| ವಿಲಾಸ ಮೇಲಗಿರಿ ಬೆಂಗಳೂರುಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಆಸ್ತಿಗಳ ಮಾರಾಟ, ಖರೀದಿ, ಪಾಲು ಹಾಗೂ ಬ್ಯಾಂಕ್ ಸಾಲಕ್ಕೆ ಇ-ಸ್ವತ್ತು ಸಲ್ಲಿಕೆ ಕಡ್ಡಾಯವಾಗಿದೆ. ಆದರೆ, ತಂತ್ರಜ್ಞಾನ ಬಳಸಿ ಸರ್ಕಾರ ಕೈಗೊಂಡಿರುವ ಈ ಯೋಜನೆಯನ್ನು ಅನುಷ್ಠಾನಗೊಳಿಸುವಲ್ಲಿ ಆಗಿರುವ ಎಡವಟ್ಟಿನಿಂದಾಗಿ ಆಸ್ತಿ ಮಾಲೀಕರು ದಾಖಲೆ ಪತ್ರ ಪಡೆಯಲು ಪರದಾಡುವ ಸ್ಥಿತಿ ನಿರ್ವಣವಾಗಿದೆ.
ಆಸ್ತಿಗಳನ್ನು ಸರಳವಾಗಿ ತಮ್ಮ ಹೆಸರಿಗೆ ವರ್ಗಾಯಿಸಿಕೊಳ್ಳಲು ಸಹಾಯಕವಾಗುವಂತೆ ಇ ಸ್ವತ್ತು ತಂತ್ರಾಂಶ ಬಳಸಿ ಆನ್​ಲೈನ್ ಮೂಲಕ ಫಾರಂ-9 ಹಾಗೂ ಫಾರಂ-11 ವಿತರಿಸಲಾ ಗುತ್ತದೆ. ಈ ದಾಖಲೆಗಳನ್ನು ಆಸ್ತಿ ನೋಂದಣಿಗೆ ಬಳಸಬಹುದು. ಆದರೆ ಈಗ ಸಹಸ್ರಾರು ಜನರು ಇ-ಸ್ವತ್ತು ಸಿಗದೇ ಕಚೇರಿಯಿಂದ ಕಚೇರಿಗೆ ಅಲೆದಾಡುವ ಸ್ಥಿತಿ ತಲೆದೋರಿದೆ.
ಇ-ಸ್ವತ್ತು ಹಲವು ಅಧಿಕಾರಿಗಳಿಗೆ ದುಡ್ಡು ಮಾಡುವ ದಂಧೆಯಾಗಿದೆ. ಸಣ್ಣಪುಟ್ಟ ಕಾರಣ ನೀಡಿ ದಾಖಲೆ ನೀಡದೇ ಅರ್ಜಿದಾರರನ್ನು ಸತಾಯಿಸಲಾಗುತ್ತಿದೆ. ಅಲ್ಲದೆ ಸಾವಿರಾರು ರೂಪಾಯಿ ಸುಲಿಗೆ ಮಾಡುವ ಆರೋಪಗಳೂ ಕೇಳಿ ಬರುತ್ತಿವೆ. ಇ-ಸ್ವತ್ತು ವಿಚಾರವಾಗಿಯೇ ಅಧಿಕಾರಿ ಮತ್ತು ಅರ್ಜಿದಾರರ ನಡುವೆ ಗಲಾಟೆಗಳೂ ಆಗಿವೆ.
ತಿಂಗಳುಗಟ್ಟಲೇ ಕಾಯುವ ಸ್ಥಿತಿ:ಅರ್ಜಿದಾರರಿಗೆ ಸಕಾಲದಡಿ 45 ದಿನಗಳಲ್ಲಿ ಇ-ಸ್ವತ್ತು ವಿತರಿಸಬೇಕು. ಆದರೆ ಅನೇಕ ಸಂದರ್ಭಗಳಲ್ಲಿ ತಿಂಗಳಾನುಗಟ್ಟಲೇ ಕಾದರೂ ಸಿಗುತ್ತಿಲ್ಲ. ಅರ್ಜಿದಾರರಿಗೆ ಸುಲಭವಾಗಿ ಇ-ಸ್ವತ್ತು ಸಿಗಬೇಕು ಎಂಬ ದೃಷ್ಟಿಯಿಂದ ದಿಶಾಂಕ್ ಆಪ್ ಮೂಲಕ ಮೊಬೈಲ್ ಬಳಸಿ ಇ-ಸ್ವತ್ತು ವಿತರಿಸಲು ಎರಡೂವರೆ ತಿಂಗಳ ಹಿಂದೆ ಗ್ರಾಮೀಣಾಭಿವೃದ್ಧಿ ಮತ್ತು ಕಂದಾಯ ಇಲಾಖೆಗಳು ಜಂಟಿ ಸುತ್ತೋಲೆ ಹೊರಡಿಸಿವೆ.
ಆದರೆ ಅದು ಪ್ರಾಯೋಗಿಕವಾಗಿ ಕೆಲವು ಕಡೆ ಯಶಸ್ವಿಯಾಯಿತೇ ವಿನಃ ಎಲ್ಲ ಕಡೆ ಸಮರ್ಪಕವಾಗಿ ಜಾರಿಗೆ ಬರಲಿಲ್ಲ. ಇದರಿಂದ ಅರ್ಜಿದಾರರು ಮತ್ತಷ್ಟು ಸಂಕೀರ್ಣ ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ಅಲ್ಲದೆ, ಈಚೆಗೆ ಬಾಪೂಜಿ ಸೇವಾ ಕೇಂದ್ರಗಳ ಮೂಲಕ ಇ-ಸ್ವತ್ತಿಗೆ ಅರ್ಜಿ ಸ್ವೀಕರಿಸಲಾಗುತ್ತದೆ. ಆದರೆ ವಿತರಣೆ ಮಾತ್ರ ಅಂಬೆಗಾಲಿನ ನಡಿಗೆಯಾಗಿದೆ.
ಇನ್ನಷ್ಟು ಸರಳೀಕರಣ ಅಗತ್ಯ:ಅರ್ಜಿದಾರರು ಭೂ ದಾಖಲೆಗಳನ್ನು ಪಡೆವ ಹಾಗೆ ಇ-ಸ್ವತ್ತನ್ನೂ ಪಡೆಯುವಂತೆ ತಂತ್ರಜ್ಞಾನ ಸರಳೀಕರಣಗೊಳಿಸಬೇಕು. ಈಗಾಗಲೇ ಸರ್ಕಾರ ತೆರಿಗೆ ಪರಿಷ್ಕರಣೆ ಹಿನ್ನೆಲೆಯಲ್ಲಿ ಆಸ್ತಿ ಸರ್ವೆಗೆ ಚಾಲನೆ ನೀಡಿದೆ. ಅದೇ ಡೇಟಾವನ್ನು ಇನ್ನಷ್ಟು ಖಚಿತಗೊಳಿಸಿ ಇ-ಸ್ವತ್ತು ತಂತ್ರಾಂಶಕ್ಕೆ ಅಪ್​ಲೋಡ್ ಮಾಡಬೇಕು. ಅರ್ಜಿದಾರರು ತೆರಿಗೆ ಬಾಕಿ ಇದ್ದರೆ ತೆರಿಗೆ ಪಾವತಿಸಿ ಮತ್ತು ಅರ್ಜಿ ಶುಲ್ಕ ಪಾವತಿಸಿ ಡೌನ್​ಲೋಡ್ ಮಾಡಿಕೊಳ್ಳಲು ಪೂರಕವಾಗಿ ತಂತ್ರಾಂಶ ಅಭಿವೃದ್ಧಿಪಡಿಸಿ, ಸರಳವಾಗಿ ಇ-ಸ್ವತ್ತನ್ನೂ ಪಡೆಯಲು ಅವಕಾಶ ಮಾಡಿಕೊಡಬೇಕು.
ಭ್ರಷ್ಟಾಚಾರಕ್ಕೆ ಕಡಿವಾಣ:ಇ-ಸ್ವತ್ತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ದೊಡ್ಡ ಮಟ್ಟದ ಭ್ರಷ್ಟಾಚಾರಕ್ಕೂ ಇಂಬು ಮಾಡಿಕೊಟ್ಟಿದೆ. ಅನೇಕ ಅಧಿಕಾರಿಗಳು ಇ-ಸ್ವತ್ತು ವಿತರಣೆಯನ್ನೇ ದಂಧೆಯಾಗಿಸಿಕೊಂಡು ಅರ್ಜಿದಾರರ ಸುಲಿಗೆ ಮಾಡುತ್ತಿದ್ದಾರೆ. ಇ-ಸ್ವತ್ತು ತಂತ್ರಾಂಶ ಮತ್ತಷ್ಟು ಸರಳೀಕರಿಸಿದರೆ ಅರ್ಜಿದಾರರಿಗೆ ಹೆಚ್ಚು ಅನುಕೂಲವಾಗುತ್ತದೆ.
ಸರ್ವೆಯರ್ ಕೊರತೆ:ಪ್ರಸ್ತುತ ಗ್ರಾಮ ಪಂಚಾಯಿತಿಗೆ ಸಲ್ಲಿಕೆಯಾಗುವ ಇ-ಸ್ವತ್ತಿಗೆ ಸಂಬಂಧಿಸಿದ ಅರ್ಜಿಗಳನ್ನು ಭೂ ಮಾಪನ ಇಲಾಖೆಗೆ ಕಳುಹಿಸಲಾಗುತ್ತದೆ. ಭೂ ಸರ್ವೆ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿಂದ ಅರ್ಜಿ ವಿಲೇವಾರಿ ವಿಳಂಬವಾಗುತ್ತಿದೆ. ಇದು ಕೂಡ ಇ-ಸ್ವತ್ತು ಪಡೆಯಲು ದೊಡ್ಡ ಅಡ್ಡಿಯಾಗಿದೆ.
ದಿಶಾಂಕ್ ಆ್ಯಪ್ ಮೂಲಕ ಇ-ಸ್ವತ್ತು ವಿತರಣೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪ್ರಾಯೋಗಿಕ ಪರೀಕ್ಷೆ ನಡೆಸಲಾಗಿದೆ. ಪಂಚತಂತ್ರ-2ಕ್ಕೆ ಇನ್ನೊಂದು ವರ್ಷನ್ ಅಪ್​ಡೇಟ್ ಮಾಡುವುದು ಬಾಕಿ ಇದೆ. ಸಮಸ್ಯೆ ಸರಿಪಡಿಸಿ ರಾಜ್ಯಾದ್ಯಂತ ಆ್ಯಪ್ ಮೂಲಕ ಇ-ಸ್ವತ್ತು ವಿತರಣೆಗೆ ವ್ಯವಸ್ಥೆ ಮಾಡುತ್ತೇವೆ.
| ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಆಯುಕ್ತರು, ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯ
ಆ್ಯಪ್ ಕಾರ್ಯನಿರ್ವಹಣೆ ಹೇಗೆ?:ಕರ್ನಾಟಕ ದೂರ ಸಂವೇದಿ ಅನ್ವಯಿಕ ಕೇಂದ್ರ ಅಭಿವೃದ್ಧಿ ಪಡಿಸಿರುವ ದಿಶಾಂಕ್ ಆಪ್ ಮೂಲಕ ಡಿಜಿಟಲೀಕರಣ ಗೊಳಿಸಿದ ಮತ್ತು ಜಿಯೋ ಉಲ್ಲೇಖಿತ ನಕ್ಷೆಗಳನ್ನು ಬಳಸಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಆಸ್ತಿಗಳು ಗ್ರಾಮ ಠಾಣಾದ ಒಳಗೆ ಅಥವಾ ಹೊರೆ ಬರುವ ವಿವರಗಳನ್ನು ಪಡೆಯುತ್ತಾರೆ.
ಎಷ್ಟು ಅರ್ಜಿಗಳು ಬಾಕಿ?:ರಾಜ್ಯದಲ್ಲಿ ಪ್ರಸ್ತುತ 35,457 ಫಾರಂ-9 ಅರ್ಜಿಗಳು ಹಾಗೂ 13,831 ಫಾರಂ-11 ಬಿ ಅರ್ಜಿಗಳು ಸೇರಿದಂತೆ ಒಟ್ಟು 49,288 ಅರ್ಜಿಗಳು ವಿಲೇವಾರಿಯಾಗದೆ ಬಾಕಿ ಉಳಿದಿವೆ. ಈ ಪೈಕಿ 14021 ಅರ್ಜಿಗಳು 45 ದಿನಗಳ ಒಳಗಿನವು ಹಾಗೂ 35,267 ಅರ್ಜಿಗಳು 45ಕ್ಕೂ ಹೆಚ್ಚಿನ ದಿನಗಳಿಂದ ವಿಲೇವಾರಿಯಾಗಿಲ್ಲ.
ಮಕ್ಕಳ ಯಕ್ಷಗಾನವನ್ನು ನಿಲ್ಲಿಸಿದ ಪೊಲೀಸರು: ಕಾರಣ ಇದೇನಾ?

16 ದಿನ ಮನೆಯಲ್ಲಿ ಯಾರೂ ಇರಲಿಲ್ಲ, ಆದ್ರೂ ಬಂತು ಕರೆಂಟ್ ಬಿಲ್ ಮೂರುಪಟ್ಟು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + seventeen =
Remember me
