ಬೆಂಗಳೂರು:ದೇಶಾದ್ಯಂತ ಜಾರಿಗೊಳಿಸಿರುವ ರೀತಿಯಲ್ಲಿ ಬೆಂಗಳೂರಿನಲ್ಲೂ ಕೋವಿಡ್​-19 ಲಾಕ್​ಡೌನ್​ ಜಾರಿಯಲ್ಲಿದೆ. ಲಾಕ್​ಡೌನ್​ 1 ಮತ್ತು ಲಾಕ್​ಡೌನ್​ 2 ಅವಧಿಯಲ್ಲಿ ಜನ, ವಾಹನ ಸಂಚಾರಕ್ಕೆ ನಿರ್ಬಂಧ ಇತ್ತು. ಲಾಕ್​ಡೌನ್​ 3ರ ಅವಧಿಯಲ್ಲಿ ಕೂಡ ಅಗತ್ಯವಸ್ತುಗಳನ್ನು ಬಿಟ್ಟು ಅನಗತ್ಯವಸ್ತುಗಳ ಮಾರಾಟಕ್ಕೂ ನಿರ್ಬಂಧವಿತ್ತು.
ಆದರೆ, ಲಾಕ್​ಡೌನ್​ 4.0 ಜಾರಿಗೆ ಬರುತ್ತಲೇ ನಿರ್ಬಂಧಗಳು ಸಡಿಲಗೊಳ್ಳಲು ಆರಂಭವಾಯಿತು. ಅನಗತ್ಯವಸ್ತುಗಳ ಮಾರಾಟಕ್ಕೂ ಅವಕಾಶ ಲಭಿಸಲಾರಂಭಿಸಿತು. ಈ ಅವಕಾಶ ಸಿಕ್ಕಿದ್ದೇ ತಡ. ಬೆಂಗಳೂರಿನ ಉದ್ಯೋಗಸ್ಥ ದಂಪತಿ ಮೊಟ್ಟ ಮೊದಲಿಗೆ ಡಿಶ್​ ವಾಷರ್​ಗಳ ಖರೀದಿಗೆ ಮುಗಿಬಿದ್ದಿದ್ದಾರೆ!
ಕಾರಣ, ಲಾಕ್​ಡೌನ್​ ಅವಧಿಯಲ್ಲಿ ಕೊರೊನಾ ಸೋಂಕು ಹರಡುವ ಭೀತಿಯಲ್ಲಿ ಉದ್ಯೋಗಸ್ಥ ದಂಪತಿಗಳು ತಮ್ಮ ಮನೆಗೆಲಸದವರಿಗೆ ಕೆಲಸಕ್ಕೆ ಬಾರದಂತೆ ನಿರ್ಬಂಧಿಸಿದ್ದರು. ಇದರಿಂದಾಗಿ ಮನೆಯ ಕಸ, ಮುಸುರೆ ಎಲ್ಲವನ್ನೂ ದಂಪತಿಯೇ ಮಾಡಬೇಕಾಗುತ್ತಿತ್ತು. ತಿಂಡಿ, ಊಟ ಆದಮೇಲೆ ಕೆಲವೊಮ್ಮೆ ತಟ್ಟೆ, ಲೋಟ, ಪಾತ್ರೆಗಳನ್ನು ತೊಳೆಯುವ ಬಗ್ಗೆ ದಂಪತಿಗಳಲ್ಲಿ ಜಗಳಗಳು, ಹುಸಿಮುನಿಸುಗಳು ಆಗುತ್ತಿದ್ದವು. ಇಂಥ ಪರಿಸ್ಥಿತಿಯನ್ನು ನಿಭಾಯಿಸುವ ಸಲುವಾಗಿ ಅವರೆಲ್ಲರೂ ಈಗ ಡಿಶ್​ವಾಷರ್​ ಖರೀದಿಗೆ ಮುಗಿಬೀಳುತ್ತಿದ್ದಾರೆ.
ಇದನ್ನೂ ಓದಿ:ಕುಲಕಸುಬು ಬದಿಗಿಟ್ಟ ನೇಕಾರರು: ಬದುಕಿಗಾಗಿ ಕಾರ್ಖಾನೆಗಳಲ್ಲಿ ಕೆಲಸ
ಡಿಶ್​ವಾಷರ್​ನ ಬೇಸಿಕ್​ ಮಾಡೆಲ್​ಗೆ 20ರಿಂದ 22 ಸಾವಿರ ರೂ. ಇದೆ. ಅದೇ ಬ್ರ್ಯಾಂಡೆಡ್​ ಆಗಿದ್ದು, ಸ್ವಲ್ಪ ಹೆಚ್ಚಿನ ಸೌಲಭ್ಯಗಳನ್ನು ಒಳಗೊಂಡಿರುವ ಡಿಶ್​ವಾಷರ್​ಗಳ ಬೆಲೆ ಕನಿಷ್ಠ 35 ಸಾವಿರ ರೂ.ನಿಂದ ಗರಿಷ್ಠ 65 ಸಾವಿರ ರೂ.ವರೆಗೂ ಇದೆ. ಆದರೂ ಜನರು ತಮ್ಮ ತಮ್ಮ ಆರ್ಥಿಕ ಸ್ಥಿತಿಗತಿ ಆಧರಿಸಿ, ಡಿಶ್​ವಾಷರ್​ಗಳನ್ನು ಖರೀದಿಸುತ್ತಿದ್ದಾರೆ. ಒಂದು ಮೂಲದ ಪ್ರಕಾರ ಕೆಲದಿನಗಳಿಂದ ಡಿಶ್​ವಾಷರ್​ನ ಬೇಡಿಕೆಯಲ್ಲಿ ಶೇ.70ರಿಂದ 80 ಹೆಚ್ಚಳವಾಗಿದೆಯಂತೆ.
ಡಿಶ್​ವಾಷರ್​ಗಳು ಗಾತ್ರದಲ್ಲಿ ದೊಡ್ಡದಾಗಿರುತ್ತವೆ. ಹಾಗಾಗಿ, ಅಡುಗೆಮನೆಯಲ್ಲಿ ಅವುಗಳ ಗಾತ್ರಕ್ಕೆ ತಕ್ಕಂತೆ ಜಾಗದ ವ್ಯವಸ್ಥೆ ಮಾಡುವುದು ತುಸು ಕಷ್ಟವೇ. ಆದರೂ ಮಧ್ಯಮ ವರ್ಗದವರು ಕೂಡ ತಮ್ಮ ಆರ್ಥಿಕ ಸಾಮರ್ಥ್ಯಕ್ಕೆ ಅನುಗುಣವಾಗಿ ಡಿಶ್​ವಾಷರ್​ಗಳನ್ನು ಖರೀದಿಸುತ್ತಿದ್ದು, ಅಡುಗೆಮನೆಯಲ್ಲಿ ಅವುಗಳಿಗಾಗಿ ಸ್ಥಳಾವಕಾಶ ಮಾಡಿಕೊಳ್ಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಡಿಶ್​ವಾಷರ್​ಗಳು ಲಾಕ್​ಡೌನ್​ ಅವಧಿಯಲ್ಲಿ ಒಂದು ರೀತಿ ವಾಷಿಂಗ್​ಮಷಿನ್​ಗಳಷ್ಟೇ ಅಗತ್ಯವಸ್ತು ಎನಿಸಿಕೊಂಡಿದೆ. ಹಾಗಾಗಿ ಜನರು ಡಿಶ್​ವಾಷರ್​ಗಳನ್ನು ಖರೀದಿಸುತ್ತಿರುವುದಾಗಿ ವರ್ತಕರು ಅಭಿಪ್ರಾಯಪಟ್ಟಿದ್ದಾರೆ.
ಫೇಸ್​ಬುಕ್​ನಲ್ಲಿ ಅಶ್ಲೀಲ ವಿಡಿಯೋ ಹಾಕುತ್ತಿದ್ದ ಬಾಲಕ ಏನಾದ ಗೊತ್ತಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 1 =
Remember me
