ಬೆಂಗಳೂರು:ಕರೊನಾದಿಂದಾಗಿ ಪ್ರಯಾಣಿಕರ ಕೊರತೆ ಎದುರಿಸುತ್ತಿರುವ ಕೆಎಸ್ಸಾರ್ಟಿಸಿ, ಬಸ್​ಗಳ ಕಾರ್ಯಾಚರಣೆ ಮತ್ತು ಚಾಲನಾ ಸಿಬ್ಬಂದಿ ಕರ್ತವ್ಯಕ್ಕೆ ನಿಯೋಜಿಸುವ ಸಲುವಾಗಿ ಹೊಸ ಡ್ಯೂಟಿ ರೋಟಾ ಪದ್ಧತಿ ಜಾರಿಗೆ ಸಿದ್ಧತೆ ನಡೆಸಿದೆ.
ಲಾಕ್​ಡೌನ್ ತೆರವು ಬಳಿಕ ಬಸ್ ಸಂಚಾರ ಪುನರಾರಂಭಿಸಲಾಗಿದ್ದರೂ, ಕರೊನಾ ಪೂರ್ವದಲ್ಲಿ ಕಾರ್ಯಾಚರಿಸುತ್ತಿದ್ದಷ್ಟು ಬಸ್​ಗಳ ಸಂಚಾರ ಸಾಧ್ಯವಾಗುತ್ತಿಲ್ಲ. ಪ್ರಯಾಣಿಕರ ಸಂಖ್ಯೆ ನಿರೀಕ್ಷಿತ ಮಟ್ಟಕ್ಕಿಂತ ಕಡಿಮೆ ಇರುವ ಕಾರಣ ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಬಸ್ ಕಾರ್ಯಾಚರಣೆ ಮಾಡಲಾಗುತ್ತಿದೆ.
ಮುಂದಿನ ದಿನಗಳಲ್ಲಿ ಬಸ್ ಕಾರ್ಯಾಚರಣೆ ಸಂಬಂಧ ಕೌನೆ್ಸೆಲಿಂಗ್ ನಡೆಸಿ, ಪೂರ್ವ ಸಿದ್ಧತೆಗಳೊಂದಿಗೆ ಡ್ಯೂಟಿ ರೋಟಾ ಪದ್ಧತಿ ಜಾರಿಗೊಳಿಸಲು ಕೆಎಸ್ಸಾರ್ಟಿಸಿ ನಿರ್ಧರಿಸಿದೆ. ಈ ಪದ್ಧತಿಯು 2021ರ ಫೆ.1ರಿಂದ ಜಾರಿಗೆ ಬರಲಿದೆ. ಹೊಸ ಡ್ಯೂಟಿ ರೋಟಾ ಸಿದ್ಧಪಡಿಸುವಾಗ ಚಾಲನಾ ಸಿಬ್ಬಂದಿಯಿಂದ ಯಾವುದೇ ದೂರುಗಳಿಗೆ ಅವಕಾಶ ನೀಡದಂತೆ ಕ್ರಮ ಕೈಗೊಳ್ಳಬೇಕು ಎಂದು ಕೆಎಸ್ಸಾರ್ಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕರು ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಸೂಚಿಸಿದ್ದಾರೆ.
ಏನಿದು ಡ್ಯೂಟಿ ರೋಟಾ?:ವೈಜ್ಞಾನಿಕ ವಿಧಾನದಲ್ಲಿ ಚಾಲನಾ ಸಿಬ್ಬಂದಿ ಕರ್ತವ್ಯಕ್ಕೆ ನಿಯೋಜಿಸುವುದು, ನಿಯೋಜನೆ ವೇಳೆ ಸಿಬ್ಬಂದಿಯ ಹಿರಿತನ ಪರಿಗಣನೆ, ಸಿಬ್ಬಂದಿ ರಜೆ ನಿರ್ವಹಣೆ, ಕರ್ತವ್ಯದ ಪಾಳಿ ನಿರ್ವಹಣೆಯನ್ನಾಧರಿಸಿ ಕರ್ತವ್ಯಕ್ಕೆ ನಿಯೋಜಿಸುವುದನ್ನು ಡ್ಯೂಟಿ ರೋಟಾ ಎನ್ನಲಾಗುತ್ತದೆ. ಸಾರಿಗೆ ನಿಗಮಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ನೌಕರರಿದ್ದಾರೆ. ಎಲ್ಲ ನೌಕರರನ್ನು ಯೋಜನಾ ಬದ್ಧವಾಗಿ ಕರ್ತವ್ಯಕ್ಕೆ ನಿಯೋಜಿಸುವುದು ಕಷ್ಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಾರಿಗೆ ನಿಗಮಗಳು ಯಾವುದೇ ದೂರು, ಸಮಸ್ಯೆಗಳಿಗೆ ಆಸ್ಪದ ನೀಡದಂತೆ ಡ್ಯೂಟಿ ರೋಟಾ ಸಿದ್ಧಪಡಿಸಿ, ಅದರಂತೆ ಬಸ್ ಸೇವೆ ನೀಡಲಿವೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + twenty =
Remember me
