ಚಿತ್ರದುರ್ಗ:ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ನಗರದ ಬಸವೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಸಚಿವರನ್ನು ಬೆಂಗಳೂರಿನ ಆಸ್ಪತ್ರೆಗೆ ಝೀರೋ ಟ್ರಾಫಿಕ್​ನಲ್ಲಿ ಆಂಬುಲೆನ್ಸ್​ ಮೂಲಕ ಕರೆದೊಯ್ಯಲಾಗಿದೆ.
ಬಿಜೆಪಿ ಕಾರ್ಯಕಾರಿಣಿ ಸಭೆಗೆ ಹೋಗಿದ್ದ ಡಿವಿಎಸ್​, ಶಿವಮೊಗ್ಗದಿಂದ ಚಿತ್ರದುರ್ಗಕ್ಕೆ ಭಾನುವಾರ ಬಂದಿದ್ದರು. ಕಾರಿನಿಂದ ಕೆಳಗೆ ಇಳಿಯುತ್ತಲೇ ಕುಸಿದು ಬಿದ್ದ ಅವರನ್ನು ತಕ್ಷಣ ಅಂಗರಕ್ಷಕರು ಖಾಸಗಿ ಆಸ್ಪತ್ರೆಗೆ ಕರೆದೊಯ್ದರು.ಇದನ್ನೂ ಓದಿರಿಎನ್​ಡಿಎ ಜತೆ ಜೆಡಿಎಸ್​ ವಿಲೀನ: ಬಿಜೆಪಿ ವಿರುದ್ಧ ಕುಮಾರಸ್ವಾಮಿ ಆಕ್ರೋಶ ಸ್ಫೋಟ
ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಮತ್ತಷ್ಟು ಚಿಕಿತ್ಸೆಗಾಗಿ ಬೆಂಗಳೂರಿನ ಹೆಬ್ಬಾಳದ ಆಸ್ಟರ್​ ಆಸ್ಪತ್ರೆಗೆ ದಾಖಲಿಸಲು ಆಂಬುಲೆನ್ಸ್​ನಲ್ಲಿ ಸಚಿವರನ್ನು ಕರೆದೊಯ್ಯಲಾಗುತ್ತಿದೆ. ಡಿವಿಎಸ್ ಜತೆ ಡಾ.ಜಗದೀಶ್ ಪ್ರಯಾಣಿಸುತ್ತಿದ್ದಾರೆ. ಇನ್ನು ಕೇಂದ್ರ ಸಚಿವರಿಗೆ ಚಿಕಿತ್ಸೆ ನೀಡಿದ ಬಸವೇಶ್ವರ ಆಸ್ಪತ್ರೆಯ ಡಾ.ಅಭಿಷೇಕ್ ಸುದ್ದಿಗಾರರೊಂದಿಗೆ ಮಾತನಾಡಿ, ಲೋ ಶುಗರ್ ನಿಂದ ಸದಾನಂದಗೌಡರು ಅಸ್ವಸ್ಥಗೊಂಡು ಎಚ್ಚರ ತಪ್ಪಿದ್ದರು. ಚಿಕಿತ್ಸೆ ಬಳಿಕ ಸುಧಾರಣೆ ಕಂಡಿದ್ದಾರೆ, ಜ್ಯೂಸ್ ಕುಡಿದಿದ್ದಾರೆ. ಸದಾನಂದಗೌಡರು ಆರೋಗ್ಯವಾಗಿದ್ದಾರೆ, ಸದ್ಯ ಎಲ್ಲ ರಿಪೋರ್ಟ್ ನಾರ್ಮಲ್ ಇವೆ. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕಳಿಸಲಾಗಿದೆ ಎಂದರು.
ಬಸವೇಶ್ವರ ಆಸ್ಪತ್ರೆಯಲ್ಲಿ ಸದಾನಂದಗೌಡರ ಭೇಟಿ‌ ಬಳಿಕ ಮಾತನಾಡಿದ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಆತಂಕ ಪಡುವ ಅಗತ್ಯ ಇಲ್ಲ. ಸದಾನಂದಗೌಡರು ಕ್ಷೇಮವಾಗಿದ್ದಾರೆ. ಸದ್ಯ ಜ್ಯೂಸ್ ಕುಡಿದಿದ್ದು, ಮಾತಾಡುತ್ತಿದ್ದಾರೆ ಎಂದರು.
ವರ್ಷಾಚರಣೆಗೆ ಕೇಕ್​ ಕತ್ತರಿಸುತ್ತಿದ್ದ ಯುವಕರ ಹಿಂದೆಯೇ ಹಾದುಹೋದ ದೆವ್ವ! ಭಯಾನಕ ವಿಡಿಯೋ ಇಲ್ಲಿದೆ

ಮನೆ ಮೇಲೆ ಉರುಳಿದ ಮದುವೆ ದಿಬ್ಬಣದ ಬಸ್, ಐವರು ಸ್ಥಳದಲ್ಲೇ ಸಾವು

ಮುಖದಲ್ಲಿ ಮೊಡವೆ ಹೆಚ್ಚಾಗಿದ್ದಕ್ಕೆ 9ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + fifteen =
Remember me
