ಬೆಂಗಳೂರು:ನಟ ದುನಿಯಾ ವಿಜಯ್ ಮಗನ ಮೇಲೆ ಹಲ್ಲೆ ಪ್ರಕರಣಕ್ಕೆ ಇಗ ಮತ್ತೊಮ್ಮೆ ಜೀವ ಬಂದಿದೆ. ಇದೀಗ ದುನಿಯಾ ವಿಜಯ್ ಮಗನ ಮೇಲೆ ಹಲ್ಲೆ ಮಾಡಿದ್ದ ಪಾನಿಪುರಿ ಕಿಟ್ಟಿ ಮೇಲೆ FIR ದಾಖಲು ಮಾಡಲಾಗಿದೆ.
2018 ರ ಪ್ರಕರಣ ಮತ್ತೆ ರೀ ಓಪನ್ ಆಗಿದ್ದು ನಟ ದುನಿಯಾ ವಿಜಯರಿಂದ ದೂರು ದಾಖಲಾಗಿದೆ. ಈ ಹಿಂದೆ ಸಾಕ್ಷ್ಯಾಧಾರಗಳ ಕೊರತೆಯಿಂದ ಪ್ರಕರಣ ಕಡತದಲ್ಲೇ ಉಳಿದಿತ್ತು. ಇದೀಗ ಹೈಕೋರ್ಟ್ ಸೂಚನೆ ಮೇರೆಗೆ ದುನಿಯಾ ವಿಜಯ್​ ಇದೀಗ FIR ದಾಖಲಿಸಿದ್ದಾರೆ.
23/09/2018 ರಲ್ಲಿ ದುನಿಯಾ ವಿಜಯ್​ ಮತ್ತು ಪಾನಿಪುರಿ ಕಿಟ್ಟಿ ನಡುವೆ ಗಲಾಟೆ ನಡೆದಿತ್ತು. ಅಂದು ವಸಂತ ನಗರ ಅಂಬೇಡ್ಕರ್ ಭವನದಲ್ಲಿ ನಡೆದಿದ್ದ ದೇಹದಾರ್ಡ್ಯ ಸ್ಪರ್ಧೆ ನಡೀತಾ ಇತ್ತು. ಅಲ್ಲಿ ಪಾನಿಪುರಿ ಕಿಟ್ಟಿ ಹಾಗೂ ದುನಿಯಾ ವಿಜಯ್​ಗೂ ಗಲಾಟೆ ನಡೆದಿದೆ. ಅಂದು ಪಾನಿಪುರಿ ಕಿಟ್ಟಿ ಸಹೋದರ ಮಾರುತಿ‌ ಗೌಡ ಕೂಡ ಸ್ಪರ್ಧೆ ಮಾಡಿದ್ದ. ಅಂದು ಎರಡೂ ತಂಡಗಳ ನಡುವೆ ಗಲಾಟೆ ನಡೆದಿತ್ತು. ಗಲಾಟೆ ನಂತರ ದುನಿಯಾ ವಿಜಯ್, ಮಾರುತಿಗೌಡನನ್ನು ಕಾರಲ್ಲಿ ಕರೆದೊಯ್ದಿದ್ದ.
ಕಾರಿನಲ್ಲಿ ಮಾರುತಿಗೆ ವಿಜಯ್ ಟೀಂ ಹಿಗ್ಗಾಮುಗ್ಗಾ ಥಳಿಸಿದ್ದರು. ನಂತರ ಮಧ್ಯರಾತ್ರಿ ಪೊಲೀಸರ ಕರೆ ಮೇರೆಗೆ ಮಾರುತಿ ಗೌಡನನ್ನು ದುನಿಯಾ ವಿಜಯ್​ ತಂಡ ವಾಪಸ್ ಕರೆತಂದಿತ್ತು. ಈ ಸಂದರ್ಭ ತೀವ್ರ ಥಳಿತಕ್ಕೊಳಗಾಗಿದ್ದ ಮಾರುತಿ ತಿಂಗಳುಗಟ್ಟಲೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ರು.
ಅದಾದ ಮೇಲೆ ಎರಡೂ ಕಡೆ ಕೌಂಟರ್ ಕಂಪ್ಲೆಂಟ್ ದಾಖಲಾಗಿತ್ತು. ‘ನನ್ನ ಮಗ ಸಾಮ್ರಾಟ್ ನಿಗೆ ಬೈದು ಬೆದರಿಕೆ ಹಾಕಿದ್ರು ಎಂದು‌ ವಿಜಯ್ ದೂರು ನೀಡಿದ್ದರು.
ಅದಕ್ ಕೌಂಟರ್​ ಕೊಡಲು ವಿಜಯ್ ಮೇಲೆ 307 ಕೇಸ್ ಪಾನಿಪುರಿ ಕಿಟ್ಟಿ ನೀಡಿದ್ದರು. ಸದ್ಯ ವಿಜಯ್ ಮೇಲಿರುವ ಕೇಸ್ ಕೋರ್ಟ್​ನಲ್ಲಿ ನಡೀತಾ ಇದೆ. ಈ ಹಿಂದೆ ಸಾಕ್ಷ್ಯ ಕೊರತೆ ಎಂದು ಪಾನಿಪುರಿ ಕಿಟ್ಟಿಮೇಲೆ ನೀಡಿದ್ದ ದೂರು ಕ್ಲೋಸ್ ಮಾಡಲಾಗಿತ್ತು
ಈಗ ಇನ್ನೊಮ್ಮೆ ಕೇಸ್ ಮಾಡಿ, ತನಿಖೆ ನಡೆಸಲು ಕೋರ್ಟ್ ಸೂಚನೆ ನೀಡಿದ್ದು ಕೋರ್ಟ್ ಸೂಚನೆ ಮೇರೆಗೆ ಪಾನಿಪುರಿ ಕಿಟ್ಟಿ, ಮಾರುತಿ ಗೌಡ ಮೇಲೆ FIR ದಾಖಲಾಗಿದೆ.ಈಗ ಪ್ರಕರಣ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 2 =
Remember me
