ಬೆಂಗಳೂರು: ಕರೊನಾದಿಂದಾಗಿ ಜನರು ಮನೆಯಲ್ಲಿಯೇ ಇರುವ ಕಾರಣ ಬಡವರಿಗೆ, ನಿರ್ಗತಿಕರಿಗೆ ಹಾಗು ವಲಸೆ ಕಾರ್ಮಿಕರಿಗೆ ಸರ್ಕಾರವೇ ಆಹಾರ ಒದಗಿಸುತ್ತಿದೆ. ಕಾರ್ಮಿಕರಿಗೆ ಆರ್ಥಿಕ ನೆರವನ್ನೂ ನೀಡಲಾಗುತ್ತಿದೆ. ಆದರೆ, ಇದೇನೂ ಹೊಸತಲ್ಲ, ಈ ಹಿಂದೆಯೂ ಸಾಂಕ್ರಾಮಿಕ ರೋಗಗಳ ಆವರಿಸಿದಾಗ ಜನರಿಗೆ ಆಡಳಿತಗಳು ಹಲವು ವಿಧದಲ್ಲಿ ನೆರವಾಗಿದ್ದವು ಎನ್ನುವುದು ಇತಿಹಾಸದ ಪುಟದಿಂದ ತಿಳಿದು ಬರುತ್ತದೆ.
ಇಂದಿಗೆ ಒಂದು 120 ವರ್ಷಗಳಷ್ಟು ಹಿಂದೆ ಮೈಸೂರು ರಾಜ್ಯದಲ್ಲಿ ಪ್ಲೇಗ್​ ಮಹಾಮಾರಿ ತಾಂಡವಾಡುತ್ತಿತ್ತು. ಸ್ವಚ್ಛತೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದ ಕಾರಣದಿಂದಾಗಿ ಕಾಯಿಲೆ ಹತೋಟಿಗೆ ಬಾರದೇ ಸಾಯುವವರ ಸಂಖ್ಯೆ ಹೆಚ್ಚಾಗುತ್ತಲೇ ಸಾಗಿತ್ತು.ಅದರಲ್ಲೂ, ಕೆ.ಆರ್​. ಮಾರುಕಟ್ಟೆ, ಚಿಕ್ಕಪೇಟೆಯ ಇಕ್ಕಟ್ಟಾದ ಗಲ್ಲಿಗಳಲ್ಲಿ ಚರಂಡಿ ವ್ಯವಸ್ಥೆಯೂ ಇಲ್ಲವಾಗಿ ಅನೈರ್ಮಲ್ಯತೆ ಹೆಚ್ಚಾಗಿ ರೋಗ ವ್ಯಾಪಿಸಿತ್ತು. ಆಗ ಆ ಮನೆಗಳನ್ನು ಕೆಡವಿ ಹೊಸ ಮನೆಗಳನ್ನು ಕಟ್ಟಿಕೊಳ್ಳಲು ಅರಸರೇ ನೆರವು ನೀಡಿದ್ದರು.
ಮಲ್ಲೇಶ್ವರ ಹಾಗೂ ಬಸವನಗುಡಿ ಬಡಾವಣೆಗಳು 1898-1900ರ ವೇಳೆಗಾಗಲೇ ಸಿದ್ಧಗೊಂಡಿದ್ದವು ಆದರೆ, ಜನರು ಅಲ್ಲಿಗೆ ತೆರಳಿ ವಾಸಿಸಲು ಸಿದ್ಧರಿರಲಿಲ್ಲ. ಪ್ಲೇಗ್​ ಕಾಣಿಸಿಕೊಂಡ ಬಳಿಕ ಸಂಸ್ಥಾನದ ಉದ್ಯೋಗಿಗಳಿಗೆ ಒಂದು ವರ್ಷದ ವೇತನವನ್ನು ಮುಂಗಡವಾಗಿ ನೀಡಿ ಅಲ್ಲಿ ಮನೆ ಕಟ್ಟಿಕೊಳ್ಳಲು ಪ್ರೋತ್ಸಾಹ ನೀಡಲಾಗಿತ್ತು.
ಸರ್ಕಾರ ಜನರಿಗೆ ಉಚಿತವಾಗಿ ಆಹಾರವನ್ನು ಒದಗಿಸಿತ್ತು. ಈಗಿನ ಐಸೋಲೇಷನ್​ ವಾರ್ಡ್​ಗಳಂತೆ ಆಗ, ಊರಿನಿಂದ ಪ್ರತ್ಯೇಕವಾಗಿರಲು ಅವರಿಗೆ ಗುಡಿಸಲುಗಳನ್ನು ಕಟ್ಟಿಕೊಡಲಾಗಿತ್ತು. ಜನರು ತಮ್ಮೂರುಗಳಿಗೆ ತೆರಳಿ ಸುರಕ್ಷಿತವಾಗಿ ಇರಲು ಅವರಿಗೆ ಒಂದು ತಿಂಗಳು ವೇತನಸಹಿತ ರಜೆ ಘೋಷಿಸಲಾಗಿತ್ತು. ಇದು ಅವರಲ್ಲಿ ರೋಗವನ್ನು ಎದುರಿಸಲು ಆತ್ಮಸ್ಥೈರ್ಯ ಹಾಗೂ ಸೋಂಕು ಇನ್ನೊಬ್ಬರಿಗೆ ವ್ಯಾಪಿಸದಿರಲು ಕೈಗೊಂಡ ಕ್ರಮವಾಗಿತ್ತು. ಈಗಿನ ವಲಸೆ ಕಾರ್ಮಿಕರಿಗೆ ನೀಡಿದ ಸೌಲಭ್ಯಕ್ಕೆ ಇದನ್ನು ಹೋಲಿಸಬಹುದು.
ಆಗಲೂ ಕೂಡ ರೈಲು, ಬಸ್​, ಕಾರ್​ವಾನ್​, ಚಕ್ಕಡಿಗಳ ಸಂಚಾರ ಬಂದ್​ ಮಾಡಲಾಗಿತ್ತು. ಬೇರೆ ಊರುಗಳಿಂದ ಬಂದ ಜನರನ್ನು ಪೊಲೀಸರೇ ಅವರ ಮನೆಗೆ ಕರೆದೊಯ್ಯುತ್ತಿದ್ದರು. ಹೋಂ ಕ್ವಾರಂಟೈನ್​ನಂತೆ ಆರೋಗ್ಯ ಅಧಿಕಾರಿಗಳು ಅವರ ಮೇಲೆ ನಿಗಾ ವಹಿಸುತ್ತಿದ್ದರು.
ಎಲ್ಲಕ್ಕಿಂತ ಮುಖ್ಯವಾಗಿ 100 ಹಾಸಿಗೆ ಸಾಮರ್ಥ್ಯದ ವಿಕ್ಟೋರಿಯಾ ಆಸ್ಪತ್ರೆ ಸ್ಥಾಪನೆ ಉದ್ದೇಶ ಪ್ಲೇಗ್​ ಹೊಡೆದೋಡಿಸುವುದಾಗಿತ್ತು. ಆ ಸಮಯದಲ್ಲಿ ಸಂಸ್ಥಾನದಲ್ಲಿದ್ದ ಆಸ್ಪತ್ರೆಗಳ ಸಂಖ್ಯೆಯನ್ನು 29ರಿಂದ 178ಕ್ಕೆ ಏರಿಸಲಾಯಿತು.
ಮೈಸೂರು ಪ್ರಾಂತ್ಯದಲ್ಲಿ ಪ್ಲೇಗ್​ ಹಾವಳಿ ತಡೆಯಲು ಬಜೆಟ್​ ಬಹುದೊಡ್ಡ ಭಾಗವನ್ನು ಮೀಸಲಿಡಲಾಗಿತ್ತು. ಹೆಚ್ಚಿನ ವೆಚ್ಚ ಗುಡಿಸಲುಗಳನ್ನು ನಿರ್ಮಿಸಲು ಹಾಗೂ ಹೆಚ್ಚುವರಿ ಪೊಲೀಸ್​ ಸಿಬ್ಬಂದಿಗೆ ಬಳಕೆಯಾಗಿತ್ತು.
ಇದು ಮೈಸೂರು ಪ್ರಾಂತ್ಯ ಮಾತ್ರವಲ್ಲ, ದೇಶದ ಉಳಿದ ಸಂಸ್ಥಾನ ಹಾಗೂ ಬ್ರಿಟಿಷ್​ ಆಳ್ವಿಕೆಯ ಪ್ರದೇಶಗಳಲ್ಲಿ ಇಂಥದ್ದೇ ಕ್ರಮಗಳನ್ನು ಕೈಗೊಳ್ಳಲಾಗಿತ್ತು ಎಂಬುದಕ್ಕೆ ಹಲವು ದಾಖಲೆಗಳು ಲಭ್ಯವಾಗುತ್ತವೆ. ಬ್ರಿಟಿಷ್​ ಅಧಿಕಾರಿಗಳು ಬರೆದಿರುವ ಭಾರತದ, ಅದರಲ್ಲೂ ದಕ್ಷಿಣ ಭಾರತ ಕುರಿತಾದ ಕೃತಿಗಳಲ್ಲಿ ಇದರ ವಿವರಗಳು ವಿಸ್ತೃತವಾಗಿ ಕಂಡುಬರುತ್ತವೆ.
ಬೋರ್​ ಆಗುತ್ತಿದೆ ಎಂದು ಎಲೆ ತಟ್ಟೋಕೆ ಶುರು ಮಾಡಿದ್ರು…. ರಿಸಲ್ಟ್​ ಮಾತ್ರ ಭರ್ಜರಿ, 40 ಜನರಿಗೆ ಅಂಟಿದ ವ್ಯಾಧಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + eighteen =
Remember me
