ರಾಜ್ಯದ 236 ತಾಲೂಕುಗಳು ಬರಪೀಡಿತವೆಂದು ಘೋಷಣೆಯಾಗಿವೆ. ಮಳೆ ಕೊರತೆಯಿಂದಾಗಿ ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿಯುತ್ತಿದೆ. ಅಂತರ್ಜಲ ಮಟ್ಟ ಕುಸಿತದಿಂದ ಬೋರ್​ವೆಲ್​ಗಳು ಬತ್ತಿಹೋಗಿ ನೀರು ಬರುತ್ತಿಲ್ಲ. ಬೇಸಿಗೆ ಆಗಮನಕ್ಕೂ ಮುನ್ನವೇ ರಾಜ್ಯದಲ್ಲಿ ನೀರಿನ ಹಾಹಾಕಾರ ಸೃಷ್ಟಿಯಾಗುವ ಆತಂಕ ಶುರುವಾಗಿದೆ. ರಾಜ್ಯದ ಜಲಾಶಯಗಳಲ್ಲಿ ಸದ್ಯದ ನೀರಿನ ಮಟ್ಟ ಎಷ್ಟಿದೆ? ಯಾವ ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಸೃಷ್ಟಿಯಾಗಿದೆ? ಭವಿಷ್ಯದಲ್ಲಿ ಯಾವ ಜಿಲ್ಲೆಗೆ ನೀರಿನ ಸಮಸ್ಯೆ ಕಾಡಲಿದೆ? ಜಿಲ್ಲಾಡಳಿತಗಳು ಏನೆಲ್ಲ ಕ್ರಮಗಳನ್ನು ತೆಗೆದುಕೊಂಡಿವೆ? ರೈತರ ಪರಿಸ್ಥಿತಿ ಹೇಗಿದೆ? ಎಂಬುದರ ಕುರಿತು ವಿಜಯವಾಣಿ ನಡೆಸಿದ ರಿಯಾಲಿಟಿ ಚೆಕ್​ನ ಪೂರ್ಣ ವಿವರ ಇಲ್ಲಿದೆ.
| ಬೆಂಗಳೂರು
ರಾಜ್ಯದಲ್ಲಿ ಈ ಬಾರಿ ಮುಂಗಾರು ಕೈಕೊಟ್ಟಿರುವುದು ಹಾಗೂ ಬರದ ಪರಿಣಾಮ ಬೇಸಿಗೆ ಮುನ್ನವೇ ಕುಡಿಯುವ ನೀರಿಗೆ ತತ್ವಾರ ಎದುರಾಗುವ ಸಾಧ್ಯತೆ ಇದೆ. ಜಲಾಶಯ, ಕೆರೆ-ಕಟ್ಟೆಗಳಲ್ಲಿ ನೀರಿನ ಮಟ್ಟ ಕಡಿಮೆಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಈಗಾಗಲೇ ರಾಜ್ಯ ಸರ್ಕಾರ 31 ಜಿಲ್ಲೆಗಳ 236 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದೆ.ಇದರ ಬೆನ್ನಲ್ಲೇ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಅಭಾವ ಉಂಟಾಗದಿರಲು ಕೆಲ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ. ಕೃಷಿಗಿಂತ ಜೀವ ಜಲಕ್ಕೆ ಪ್ರಥಮ ಆದ್ಯತೆ ನೀಡುವಂತೆ ಜಿಲ್ಲಾಡಳಿತಗಳಿಗೆ ಸ್ಪಷ್ಟ ಸಂದೇಶ ರವಾನಿಸಲಾಗಿದೆ. ಸ್ಥಳೀಯವಾಗಿ ಕಾರ್ಯಪಡೆ ರಚಿಸಿ ನಿಯಮಿತವಾಗಿ ಸಭೆಗಳನ್ನು ನಡೆಸಿ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗದಂತೆ ನಿಗಾ ಇರಿಸಲಾಗಿದೆ. ಇದರ ಹೊರತಾಗಿಯೂ ಜಲಾಶಯಗಳಲ್ಲಿ ದಿನೇದಿನೆ ನೀರು ಕಡಿಮೆಯಾಗುತ್ತಿದೆ. ಪ್ರಮುಖ ಅಣೆಕಟ್ಟುಗಳಾದ ಕೆಆರ್​ಎಸ್, ತುಂಗಭದ್ರಾ, ಆಲಮಟ್ಟಿ, ಬಸವಸಾಗರ, ಹಿಡಕಲ್, ಮಾರ್ಕಂಡೇಯ, ಭದ್ರಾ ಹಾಗೂ ಇನ್ನೂ ಕೆಲ ಕಿರು ಜಲಾಶಯಗಳಲ್ಲಿ ಜಲ ಸಂಗ್ರಹ ಕುಸಿತವಾಗುತ್ತಿದೆ. ಪಶ್ಚಿಮ ಘಟ್ಟದ ತಪ್ಪಲಿನಿಂದ ಹರಿದು ಬರುವ ನದಿಗಳಲ್ಲೂ ನೀರಿನ ಹರಿವು ಕಡಿಮೆಯಾಗುತ್ತಿದೆ. ಹಳ್ಳ-ಕೊಳ್ಳಗಳೂ ಬರಿದಾಗುತ್ತಿವೆ. ವಿದ್ಯುತ್ ಉತ್ಪಾದನೆಗಾಗಿ ಬಳಕೆಯಾಗುತ್ತಿರುವ ಗೇರುಸೊಪ್ಪ, ಘಟಪ್ರಭಾ ಹಾಗೂ ಇತರ ಬಹುಪಯೋಗಿ ಡ್ಯಾಂಗಳ ನೀರನ್ನು ವಿದ್ಯುತ್ ಉತ್ಪಾದಿಸಲು ಬಳಸಲಾಗುತ್ತಿದೆ. ಇದರ ಜತೆಗೆ ಬೇಸಿಗೆ ಮುನ್ನವೇ ಬಿಸಿಲಿನ ಝುಳ ಹೆಚ್ಚುತ್ತಿರುವುದು ಜಲಾಶಯಗಳಲ್ಲಿ ನೀರು ಆವಿಯಾಗುವ ಪ್ರಮಾಣ ತುಸು ಹೆಚ್ಚುತ್ತಿದೆ. ಇದೆಲ್ಲದರ ಪರಿಣಾಮ ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗುವ ನಿರೀಕ್ಷೆ ಇದೆ.
ಆಪದ್ಬಾಂಧವ ಬಹುಗ್ರಾಮ ಯೋಜನೆ:ನದಿ, ಜಲಾಶಯ ಇಲ್ಲದ ನಗರ, ಪಟ್ಟಣಗಳಿಗೆ ಶಾಶ್ವತ ಕುಡಿಯುವ ನೀರು ಪೂರೈಸಲು ಈ ಹಿಂದೆ ರೂಪಿಸಿರುವ ಬಹುಗ್ರಾಮ ಯೋಜನೆ ಜನರ ನೀರಿನ ಸಮಸ್ಯೆಯನ್ನು ಸ್ವಲ್ಪಮಟ್ಟಿಗೆ ನಿವಾರಿಸಿದೆ. ಇದೀಗ ಜಲ ಜೀವನ್ ಮಿಷನ್ (ಜೆಜೆಎಲ್) ಹೆಸರಿನಲ್ಲಿ ಜಾರಿಯಲ್ಲಿದೆ. ಸದ್ಯ ರಾಜ್ಯದ 1.01 ಕೋಟಿ ಕುಟುಂಬಗಳಿಗೆ ಕುಡಿಯುವ ನೀರು ಒದಗಿಸುವ ಗುರಿ ಹೊಂದಲಾಗಿದೆ. ಜ.24ರ ವೇಳೆಗೆ 73.96 ಲಕ್ಷ ಕುಟುಂಬಕ್ಕೆ ನಲ್ಲಿ ಸಂಪರ್ಕ ಕಲ್ಪಿಸಿದ್ದು, ಇನ್ನೂ 24.51 ಲಕ್ಷ ಕುಟುಂಬಗಳಿಗೆ ಸಂಪರ್ಕ ಸಿಕ್ಕಿಲ್ಲ. ನಗರ ಪ್ರದೇಶಗಳಲ್ಲಿ ವಾರ್ಡ್, ಪ್ರಮುಖ ಗ್ರಾಪಂಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಕಾರ್ಯಾಚರಿಸುತ್ತಿವೆ. ಇವುಗಳಿಗೆ ಬೋರ್​ವೆಲ್ ನೀರೇ ಆಸರೆಯಾಗಿದೆ. ಪ್ರಸ್ತುತ ವಿದ್ಯುತ್ ಕಣ್ಣಾಮುಚ್ಚಾಲೆಯಿಂದಾಗಿ ಈ ಘಟಕಗಳು ಸಮರ್ಪಕವಾಗಿ ನಡೆಯುತ್ತಿಲ್ಲ. ಕೆಲವು ದುರಸ್ತಿ ಕಾರಣಕ್ಕೆ ಬಂದ್ ಆಗಿವೆ. ಪಟ್ಟಣಗಳಲ್ಲಿ ಸ್ಥಳೀಯ ಜನಪ್ರತಿನಿಧಿಗಳ ಒತ್ತಾಯದ ಮೇರೆಗೆ ಟ್ಯಾಂಕರ್ ನೀರು ಪೂರೈಕೆಯಿಂದ ತಾತ್ಕಾಲಿಕ ಪರಿಹಾರ ಒದಗಿಸಲಾಗುತ್ತಿದೆ. ಆದರೂ, ಗೃಹೇತರ ಕಾರ್ಯಕ್ಕೆ ನೀರಿನ ಅಭಾವ ಮುಂದುವರಿದಿದೆ.
ರಾಜ್ಯದ ವಾಸ್ತವ ಚಿತ್ರಣ
* ಬಹುತೇಕ ಜಿಲ್ಲೆಗಳಲ್ಲಿ ಈಗಾಗಲೇ ಕುಡಿಯುವ ನೀರಿನ ಸಮಸ್ಯೆ ಆರಂಭ.
* ಹಳ್ಳಿಗಳಲ್ಲಿ ಖಾಸಗಿ ಬೋರ್​ವೆಲ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ.
* ಡ್ಯಾಂಗಳಲ್ಲಿ ನೀರಿನ ಮಟ್ಟ ಕಡಿಮೆಯಾಗಿ ಕೃಷಿ ಬಳಕೆಗೆ ನೀರು ಪೂರೈಕೆ ಸ್ಥಗಿತ.
* ಕೆಲವೆಡೆ ಪಟ್ಟಣಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲವಾದರೂ ಗುಡ್ಡಗಾಡು ಪ್ರದೇಶದಲ್ಲಿ ಸಂಕಷ್ಟ.
* ನೀರಿನ ಅಭಾವ ಉಂಟಾಗುವ ಲಕ್ಷಣ ಹಿನ್ನೆಲೆಯಲ್ಲಿ ನೀರು ಮಿತವಾಗಿ ಬಳಸಲು ಜಿಲ್ಲಾಡಳಿತ ಸೂಚನೆ.
* ಶಾಶ್ವತ ಕುಡಿಯುವ ನೀರಿನ ಯೋಜನೆ ಜಾರಿಯಾಗಿಲ್ಲ
* ಕೆಲ ಪ್ರದೇಶಗಳಲ್ಲಿ 2-3 ದಿನಕ್ಕೊಮ್ಮೆ ಇಲ್ಲವೆ ವಾರಕ್ಕೊಮ್ಮೆ ನೀರು ಪೂರೈಸಲಾಗುತ್ತಿದೆ.
* ಕೆಲ ಜಿಲ್ಲೆಗಳಲ್ಲಿ ನೀರಿನ ಸಮಸ್ಯೆ ಕಂಡುಬಂದರೆ ಟ್ಯಾಂಕರ್ ಮೂಲಕ ಪೂರೈಕೆಗೆ ಟೆಂಡರ್ ಕರೆಯಲು ಸೂಚನೆ.
* ಮಲಪ್ರಭಾ ಕಾಲುವೆ ಪಾತ್ರದ ಜನರಿಗೆ ಕುಡಿಯುವ ನೀರಿಗಾಗಿ ಬಳಸಲು ಅವಕಾಶ.
* ಭವಿಷ್ಯದಲ್ಲಿ ನೀರಿನ ಕೊರತೆಯಾದರೆ ಖಾಸಗಿ ಬೋರ್​ವೆಲ್ ಬಾಡಿಗೆ ಪಡೆಯಲು ಅಲ್ಲಲ್ಲಿ ಗುರುತಿಸಲಾಗಿದೆ.
ರಾಜಧಾನಿಗೂ ನೀರಿನ ಕಂಟಕ?ಬೆಂಗಳೂರಿನ ಜನರ ಕುಡಿಯುವ ನೀರಿನ ದಾಹವನ್ನು ತಣಿಸಲು ಕೆಆರ್​ಎಸ್ ಅಣೆಕಟ್ಟೆಯಿಂದ ಕಾವೇರಿ ನದಿ ನೀರನ್ನು ಪೂರೈಸಲಾಗುತ್ತಿದೆ. ಜಲಾಶಯದಲ್ಲಿ 60 ಅಡಿಯವರೆಗೂ ನೀರನ್ನು ಬಳಸಿಕೊಳ್ಳಬಹುದಾಗಿದ್ದರೂ, ಮೈಸೂರು- ಬೆಂಗಳೂರು ಹೊರತು ಇತರೆಡೆಗೂ ನೀರು ಪೂರೈಸಬೇಕಿದೆ. ಜತೆಗೆ ತಮಿಳುನಾಡಿಗೆ ನಿಯಮಿತವಾಗಿ ನೀರು ಹರಿಸಬೇಕಿರುವುದರಿಂದ ನೀರು ಸಂಗ್ರಹ ಮತ್ತಷ್ಟು ಕುಸಿಯಲಿದೆ. ಇದರಿಂದ ಬೆಂಗಳೂರು ನಗರಕ್ಕೆ ಏಪ್ರಿಲ್​ನಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಾಸ ಆಗುವ ಆತಂಕವನ್ನು ತಳ್ಳಿಹಾಕಲಾಗದು.
ವಿದ್ಯುತ್ತಿದ್ದರಷ್ಟೇ ಹಳ್ಳಿಗೆ ನೀರುಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿಗೆ ಬೋರ್​ವೆಲ್ ಆಧಾರ. ವಿದ್ಯುತ್ ಕಣ್ಣಾಮುಚ್ಚಾಲೆ ಯಿಂದಾಗಿ ಹೆಚ್ಚಿನ ಗ್ರಾಮಗಳಿಗೆ ಸಮರ್ಪಕ ವಾಗಿ ವಿದ್ಯುತ್ ಪೂರೈಕೆ ಆಗುತ್ತಿಲ್ಲ. ನೀರುಗಂಟಿಗಳು ಕೂಡ ಸರಿಯಾಗಿ ಕೆಲಸ ಮಾಡದಿ ರುವುದು ಹಳ್ಳಿಗರ ಸಂಕಷ್ಟ ಹೆಚ್ಚಿಸಿದೆ. ಜಾನುವಾರು ಗಳಿಗೂ ನೀರು ಬೇಕಿದೆ.
ದೂರಾದ ತಂದೆಯಿಂದಾಗಿ ಶಾಲೆಯಲ್ಲಿ ನಿಂದನೆ: ಪುತ್ರನಿಗಾಗಿ ದಿಟ್ಟ ನಿರ್ಧಾರ ತೆಗೆದುಕೊಂಡ ಸಾನಿಯಾ

ವಿಜಯಲಕ್ಷ್ಮೀ ವಿರುದ್ಧ ಪವಿತ್ರಾ ತಿರುಗಿಬೀಳಲು ಪ್ರಚೋದನೆ ಕೊಟ್ಟಿದ್ಯಾರು? ಇಲ್ಲಿದೆ ಅಚ್ಚರಿಯ ಸಂಗತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + 3 =
Remember me
