮೆ?:ಸರ್ಕಾರಕ್ಕೆ ಲಭ್ಯವಿರುವ ಮಾಹಿತಿ ಪ್ರಕಾರ ಕಳೆದ ವರ್ಷದಲ್ಲಿ ಸುಮಾರು 8 ಲಕ್ಷ ಹೆಕ್ಟೇರ್ ಜೋಳ , ಅಂದಾಜು 2 ಲಕ್ಷ ಹೆಕ್ಟೇರ್ ರಾಗಿ , 50 ಸಾವಿರ ಹೆಕ್ಟೇರ್​ಗೂ ಹೆಚ್ಚು ಭತ್ತ ಬಿತ್ತನೆ ಪ್ರದೇಶ ಕಡಿಮೆಯಾಗಿವೆ. ಅದೇ ಪ್ರಮಾಣದಲ್ಲಿಯೇ ಕೃಷಿ ಬೆಳೆಗಳ ಬಿತ್ತನೆ ಪ್ರದೇಶ ಕುಸಿತವಾಗುತ್ತಿದೆ.
ಹೆಚ್ಚಾಗಿರುವುದು:ಮೆಕ್ಕೆಜೋಳ 7 ಲಕ್ಷ ಹೆಕ್ಟೇರ್ ಹೆಚ್ಚಾಗಿದ್ದರೆ, ಮಲೆನಾಡಿಗೆ ಸೀಮಿತವಾಗಿದ್ದ ಅಡಕೆ ಈಗ ಮಧ್ಯ ಕರ್ನಾಟಕ ಹಾಗೂ ರಾಜ್ಯದ ದಕ್ಷಿಣ ಭಾಗದಲ್ಲೂ ವ್ಯಾಪಿಸುತ್ತಿದ್ದು, ಕಳೆದ ಹದಿನೈದು ವರ್ಷಗಳಲ್ಲಿ ಶೇ.200 ಹೆಚ್ಚಾಗಿದೆ.
ಕೃಷಿ ವಿಸ್ತೀರ್ಣ ಹೆಚ್ಚಳ:ಕೃಷಿ ಮತ್ತು ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ಪ್ರದೇಶ ಹೆಚ್ಚಳವಾಗಿದೆ. ಹದಿನೈದು ವರ್ಷಗಳಲ್ಲಿ 11.38 ಲಕ್ಷ ಹೆಕ್ಟೇರ್​ನಷ್ಟು ಕೃಷಿ ಪ್ರದೇಶ ವಿಸ್ತೀರ್ಣ ಹೆಚ್ಚಾಗಿದೆ. 2005-06ರಲ್ಲಿ 111.5 ಲಕ್ಷ ಹೆಕ್ಟೇರ್ ಇದ್ದದ್ದು ಈಗ 122.92 ಲಕ್ಷ ಹೆಕ್ಟೇರ್​ಗೆ ತಲುಪಿದೆ.
ಆಹಾರ ಧಾನ್ಯ ಎಷ್ಟು ಕಡಿಮೆ?:ರಾಜ್ಯದಲ್ಲಿ ಪ್ರತಿ ವರ್ಷ ಸರಾಸರಿ 160 ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯ ಉತ್ಪಾದನೆಯಾಗುತ್ತದೆ ಎಂಬ ಅಂದಾಜು ಇದೆ. ಆದರೆ, ಈ ವರ್ಷ 114 ಲಕ್ಷ ಮೆಟ್ರಿಕ್ ಟನ್​ಗೆ ಸೀಮಿತವಾಗುತ್ತಿದೆ. ಆಹಾರ ಧಾನ್ಯಗಳ ಉತ್ಪಾದನೆ ಪ್ರದೇಶ ಕಡಿಮೆಯಾಗುತ್ತಿರುವುದರ ಜತೆಗೆ ಪ್ರವಾಹವೂ ಕಾರಣವಾಗಿರುವುದರಿಂದ ಹೆಚ್ಚು ಪ್ರಮಾಣದಲ್ಲೇ ಕಡಿಮೆಯಾಗಿದೆ.
ಆಹಾರ ಧಾನ್ಯಗಳ ಬೆಳೆಯುವ ಪ್ರದೇಶ ಕಡಿಮೆಯಾಗುತ್ತಿರುವ ಆತಂಕ ಇದೆ. ಅದನ್ನು ಸರಿದೂಗಿಸಲು ಸವಳು-ಜವಳು ಸರಿಪಡಿಸುವುದು ಹಾಗೂ ಅನುಪಯುಕ್ತ ಭೂಮಿಯನ್ನು ಕೃಷಿ ಬಳಕೆಗೆ ಯೋಗ್ಯವಾಗುವಂತೆ ಅಭಿವೃದ್ಧಿ ಪಡಿಸುವ ಕಡೆ ಸರ್ಕಾರ ಗಮನ ಹರಿಸಿದೆ.
|ಬಿ.ಸಿ. ಪಾಟೀಲ್ಕೃಷಿ ಸಚಿವ
ಕೃಷಿ ಉತ್ಪಾದನೆ ಕುಂಠಿತವಾದರೆ ಆಹಾರದ ಕೊರತೆ ತಲೆದೋರುತ್ತದೆ. ಸರ್ಕಾರ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಕೃಷಿ ಬೆಲೆ ಆಯೋಗದ ವರದಿಯ ಶಿಫಾರಸುಗಳನ್ನು ತಕ್ಷಣದಿಂದ ಜಾರಿಗೆ ತರಬೇಕು. ಅದರ ಆಧಾರದಲ್ಲಿ ಯೋಜನೆಗಳು ಸಿದ್ಧವಾಗಬೇಕು.
|ಡಾ. ಪ್ರಕಾಶ್ ಕಮ್ಮರಡಿಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ
ಸಿರಿಧಾನ್ಯಕ್ಕಿಲ್ಲ ಪ್ರೋತ್ಸಾಹ:ಪ್ರಸಕ್ತ ವರ್ಷ ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷವಾಗಿದೆ. ಆದರೆ, ಕೇಂದ್ರ ಸರ್ಕಾರ ಸಿರಿಧಾನ್ಯ ಬೆಳೆಗಳಾದ ನವಣೆ, ಭಾರಗ, ಆರಕ, ಬಾರ್ಲಿಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಿಲ್ಲ. ಆದ್ದರಿಂದ ರೈತರಿಗೆ ಈ ಬೆಳೆಗಳ ಬಗ್ಗೆ ಆಸಕ್ತಿಯೇ ಇಲ್ಲದಂತಾಗಿದೆ. ಸುಮಾರು 40 ಸಾವಿರ ಹೆಕ್ಟೇರ್​ನಲ್ಲಿ ಮಾತ್ರ ಈ ಉತ್ಪನ್ನಗಳನ್ನು ಬೆಳೆಯಲಾಗುತ್ತಿದೆ. ಎಂಎಸ್​ಪಿ ನಿಗದಿ ಮಾಡಿ, ಖರೀದಿ ಮಾಡಿದರೆ ಈ ಬೆಳೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಸಲು ರೈತರು ಮುಂದಾಗಬಹುದೆಂದು ಹೇಳಲಾಗುತ್ತಿದೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − one =
Remember me
