ಬೆಂಗಳೂರು:ಕಲಬುರಗಿ ಮೂಲದ ಡಾ. ಕೆ.ಶರೀಫಾ ಅವರ ಅಪ್ರಕಟಿತ ಕಥಾಸಂಕಲನ ‘ನೀರೊಳಗಣ ಕಿಚ್ಚು’ ಈ ಹೊತ್ತಿಗೆ ಕಥಾ ಪ್ರಶಸ್ತಿಗೆ ಹಾಗೂ ಬೆಂಗಳೂರಿನ ಎಚ್.ಎಸ್. ಮಧುರಾಣಿ ಅವರ ‘ನೀಲಿ ಚುಕ್ಕಿಯ ನೆರಳು’ ಅಪ್ರಕಟಿತ ಕವನ ಸಂಕಲನ ಈ ಹೊತ್ತಿಗೆ ಕಾವ್ಯ ಪ್ರಶಸ್ತಿಗೆ ಪಾತ್ರವಾಗಿವೆ.
ಖ್ಯಾತ ಕತೆಗಾರ್ತಿ ವೀಣಾ ಶಾಂತೇಶ್ವರ ಅವರು ಈ ಬಾರಿಯ ಈ ಹೊತ್ತಿಗೆ ಕಥಾ ಪ್ರಶಸ್ತಿ ವಿಭಾಗದ ತೀರ್ಪುಗಾರರಾಗಿದ್ದರು. ಕವಿ ಡಾ. ಎಚ್.ಎಸ್. ಶಿವಪ್ರಕಾಶ್ ಈ ಹೊತ್ತಿಗೆ ಕಾವ್ಯ ಪ್ರಶಸ್ತಿ ತೀರ್ಪುಗಾರರಾಗಿದ್ದರು. ಇದು ಈ ಹೊತ್ತಿಗೆಯ ಮೊದಲ ಕಾವ್ಯ ಪ್ರಶಸ್ತಿಯಾಗಿದೆ.
ಎರಡೂ ಪ್ರಶಸ್ತಿಗಳು ತಲಾ 10 ಸಾವಿರ ರೂ. ಹಾಗೂ ಪ್ರಶಸ್ತಿ ಫಲಕವನ್ನೊಳಗೊಂಡಿವೆ. ಮಾ.27ರಂದು ಬೆಂಗಳೂರಿನ ಜೆ.ಪಿ. ನಗರದಲ್ಲಿರುವ ಕಪ್ಪಣ್ಣ ಅಂಗಳ ಸಭಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಈ ಹೊತ್ತಿಗೆ ಸಂಚಾಲಕಿ ಜಯಲಕ್ಷ್ಮೀ ಪಾಟೀಲ್ ತಿಳಿಸಿದ್ದಾರೆ.
ಮದ್ವೆಯಾದ ಹತ್ತೇ ತಿಂಗಳಲ್ಲಿ ದುರಂತ; ಪತ್ನಿಯ ಶವ ನೋಡಿ ಪತಿಯೂ ಆತ್ಮಹತ್ಯೆ…

ಮಸೀದಿ-ಮಂದಿರಗಳ ಧ್ವನಿವರ್ಧಕದ ಶಬ್ದ ತಗ್ಗಿಸದಿದ್ದರೆ ಕಾನೂನುಕ್ರಮ: ಪೊಲೀಸ್ ಕಮಿಷನರ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × two =
Remember me
