ಬೆಂಗಳೂರು:ಕರ್ನಾಟಕದ ಪ್ರಚಂಡ ಕುಳ್ಳ ಎಂದೇ ಖ್ಯಾತಿ ಪಡೆದಿದ್ದ ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್​ ಅವರ ನಿಧನ ಸ್ಯಾಂಡಲ್​ವುಡ್​ಗೆ ದೊಡ್ಡ ಆಘಾತವನ್ನುಂಟು ಮಾಡಿದೆ. ಅವರ ಸಾವಿಗೆ ಚಿತ್ರರಂಗ, ರಾಜಕೀಯ ಸೇರಿದಂತೆ ಅನೇಕ ಕ್ಷೇತ್ರದ ಗಣ್ಯರು ಕಂಬನಿ ಮಿಡಿದಿದ್ದಾರೆ.
ಸಿನಿಮಾ ಮಾತ್ರವಲ್ಲದೇ ನಿಜಜೀವನದಲ್ಲೂ ಎರಡು ಮದುವೆಯಾಗುವ ಮೂಲಕ ಸಾಹಸ ಮಾಡಿದ್ದರು. ಮೊದಲ ಪತ್ನಿಯ ಅನುಮತಿಯನ್ನು ಪಡೆದು ಎರಡನೇ ವಿವಾಹವಾದ ಸುದ್ದಿ ಎಲ್ಲರಿಗೂ ತಿಳಿದಿದೆ. ಪತಿಯ ನಿಧನದ ಕುರಿತು ಅವರ ಎರಡನೇ ಪತ್ನಿ ಶೈಲಜಾ ಮಾತನಾಡಿದ್ದು, ಪತಿಯೊಂದಿಗಿನ ನೆನೆಪುಗಳನ್ನು ಮೆಲಕು ಹಾಕಿದ್ದಾರೆ.
ಇದನ್ನೂ ಓದಿ:ಬ್ರೇಕ್​ ಫೇಲ್​ ಆಗಿ ಕೆಎಸ್​ಆರ್​ಟಿಸಿ ಬಸ್​ ಪಲ್ಟಿ; 20ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯ
ಪ್ರೀತಿ ತುಂಬಿದ ಮನೆ ಇದಾಗಿತ್ತು. ಅವರಿಗೆ ಎಲ್ಲರ ಮೇಲೂ ಪ್ರೀತಿ ಇತ್ತು. ಈಗ ಅವರಿಲ್ಲ. ಅವರನ್ನು ನಾವು ಕಳೆದುಕೊಂಡಿದ್ದೇವೆ. ಅವರಿನ್ನು ಮರಳಿ ಬರುವುದಿಲ್ಲ. ದಂಡಿ ದಂಡಿ ಪ್ರೀತಿ, ವಿಶ್ವಾಸ ತುಂಬಿದ ಮನೆಯಿದು, ಮುದ್ದಾದ ಐವರು ಮಕ್ಕಳು-ಸೊಸೆ ಎಲ್ಲರನ್ನು ಬಿಟ್ಟು ಹೋಗ್ತಿದ್ದಾರೆ. ಪ್ರೀತಿಗೆ ಇನ್ನೊಂದು ಹೆಸರೇ ಅವರು. ಎಲ್ಲರನ್ನೂ ಪ್ರೀತಿ ಮಾಡಿದವರು ಅವರು. ಅವರು ನನಗೆ ಯಾವತ್ತೂ ಮೋಸ ಮಾಡಲಿಲ್ಲ. ಅವರ ಪ್ರೀತಿ ನನಗೆ ಎಂದಿಗೂ ಇರುತ್ತೆ.
ದ್ವಾರಕೀಶ್ ಅವರು ಅಂಬುಜಕ್ಕನಿಗೆ ಎಷ್ಟು ಪ್ರೀತಿ ಕೊಟ್ಟರೋ ಅಷ್ಟೇ ಪ್ರೀತಿ ಕೊಟ್ಟರು. ದ್ವಾರಕೀಶ್ ನನಗೆ ಯಾವತ್ತೂ ಮೋಸ ಮಾಡಲಿಲ್ಲ, ಕಡೆಗಾಣಿಸಲಿಲ್ಲ ಲೈಫ್‌ನಲ್ಲಿ ನಾನು ಮರೆಯೋಕೆ ಆಗದಷ್ಟು ಪ್ರೀತಿ ಕೊಟ್ಟಿದ್ದಾರೆ. ಮಕ್ಕಳಿಗೆ ನಾನು ಎರಡನೇ ತಾಯಿಯಾದ್ರೂ ಕೂಡ ಅವರು ನನಗೆ ಸ್ವಂತ ತಾಯಿ ಹಾಗೆ ಪ್ರೀತಿ ಮಾಡ್ತಾರೆ. ಮಕ್ಕಳು ನನಗೆ ಆಂಟಿ ಅಂತ ಕರೆದರೂ ಅವರು ನನ್ನನ್ನು ತುಂಬ ಪ್ರೀತಿ ಮಾಡ್ತಾರೆ. ತುಂಬ ಮುದ್ದಾದ ಮಕ್ಕಳವು. ನಾನು ಪುಣ್ಯ ಮಾಡಿದೆ ಎಂದು ಅಗಲಿದೆ ಪತಿಯನ್ನು ನೆನೆದು ಎರಡನೇ ಪತ್ನಿ ಶೈಲಜಾ ಕಣ್ಣೀರು ಹಾಕಿದ್ದಾರೆ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:2 + 10 =
Remember me
