ಬೆಂಗಳೂರು:ಜನರು ತಮ್ಮ ತಮ್ಮ ಕೆಲಸಗಳಿಗೆ ತೆರಳುವ ಪೀಕ್​ ಅವರ್​ನಲ್ಲೇ ನಮ್ಮ ಮೆಟ್ರೋ ರೈಲು ಕೈ ಕೊಟ್ಟಿದೆ. ತಾಂತ್ರಿಕ ಕಾರಣದಿಂದ ನೇರಳೆ ಮಾರ್ಗದ ಮೆಟ್ರೋ ಸಂಚಾರದಲ್ಲಿ ವ್ಯತ್ಯಯವಾಗಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ.
ಕೆಂಗೇರಿಯಿಂದ ಬೈಯ್ಯಪ್ಪನಹಳ್ಳಿ ಕಡೆಗೆ ಸಾಗುವ ಮೆಟ್ರೋ ಸಂಚಾರ ಕೆಲ ಸಮಯದಿಂದ ತಾಂತ್ರಿಕ ಕಾರಣದಿಂದಾಗಿ ಸ್ಥಗಿತಗೊಂಡಿದೆ. ಜನರು ಕೆಸಲಕ್ಕೆ ತೆರಳುವ ಸಮಯದಲ್ಲೇ ಮೆಟ್ರೋ ಕೆಟ್ಟು ನಿಂತಿದ್ದು, ಟ್ರೈನ್​ ಬಾರದೇ, ಸರಿಯಾದ ಸಮಯಕ್ಕೆ ಕಚೇರಿಗೆ ತಲುಪಲು ಸಾಧ್ಯವಾಗದೇ ಪ್ರಯಾಣಿಕರು ಪರದಾಡುತ್ತಿದ್ದಾರೆ.
ಇದನ್ನೂ ಓದಿ:ಮೂರು ವರ್ಷದಲ್ಲಿ ಒಂದು ಸಾವಿರ ಬಸ್ ಖರೀದಿ: ವಿಜಯಾನಂದ ಟ್ರಾವೆಲ್ಸ್ ಪ್ರೈ.ಲಿ. ಎಂಡಿ ಶಿವ ಸಂಕೇಶ್ವರ ಘೋಷಣೆ
ಆಫೀಸ್​ಗೆ ಹೊರಟವರೆಲ್ಲ ನಿಲ್ದಾಣದಲ್ಲೇ ಮೆಟ್ರೋಗಾಗಿ ಕಾಯೋ ಪರಿಸ್ಥಿತಿ ಎದುರಾಗಿದೆ. ಬೆಳಗ್ಗೆ 8.50ರಿಂದ ಮೆಟ್ರೋ ಕೈಕೊಟ್ಟಿದೆ.
ಸದ್ಯ ಬಂದಿರುವ ಮಾಹಿತಿ ಪ್ರಕಾರ ತಾಂತ್ರಿಕ ದೋಷವನ್ನು ನಿವಾರಿಸುವ ಕೆಲಸ ನಡೆಯುತ್ತಿದ್ದು, ಶೀಘ್ರದಲ್ಲೇ ಮೆಟ್ರೋ ಸಂಚಾರ ಮತ್ತೆ ಆರಂಭವಾಗಲಿದೆ ಎಂದು ಬಿಎಂಆರ್​ಸಿಎಲ್​ ತಿಳಿಸಿದೆ.(ದಿಗ್ವಿಜಯ ನ್ಯೂಸ್​)
ಗಂಡ-ಗರ್ಲ್​ಫ್ರೆಂಡ್​ ಕಹಾನಿ: ಡೆತ್​ನೋಟ್​ ಬರೆದು,​ ಸ್ಟೇಟಸ್ ಹಾಕಿ ಬದುಕು ಅಂತ್ಯಗೊಳಿಸಿದ ಗೃಹಿಣಿ

ಕೆಲಸಕ್ಕೆಂದು ಆಫ್ರಿಕಾಗೆ ಹೋಗಿದ್ದ ಮೈಸೂರಿನ ಯುವಕ ದುರಂತ ಸಾವು: ಪಾಲಕರಲ್ಲಿ ಮುಗಿಲು ಮುಟ್ಟಿದ ಆಕ್ರಂದನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + seven =
Remember me
