-ವಿದ್ಯುತ್ ಕಂಬದ ಮೇಲೆ ನೇತಾಡುತ್ತಿರುವ ಮೃತದೇಹ
ಚಿಕ್ಕೋಡಿ:ದುರಸ್ತಿ ಕಾರ್ಯ ವೇಳೆ ವಿದ್ಯುತ್ ಪ್ರವಹಿಸಿ ಕಂಬದ ಮೇಲೆಯೇ ಹೆಸ್ಕಾಂ ಗುತ್ತಿಗೆ ನೌಕರ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆ ಚಿಕ್ಕೋಡಿಯ ಹೊಸಪೇಟೆ ಗಲ್ಲಿಯಲ್ಲಿ ನಡೆದಿದೆ.
ಇದನ್ನೂ ಓದಿ:ಅತೀ ಉದ್ದದ ಗಡ್ಡದಿಂದ ಗಿನ್ನಿಸ್ ದಾಖಲೆ ಬರೆದ ಮಹಿಳೆ
ಸಿದ್ದರಾಮ ಕುಪವಾಡೆ (38) ಮೃತ. ಸಿದ್ದರಾಮ ಕುಪವಾಡೆ ಚಿಕ್ಕೋಡಿಯ ದಫೇದರ್‌ಕೋಡಿ ನಿವಾಸಿಯಾಗಿದ್ದಾನೆ. ದುರಸ್ತಿ ಕಾರ್ಯ ವೇಳೆ ವಿದ್ಯುತ್ ಪ್ರವಹಿಸಿ ಕಂಬದ ಮೇಲೆಯೇ ಪ್ರಾಣ ಬಿಟ್ಟಿದ್ದಾನೆ.
ಇದನ್ನೂ ಓದಿ:ಸುಧಾಮೂರ್ತಿಗೆ ನಟ ಪ್ರಭಾಸ್ ಸಿನಿಮಾದ ಯಾವ ಹಾಡು ತುಂಬಾ ಇಷ್ಟ ಗೊತ್ತಾ?
ವಿದ್ಯುತ್ ದುರಸ್ತಿ ಕಾರ್ಯಕ್ಕಾಗಿ ಇಂದು ಬೆಳಗ್ಗೆ ಮೂವರು ನೌಕರರು ಬಂದಿದ್ದರು. ಹೊಸಪೇಟೆ ಗಲ್ಲಿ ಹೊರವಲಯದ ಕೃಷಿ ಜಮೀನು ಬಳಿಯ ವಿದ್ಯುತ್ ದುರಸ್ತಿ ಕಾರ್ಯಕ್ಕಾಗಿ ವಿದ್ಯುತ್ ಕಂಬ ಏರಿದ್ದ ಗುತ್ತಿಗೆ ನೌಕರ ಸಿದ್ದರಾಮ ಕುಪವಾಡೆ.ಇಬ್ಬರು ನೌಕರರು ಕೆಳಗೆ ಇದ್ದರೆ, ಸಿದ್ದರಾಮ ವಿದ್ಯುತ್ ಕಂಬವೇರಿ ದುರಸ್ತಿ ಕಾರ್ಯ ಮಾಡುತ್ತಿದ್ದನು. ಈ ವೇಳೆ ಏಕಾಏಕಿ ವಿದ್ಯುತ್ ಪ್ರವಹಿಸಿದೆ.
ಇದನ್ನೂ ಓದಿ:ಕಾಲುಗಳ ಫೋಟೋ ಮಾರಾಟ ಮಾಡಿ ಕೋಟಿ…ಕೋಟಿ ಹಣ ಗಳಿಸಿದ 32 ವರ್ಷದ ಮಹಿಳೆ
ವಿದ್ಯುತ್ ಕಂಬದ ಮೇಲೆ ಸಿದ್ದರಾಮ ಕುಪವಾಡೆ ಮೃತಪಟ್ಟಿದ್ದಾನೆ. ಸ್ಥಳಕ್ಕೆ ಹೆಸ್ಕಾಂ ಅಧಿಕಾರಿಗಳು, ಚಿಕ್ಕೋಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿಕ್ಕೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟ‌ನೆ ನಡೆದಿದೆ.
ಟೈಟಾನಿಕ್ ಸಿನಿಮಾದಲ್ಲಿ ಕೇಟ್ ವಿನ್ಸ್ಲೆಟ್ ಧರಿಸಿದ್ದ ಓವರ್ ಕೋಟ್ ಬೆಲೆ ಎಷ್ಟು ಗೊತ್ತಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + fourteen =
Remember me
