ಬೆಳಗಾವಿ/ಬಾಗಲಕೋಟೆ:ರಾಜ್ಯದಲ್ಲಿ ಮಳೆ ಅವಾಂತರಕ್ಕೆ ಇಂದೊಬ್ಬರು ಬಲಿಯಾಗಿದ್ದು ಒಂದೆಡೆಯಾದರೆ, ಮತ್ತೊಂದೆಡೆ ರಸ್ತೆ ಮಧ್ಯೆ ಕಾರೊಂದು ಭಾರಿ ಅಪಘಾತದಿಂದ ಸ್ವಲ್ಪದರಲ್ಲೇ ಪಾರಾಗಿದೆ. ಇನ್ನೊಂದೆಡೆ ಹಲವು ಬೈಕ್‌ಗಳು ಒಟ್ಟಿಗೇ ಜಖಂಗೊಂಡಿವೆ.‌
ಬೆಳಗಾವಿಯ ಕ್ಲಬ್ ರಸ್ತೆಯಲ್ಲಿ ಚಲಿಸುತ್ತಿದ್ದ ಬೈಕ್ ಮೇಲೇ ಮರವೊಂದು ಬಿದ್ದ ಪರಿಣಾಮವಾಗಿ ಬೈಕ್ ಸವಾರ ವಿಜಯ್ ಕೊಲ್ಲಾಪುರೆ (58) ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಇವರು ಕೆಲಸ ಮುಗಿಸಿ ಮನೆಗೆ ಮರಳುವಾಗ ಈ ಅವಘಡ ಸಂಭವಿಸಿದೆ. ಕ್ಯಾಂಪ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಉಳಿದಂತೆ ಬೆಳಗಾವಿಯ ಇತರ ಭಾಗಗಳಲ್ಲೂ ಭಾರಿ ಮಳೆಯಾಗಿದ್ದು, ವಾಹನ ಸವಾರರಿಗೆ ಪ್ರಯಾಸದ ಪರಿಸ್ಥಿತಿ ಎದುರಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ‌. ಸುಮಾರು ಎರಡು ಗಂಟೆಗಳಿಂದ ಸುರಿಯುತ್ತಿರುವ ಮಳೆ ಅವಾಂತರಕ್ಕೆ ಬೆಳಗಾವಿ ನಲುಗಿ ಹೋಗಿದೆ.
ಬೆಳಗಾವಿ ಜಿಲ್ಲಾಸ್ಪತ್ರೆ ಎದುರಿನ ರಸ್ತೆಯಲ್ಲಿ ಬೃಹತ್ ಮರ ಬಿದ್ದಿದ್ದರಿಂದಾಗಿ ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ್ದ 30ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಜಖಂಗೊಂಡಿವೆ‌. ಜೊತೆಗೆ ಇಬ್ಬರು ಗಾಯಗೊಂಡಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕುಳಗೇರಿ ಕ್ರಾಸ್​​ನಲ್ಲಿ ಭೀಕರ ಗಾಳಿ ಮಳೆ ಹೊಡೆತಕ್ಕೆ ಸಿಲುಕಿದ ಕಾರೊಂದು ಭಾರಿ ಅಪಾಯದಿಂದ ಪಾರಾಗಿದೆ. ಕಾರು ರಸ್ತೆಯಲ್ಲಿ ಚಲಿಸುತ್ತಿದ್ದು, ಗಾಳಿ ಮಳೆಯಿಂದ ಮುಂದಕ್ಕೆ ಹೋಗಲಾಗದ ಅಲ್ಲೇ ರಸ್ತೆಯಲ್ಲೇ ನಿಂತಿದ್ದಾಗಲೇ ಮೇಲ್ಛಾವಣಿ ತಗಡು ಹಾರಿ ಬಂದಿದ್ದು, ಕಾರಿನ ಪಕ್ಕದಲ್ಲೇ ಹಾದುಹೋಗಿದೆ. ಒಂದುವೇಳೆ ಕಾರು ಚಲನೆಯಲ್ಲಿದ್ದು ತಗಡು ಕಾರಿಗೆ ಬಡಿದಿದ್ದರೆ ಭಾರಿ ಅಪಘಾತ ಸಂಭವಿಸುವ ಸಾಧ್ಯತೆ ಇತ್ತು.
ಡಿ.ಕೆ.ಶಿವಕುಮಾರ್​​ರನ್ನು ನಿಂದಿಸಿದ್ದ ವ್ಯಕ್ತಿಗೆ 2 ವರ್ಷ ಜೈಲುಶಿಕ್ಷೆ!
Sign in to your account
Please enter an answer in digits:5 × four =
Remember me
