| ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು
ಸಬ್ ರಿಜಿಸ್ಟ್ರಾರ್ ಕಚೇರಿಯ ಕಾವೇರಿ 2.0 ಸಾಫ್ಟ್​ವೇರ್​ನಲ್ಲಿ ಋಣಭಾರ (ಇ.ಸಿ.)ಮಾಹಿತಿ ಸರಿಯಾಗಿ ಕೈಗೆಟುಕದೇ ಇರುವುದು ಇ.ಸಿ. ಪಡೆದು ಕೊಳ್ಳುವ ಉದ್ದೇಶವನ್ನೇ ಮಣ್ಣುಪಾಲಾಗಿಸಿದೆ. ಇದಿಷ್ಟೇ ಅಲ್ಲ ಕಾನೂನು ಬಾಹಿರ ಫೋರ್ಜರಿ ಚಟುವಟಿಕೆಗಳಿಗೂ ಈ ವೈಫಲ್ಯ ದಾರಿ ಮಾಡಿಕೊಟ್ಟಿದೆ.
ಕಾವೇರಿ 2.0 ಸಾಫ್ಟ್​ವೇರ್​ನಲ್ಲಿ ಲಾಗಿನ್ ಆಗಿ ಇ.ಸಿ.ಗೆ ಅರ್ಜಿ ಸಲ್ಲಿಸಲು ಒಂದು ಏರಿಯಾದ ಸೈಟ್ ನಂಬರ್ ಅಥವಾ ಸರ್ವೆ ಸಂಖ್ಯೆ ನಮೂದು ಮಾಡಬೇಕು. ಬಳಿಕ ಆ ಸಂಖ್ಯೆಗೆ ಹೊಂದಾಣಿಕೆ ಆಗುವ ಆ ಬಡಾವಣೆ ಅಥವಾ ಊರಿನಲ್ಲಿ ಇರುವ ಎಲ್ಲ ಆಸ್ತಿಯ ವಿವರ ತೆರೆದುಕೊಳ್ಳಲಿದೆ. ಅಂದರೆ ಸೈಟ್, ಸರ್ವೆ ನಂಬರ್​ನ ಖಾತಾ, ಅಸೆಸ್​ವೆುಂಟ್ ನಂಬರ್, ನಗರಸಭೆ ನಂಬರ್, ಮನೆ ನಂಬರ್ ಎಲ್ಲವೂ ಗೋಚರಿಸಲಿದೆ. ಈ ಮಾಹಿತಿಗಳ ಪೈಕಿ ನಮ್ಮ ಆಸ್ತಿಗೆ ಸಂಬಂಧಪಟ್ಟ ಋಣಭಾರ ಯಾವುದೆಂಬುದನ್ನು ಗುರುತಿಸಿ ಓಕೆ ಮಾಡಿದರಷ್ಟೇ, ಇಸಿಯಲ್ಲಿ ನಮೂದು ಆಗಲಿದೆ. ಆದರೀಗ ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸಿ ಇ.ಸಿ. ಪಡೆಯುವುದೇ ಕಷ್ಟವಾಗಿದೆ. ಇದಿಲ್ಲವಾದರೆ ಮಧ್ಯವರ್ತಿಗಳ ಮೊರೆ ಹೋಗಬೇಕಾಗಿದೆ. ಈ ವ್ಯವಸ್ಥೆ ಅಕ್ರಮ ಚಟುವಟಿಕೆಗಳಿಗೂ ದಾರಿಮಾಡಿಕೊಟ್ಟಿದೆ. ಆಸ್ತಿಯ ನಂಬರ್ ಮುದ್ರಿಸಿದಾಗ ಆ ಸಂಖ್ಯೆಗೆ ಹೊಂದಾಣಿಕೆ ಆಗುವ ಎಲ್ಲ ವ್ಯವಹಾರ, ವಹಿವಾಟು ತೋರಿಸಲಿದೆ. ನಮಗೆ ಬೇಕಾದಲ್ಲಿ ವಹಿವಾಟು ಆಯ್ಕೆ ಮಾಡಿಕೊಂಡರಷ್ಟೇ ಇ.ಸಿ.ಯಲ್ಲಿ ನಮೂದು ಆಗಲಿದೆ. ವಹಿವಾಟು ನಡೆದಿಲ್ಲ ಎಂದು ನಿಲ್ ಕೊಟ್ಟರೆ ಯಾವುದೇ ಋಣಭಾರ ಇಲ್ಲವೆಂದು ಇ.ಸಿ. ಅರ್ಜಿ ಸಬ್ ರಿಜಿಸ್ಟ್ರಾರ್ ಕಚೇರಿಗೆ ತಲುಪಲಿದೆ. ಅಧಿಕಾರಿ,ಸಿಬ್ಬಂದಿ, ಅರ್ಜಿದಾರ ಶುಲ್ಕ ಪಾವತಿ ಮಾಡಿರುವುದನ್ನು ಗಮನಿಸಿ ಪರಿಶೀಲನೆ ಮಾಡದೆ ಓಕೆ ಮಾಡುತ್ತಾರೆ. ಆಗ ಆಸ್ತಿಯ ಮೇಲೆ ವಹಿವಾಟು ನಡೆದಿದ್ದರೂ ಇಲ್ಲವೆಂದು ನಿಲ್ ಇ.ಸಿ. ದೊರೆಯುತ್ತದೆ. ಇಂತಹ ಇಸಿ ಪಡೆದು ಒಂದೇ ಆಸ್ತಿಯ ಮೇಲೆ ಮೂರ್ನಾಲ್ಕು ಬ್ಯಾಂಕ್​ಗಳಲ್ಲಿ ಸಾಲಸೌಲಭ್ಯ ಪಡೆಯುವ ಗುಂಪುಗಳು ಸಕ್ರಿಯವಾಗಿವೆ. ಒಂದೇ ಆಸ್ತಿಯನ್ನು ಬಹುಜನರಿಗೆ ಮಾರಾಟ ಮಾಡುವ ಭೂಗಳ್ಳರಿಗೂ ಇದು ವರವಾಗುತ್ತಿರುವುದನ್ನು ತಳ್ಳಿ ಹಾಕುವಂತಿಲ್ಲ. ಇದರಿಂದ ಅಮಾಯಕರು ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ.
ಮತ್ತೊಂದು ದೊಡ್ಡ ಸಮಸ್ಯೆ ಇದೆ. ನಿಗದಿತ ಇಸವಿಯಿಂದ ಇಲ್ಲಿಯವರೆಗಿನ ಇ.ಸಿ.ಗೆ ಅರ್ಜಿ ಸಲ್ಲಿಸಿದರೆ ಸ್ವಯಂ ಚಾಲಿತವಾಗಿಯೇ ಇ.ಸಿ.ಯಲ್ಲಿ ಯಾವುದೇ ವಹಿವಾಟು ನಡೆದಿದ್ದರೂ ಮಾಹಿತಿ ನಮೂದಾ ಗಬೇಕು. ಆದರೆ ಈಗ ಅರ್ಜಿದಾರನೇ ತನಗೇ ಬೇಕಾದ ವ್ಯವಹಾರವನ್ನು ಮೇಲೆ ಕೆಳಗೆ ಮಾಡಿಕೊಂಡು ಎಂಟ್ರಿ ಪಡೆಯಹುದು. ಇಲ್ಲಿಯೂ ಸಹ ಅರ್ಜಿ ದಾರನ ಹಸ್ತಕ್ಷೇಪ ಇರಲಿದೆ. ಸಾಮಾನ್ಯವಾಗಿ ಆಸ್ತಿಯ ಮೇಲೆ ನಡೆದಿರುವ ವ್ಯವಹಾರಗಳು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿ ಆಗಿದ್ದರೆ ಸ್ವಯಂಚಾಲಿತವಾಗಿ ಇ.ಸಿ. ಮುದ್ರಿತವಾಗಿ ಅರ್ಜಿದಾರನ ಕೈಸೇರಬೇಕು. ಅರ್ಜಿ ದಾರನ ಹಸ್ತಕ್ಷೇಪ ಇದ್ದರೆ ತನಗೇ ಬೇಕಾದ ರೀತಿಯಲ್ಲಿ ಇ.ಸಿ ಪಡೆದು ಮೋಸ ಮಾಡಲು ಅವಕಾಶ ಹೆಚ್ಚಿರಲಿದೆ ಎಂಬುದು ಹಿರಿಯ ಅಧಿಕಾರಿಗಳ ವಾದ.
ಲೆಕ್ಕದಲ್ಲೂ ತಪ್ಪು!:ದಸ್ತಾವೇಜು ನೋಂದಣಿಗೆ ಅರ್ಜಿ ಸಲ್ಲಿಸಿ ದಾಗ ಸ್ವಯಂಚಾಲಿತವಾಗಿ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಲೆಕ್ಕಾಚಾರವಾಗಿ ಅರ್ಜಿದಾರನಿಗೆ ತೋರಿಸಬೇಕು. ಆದರೆ, ಕಾವೇರಿ ಸಾಫ್ಟ್​ವೇರ್ ಸಾಕಷ್ಟು ಬಾರಿ ತಪು್ಪ ಲೆಕ್ಕಚಾರ ತೋರಿಸಿ ಅಧಿಕಾರಿಗಳನ್ನು ಸಂಕಷ್ಟಕ್ಕೆ ಸಿಲುಕಿಸುತ್ತಿದೆ. ಅದಕ್ಕಾಗಿ ಈಗಲೂ ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಹೊಸಪದ್ಧತಿ ಜತೆಗೆ ಹಳೆಯ ಪದ್ಧತಿಯಂತೆ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಆಡಿಟ್ ಮಾಡಿಸಲಾಗುತ್ತಿದೆ. ಇದು ಅಧಿಕಾರಿಗಳಿಗೆ ತಲೆ ನೋವು ತರಿಸಿದೆ.
ಆಸ್ತಿಗೆ ಇ.ಸಿ. ಕೈಗನ್ನಡಿ!:ಇ.ಸಿ. ಎಂದರೇ ಋಣಭಾರ ಪ್ರಮಾಣ ಪತ್ರ (ಎನ್ಕಂಬರೆನ್ಸ್ ಸರ್ಟಿಫಿಕೇಟ್). ಯಾವುದೇ ಆಸ್ತಿಯು ಕಾನೂನು ಅಥವಾ ಹಣಕಾಸಿನ ಬಾಧ್ಯತೆಗಳಿಗೆ ಒಳಗಾಗಿದೆಯೇ ಅಥವಾ ಮುಕ್ತವಾಗಿದೆಯೇ ಎಂದು ದೃಢೀಕರಿಸುವ ಕಾನೂನುಬದ್ಧ ದಾಖಲೆ ಇದು. ಆಸ್ತಿ ಖರೀದಿ ಅಥವಾ ಮಾರಾಟ, ಸಾಲಕ್ಕೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಗೆ ಈ ಪತ್ರ ಬಹುಮುಖ್ಯ. ಇ.ಸಿಯಲ್ಲಿ ಆಸ್ತಿಯ ಮೇಲೆ ಗುತ್ತಿಗೆ ಹಕ್ಕು, ಅಡಮಾನದ ಹಕ್ಕು, 3ನೇ ವ್ಯಕ್ತಿ ಹಕ್ಕು ಮತ್ತು ಇತರ ಶುಲ್ಕ ಬಾಕಿ ಇದ್ದರೇ ನಮೂದಾಗಿರುತ್ತದೆ. ಇಲ್ಲದಿದ್ದರೆ ಇಲ್ಲವೆಂದು ಮುದ್ರಿತವಾಗಲಿದೆ.
ಸರಣಿ ಲೋಪ, ಪೇಮೆಂಟ್ ಗೇಟ್​ವೇ ಅತಂತ್ರ:ಆನ್​ಲೈನ್​ನಲ್ಲಿ ನೋಂದಣಿ ಮತ್ತು ಮುದ್ರಾಂಕ ಶುಲ್ಕವನ್ನು ವ್ಯಾಲೆಟ್, ನೆಟ್​ಬ್ಯಾಂಕಿಂಗ್, ಡೆಬಿಟ್, ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಸಬೇಕು. ಕಾವೇರಿ 2.0ನಲ್ಲಿ ದಸ್ತಾವೇಜು ನೋಂದಣಿಗೆ ಅಪ್​ಲೋಡ್ ಮಾಡಿರುವ ಅರ್ಜಿಗೆ ಹೋಗಿ ಪೇಮೆಂಟ್ ಮೋಡ್​ಗೆ ಓಕೆ ಮಾಡಿದಾಗ 3 ರಿಂದ 5 ನಿಮಿಷ ಅವಕಾಶ ಸಿಗಲಿದೆ. ತಪು್ಪ ಪಾಸ್​ವರ್ಡ್ ಅಥವಾ ಸರ್ವರ್ ಸಮಸ್ಯೆ ಎದುರಾಗಿ ಸಮಯ ಅಂತ್ಯವಾದರೆ ಮತ್ತೆ ಆ ಅರ್ಜಿ ಪೇಮೆಂಟ್ ಮೂಡ್​ಗೆ ಬರಲು 2ರಿಂದ 3 ಗಂಟೆ ಕಾಯಬೇಕಾಗುತ್ತದೆ. ಸಬ್ ರಿಜಿಸ್ಟ್ರಾರ್ ಕಚೇರಿಗೆ ಬರುವ ಎಲ್ಲರ ಬಳಿಯೂ ವ್ಯಾಲೆಟ್, ನೆಟ್​ಬ್ಯಾಂಕಿಂಗ್ ಇರುವುದಿಲ್ಲ. ಇದ್ದರೂ ವ್ಯಾಲೆಟ್​ನಲ್ಲಿ ದಿನಕ್ಕೆ 99 ಸಾವಿರ ರೂ.ಗಿಂತ ಹೆಚ್ಚಿನ ಮೊತ್ತ ವರ್ಗಾವಣೆ ಆಗುವುದಿಲ್ಲ. ನೆಟ್​ಬ್ಯಾಂಕಿಂಗ್​ನಲ್ಲಿ ಒಂದೊಂದು ಖಾತೆಗೆ ಒಂದೊಂದು ಲಿಮಿಟೆಷನ್ ಇರಲಿದೆ. ಈ ಮಾಹಿತಿ ಖಾತೆದಾರನಿಗೆ ಇರುವುದಿಲ್ಲ. ಈ ವೇಳೆ ನಿಗದಿತ ಸಮಯದಲ್ಲಿ ಶುಲ್ಕ ಪಾವತಿಸಲು ಸಾಕಷ್ಟು ಮಂದಿ ವಿಫಲವಾಗಿ ಇಡೀ ದಿನ ಕಾಯಬೇಕಾಗುತ್ತದೆ.
2. ಆಯ್ಕೆ ಮಾಡಿಕೊಳ್ಳುವ ವಹಿವಾಟಷ್ಟೇ ಉಲ್ಲೇಖ
3. ನಿಲ್ ಕೊಟ್ಟರೆ ಪರಿಶೀಲನೆ ಆಗದೆ ಕೈಸೇರಲಿದೆ ಇ.ಸಿ.
4.  ಇ.ಸಿ.ಯಲ್ಲಿ ಅರ್ಜಿದಾರನ ಹಸ್ತಕ್ಷೇಪ ಹೆಚ್ಚಳ
5.  ಬೇಕಾದ ಮಾಹಿತಿ ಮೇಲೆ, ಕೆಳಗೆ ಬದಲಾವಣೆ
6.  1 ಆಸ್ತಿ ಮೇಲೆ 3-4 ಸಾಲ ಪಡೆದಿರುವ ಸಾಧ್ಯತೆ
7. ಒಂದೇ ಆಸ್ತಿ ಹಲವರಿಗೆ ಮಾರಲು ಅವಕಾಶ
8.  ಭೂಗಳ್ಳರಿಗೆ ವರವಾಗುತ್ತಿದೆ ಕಾವೇರಿ ವೈಫಲ್ಯ
9. ಪಾಸ್​ವರ್ಡ್ ತಪ್ಪಾದರೆ 3-4 ತಾಸು ವ್ಯರ್ಥ
10. ಅಧಿಕಾರಿಗಳಿಗೆ ತಲೆಬಿಸಿ ತರಿಸಿದೆ ಲೆಕ್ಕಾಚಾರ
ಕರ್ನಾಟಕ: ಎಸ್ಎಸ್ಎಲ್​ಸಿ ಪರೀಕ್ಷೆ ಮೊದಲ ದಿನವೇ ಮೂವರು ವಿದ್ಯಾರ್ಥಿಗಳು ಸಾವು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × five =
Remember me
