– ಸಿದ್ದರಾಮಯ್ಯಗೆ ಅನಾರೋಗ್ಯದ ಕಾರಣ ನೀಡಿ ಸಭೆ ಮುಂದಕ್ಕೆ
ಬೆಂಗಳೂರು:ಹಾಲು ದರ ಏರಿಕೆಗೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ವಿಧಾನ ಮಂಡಲ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ ಈ ವಿಷಯದ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂಜರಿದಿದ್ದಾರೆ.ಇದರಿಂದಾಗಿ ಸಿಎಂ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಶುಕ್ರವಾರ ಸಂಜೆ ನಿಗದಿಯಾಗಿದ್ದ ಕೆಎಂಎಫ್​​ ಹಾಗೂ ಹಾಲು ಒಕ್ಕೂಟಗಳ ಜತೆಗಿನ ಸಭೆ ಮುಂದೂಡಿಕೆಯಾಗಿದೆ.
ಇದನ್ನೂ ಓದಿ:ಚಂದ್ರಯಾನ -3 ಯಶಸ್ವಿ ಉಡಾವಣೆ ಹಿಂದಿದ್ದಾರೆ ‘ರಾಕೆಟ್ ಮಹಿಳೆ’ ರಿತು ಶ್ರೀವಾಸ್ತವ
ಸಿಎಂ ಜತೆಗೆ ಚರ್ಚೆಗೆಂದು ಬಂದಿದ್ದ ಕೆಎಂಎಫ್​​ ಅಧ್ಯಕ್ಷ, ಶಾಸಕ ಭೀಮಾನಾಯ್ಕ, ವಿವಿಧ ಜಿಲ್ಲೆಗಳ ಹಾಲು ಒಕ್ಕೂಟದ ಪದಾಧಿಕಾರಿಗಳು ಬರಿಗೈಲಿ ವಾಪಸ್ಸಾದರು.
ಇದನ್ನೂ ಓದಿ:ನನಗೆ ಹುಡುಗ ಬೇಕು.. ಇಷ್ಟವಾಗುವ ವ್ಯಕ್ತಿಯನ್ನು ಹುಡುಕಿಕೊಟ್ಟವರಿಗೆ 4 ಲಕ್ಷ ರೂ. ಬಹುಮಾನ
ರೈತರ ಪೂರೈಸುವ ಪ್ರತಿ ಲೀಟರ್ ಹಾಲಿಗೆ ಪ್ರೋತ್ಸಾಹಧನ ಹೆಚ್ಚಳದ ಪ್ರಸ್ತಾವನೆಯೊಂದಿಗೆ ಹಾಲಿನ ದರ ಹೆಚ್ಚಳಕ್ಕೂ ಕೆಎಂಎಫ್​​ ಹಾಗೂ ಹಾಲು ಒಕ್ಕೂಟಗಳು ಉತ್ಸುಕವಾಗಿದ್ದವು. ಈ ಕುರಿತು ಸಿಎಂ ಸಿದ್ದರಾಮಯ್ಯ ಜತೆಗೆ ಚರ್ಚಿಸಿ ಒಪ್ಪಿಗೆ ಪಡೆಯುವ ಉದ್ದೇಶದಿಂದ ಪೂರ್ವಭಾವಿ ಕೋರಿಕೆಯಂತೆ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಿಗದಿಯಾಗಿತ್ತು.
ಇದನ್ನೂ ಓದಿ:Alternative To Tomatoes; ಟೊಮ್ಯಾಟೋ ಬದಲಿಗೆ ಅಡುಗೆಗೆ ಈ 5 ಪದಾರ್ಥ ಬಳಸಿ…
ಸಾರ್ವಜನಿಕರ ವಿರೋಧದ ನಡುವೆ ಏರಿಸಿದರೆ ಆಕ್ರೋಶ ಭುಗಿಲೇಳುತ್ತದೆ. ಪ್ರತಿಪಕ್ಷಗಳಿಗೆ ಸುಲಭ ಆಹಾರವಾಗುತ್ತದೆ ಎಂದು ಅರಿತ ಸಿದ್ದರಾಮಯ್ಯ, ಅಧಿವೇಶನ ಮುಗಿದ ನಂತರ ಸಭೆ ಕರೆಯಲು ತೀರ್ಮಾನಿಸಿದರು ಎನ್ನಲಾಗಿದೆ. ಆದರೆ ಮುಖ್ಯಮಂತ್ರಿಗೆ ಅನಾರೋಗ್ಯ ಹಿನ್ನೆಲೆಯಲ್ಲಿ ಸಭೆ ಮುಂದೂಡಲಾಗಿದೆ ಎಂಬ ಮಾಹಿತಿಯನ್ನು ಸಿಎಂ ಅಧಿಕಾರಿಗಳಿಂದ ನೀಡಲಾಯಿತು. ಪೂರ್ಣ ಸಿದ್ಧತೆಯೊಂದಿಗೆ ಆಗಮಿಸಿದ್ದ ಕೆಎಂಎಫ್​​ ಅಧ್ಯಕ್ಷ, ಹಾಲು ಒಕ್ಕೂಟಗಳ ನಿರ್ದೇಶಕರು ನಿರಾಸೆಯಿಂದ ಮರಳಿದರು.
ಆಸಿಡ್ ಎರಚಿ, ನಾಲಿಗೆಯನ್ನು ಕತ್ತರಿಸಿ, ಕಣ್ಣು, ಹಲ್ಲುಗಳನ್ನು ಕಿತ್ತು ಬಾಲಕಿ ಹತ್ಯೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 4 =
Remember me
