ಗಂಗಾವತಿ:ನೋಂದಾಯಿತ ಅಭ್ಯರ್ಥಿಗಳ ಪರ ದ್ವಿತೀಯ ಪಿಯು ಪರೀಕ್ಷೆ ಬರೆಯುತ್ತಿದ್ದ ನಕಲಿ ವಿದ್ಯಾರ್ಥಿಗಳನ್ನು ಕೊಠಡಿ ಮೇಲ್ವಿಚಾರಕರು ಪತ್ತೆಹಚ್ಚಿದ್ದು, 6 ವಿದ್ಯಾರ್ಥಿಗಳ ವಿರುದ್ಧ ನಗರ ಠಾಣೆಯಲ್ಲಿ ಮಂಗಳವಾರ ಪ್ರಕರಣ ದಾಖಲಾಗಿದೆ. ಅಮರೇಶ, ಕನಕಪ್ಪ, ರಮೇಶ ನೋಂದಾಯಿಸಿದ ವಿದ್ಯಾರ್ಥಿಗಳು. ರವಿ, ದೇವರಾಜ ಮತ್ತು ಮಹೇಶಕೃಷ್ಣ ಅವರ ಬದಲು ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಗಳು. ಈ ಆರೂ ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ನಗರದ ಎಚ್.ಆರ್.ಸರೋಜಮ್ಮ ಪ.ಪೂ.ಕಾಲೇಜಿನಲ್ಲಿ ವಾಣಿಜ್ಯ ವಿಭಾಗದ ಎಕನಾಮಿಕ್ಸ್ ಪರೀಕ್ಷೆ ಮಂಗಳವಾರ ನಡೆಯುತ್ತಿತ್ತು. ರವಿ, ದೇವರಾಜ ಮತ್ತು ಮಹೇಶಕೃಷ್ಣ ಪರೀಕ್ಷೆ ಬರೆಯುತ್ತಿದ್ದಾಗ ಕೊಠಡಿ ಮೇಲ್ವಿಚಾರಕರಿಗೆ ಸಂಶಯ ಮೂಡಿದೆ. ವಿಚಾರಣೆಗೆ ಒಳಪಡಿಸಿದಾಗ ಸತ್ಯ ಬಹಿರಂಗವಾಗಿದೆ. ನಕಲಿ ವಿದ್ಯಾರ್ಥಿಗಳ ಜತೆ ಅಸಲಿ ವಿದ್ಯಾರ್ಥಿ ಅಮರೇಶನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದಾಗ, ಈ ಪರೀಕ್ಷೆ ಬರೆಯಲು 2000 ರೂ. ನೀಡುವ ಒಪ್ಪಂದ ಮಾಡಿಕೊಳ್ಳಲಾಗಿತ್ತು ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ.
ಇಡ್ಲಿ ವೆರೈಟಿ: ಇಡ್ಲಿ ರೋಸ್ಟ್ ಮತ್ತು ಓಟ್ಸ್ ಇಡ್ಲಿ, ಮಸಾಲ ಇಡ್ಲಿ ಮನೆಯಲ್ಲೇ ಮಾಡಿ ಸವಿಯಿರಿ

ಚರ್ಚ್​ನಲ್ಲೇ ಹಬ್ಬಿತು ಕರೊನಾ! ಪಾದ್ರಿ ಮಾಡಿದ ಕೆಲಸದಿಂದಾಗಿ 46 ಜನರು ಕರೊನಾಕ್ಕೆ ತುತ್ತು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − 3 =
Remember me
