ಬೆಂಗಳೂರು:ಇಡೀ ದೇಶದಲ್ಲಿ ಇ-ಸಂಜೀವಿನಿ ಟೆಲಿ ಕನ್ಸಲ್ಟೇಷನ್ ಸೌಲಭ್ಯ ಒದಗಿಸುವಲ್ಲಿ ಕರ್ನಾಟಕ 3ನೇ ಸ್ಥಾನವನ್ನು ಪಡೆದುಕೊಳ್ಳುವ ಮೂಲಕ ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ್ ಆರೋಗ್ಯ ಮತ್ತು ಸೌಖ್ಯ ಕೇಂದ್ರಗಳ ಇಲಾಖೆಯಿಂದ ಪ್ರಶಸ್ತಿಗೆ ಭಾಜನವಾಗಿದೆ.
ದೇಶದಲ್ಲಿ ಕೋವಿಡ್ ಉಲ್ಬಣಗೊಂಡ ಹಿನ್ನೆಲೆಯಲ್ಲಿ ಎಲ್ಲರಿಗೂ ಗುಣಮಟ್ಟದ ಚಿಕಿತ್ಸೆ ಒದಗಿಸುವ ಉದ್ದೇಶದಿಂದ ಕೇಂದ್ರ ಆರೋಗ್ಯ ಸಚಿವಾಲಯ ‘ಇ-ಸಂಜೀವನಿ’ ಟೆಲಿ ಕನ್ಸಲ್ಟೇಷನ್ ಸಮಾಲೋಚನಾ ಸೇವೆ ಆರಂಭಿಸಿತ್ತು. ಪ್ರಸ್ತುತ, ರಾಷ್ಟ್ರೀಯ ಕನ್ಸಲ್ಟೇಷನ್ ಸೇವೆ 31 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಇ-ಸಂಜೀವಿನಿ ಯೋಜನೆಯಡಿ 375ಕ್ಕೂ ಅಧಿಕ ಆನ್​ಲೈನ್ ಹೊರರೋಗಿ ಚಿಕಿತ್ಸಾ ವಿಭಾಗ (ಒಪಿಡಿ)ದ ಮೂಲಕ ಬರೋಬ್ಬರಿ 60 ಲಕ್ಷಕ್ಕೂ ಅಧಿಕ ಜನರು ಸಮಾಲೋಚನೆ ಸೇವೆ ಪಡೆದುಕೊಂಡಿದ್ದಾರೆ.
ಕಳೆದ ವರ್ಷ ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ದೇಶಾದ್ಯಂತ ಆಸ್ಪತ್ರೆಗಳ ಒಪಿಡಿಗಳು ಮುಚ್ಚಲ್ಪಟ್ಟಿದ್ದರಿಂದ, ಕೇಂದ್ರ ಆರೋಗ್ಯ ಸಚಿವಾಲಯವು ಸೆಂಟರ್ ಫಾರ್ ಡೆವಲಪ್​ವೆುಂಟ್ ಆಫ್ ಅಡ್ವಾನ್ಸ್ ಕಂಪ್ಯೂಟಿಂಗ್ (ಮೊಹಾಲಿ) ಸಹಯೋಗದೊಂದಿಗೆ ’ಇ-ಸಂಜೀವಿನಿ’ ಟೆಲಿಮೆಡಿಸಿನ್ ಉಪಕ್ರಮವನ್ನು ಜಾರಿಗೆ ತಂದಿತ್ತು. ರಕ್ಷಣಾ ಸಚಿವಾಲಯದಿಂದಲೂ ಸೇವೆ: ಆರೋಗ್ಯ ಸಚಿವಾಲಯದ ಯೋಜನೆಯಡಿ ರಕ್ಷಣಾ ಸಚಿವಾಲಯವು ಕೂಡ ಇ-ಸಂಜೀವಿನಿ ಹೊರರೋಗಿ ಚಿಕಿತ್ಸಾ ವಿಭಾಗದ ಮಾದರಿಯಲ್ಲಿ ರಾಷ್ಟ್ರೀಯ ಒಪಿಡಿಯನ್ನು ಆಯೋಜಿಸಲಾಗಿದೆ. ಇಲ್ಲಿ 100ಕ್ಕೂ ಅಧಿಕ ರಕ್ಷಣಾ ಪಡೆಯ ಅನುಭವಿ ವೈದ್ಯರು ಮತ್ತು ತಜ್ಞರು ದೇಶಾದ್ಯಂತ ರೋಗಿಗಳಿಗೆ ಟೆಲಿಮೆಡಿಸಿನ್ ಸೇವೆ ಸಲ್ಲಿಸುತ್ತಿದ್ದಾರೆ. ಅನೇಕ ರಾಜ್ಯಗಳ ಜನರು ಇ-ಸಂಜೀವಿನಿಯ ಪ್ರಯೋಜನ ಪಡೆಯುತ್ತಿದ್ದು, ಇದು ಆರೋಗ್ಯ ಸೇವೆಗಳನ್ನು ಪಡೆಯುವ ಡಿಜಿಟಲ್ ವಿಧಾನವನ್ನು ವ್ಯಾಪಕವಾಗಿ ಅಳವಡಿಸಿಕೊಳ್ಳುವ ಪೋ›ತ್ಸಾಹದಾಯಕ ಪ್ರವೃತ್ತಿಗೆ ಕಾರಣವಾಗಿದೆ. ರಾಜ್ಯಕ್ಕೆ ಪ್ರಶಸ್ತಿ ಪ್ರದಾನ: ಇತ್ತೀಚೆಗೆ ನವೆದೆಹಲಿಯಲ್ಲಿ ನಡೆದ ಆಯುಷ್ಮಾನ್ ಭಾರತ್ 4ನೇ ವಾರ್ಷಿಕೋತ್ಸವದ ವರ್ಚುವಲ್ ಕಾರ್ಯಕ್ರಮದಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಮನ್ಸುಕ್ ಮಾಂಡವೀಯ ಉತ್ತಮ ಸೇವೆ ಒದಗಿಸಿದ ಟಾಪ್-10 ರಾಜ್ಯಗಳಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಇದೇ ವೇಳೆ 1 ಲಕ್ಷ ಹೊಸ ಟೆಲಿಮೆಡಿಸಿನ್ ಕೇಂದ್ರಗಳನ್ನು ಉದ್ಘಾಟಿಸಿದರು. ಮುಂದಿನ ದಿನಗಳಲ್ಲಿ ಆರೋಗ್ಯ ಮತ್ತು ಸೌಖ್ಯ ಕೇಂದ್ರಗಳು ವೈದ್ಯಕೀಯ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ತರಲಿದೆ. ಜನ ಸಾಮಾನ್ಯರು ಕೂಡ ಈ ಕೇಂದ್ರಗಳ ಮೂಲಕ ಖ್ಯಾತ ತಜ್ಞ ವೈದ್ಯರ ಸಲಹೆಗಳನ್ನು ಇ-ಸಂಜೀವಿನಿ ಟೆಲಿ ಕನ್ಸಲ್ಟೇಷನ್ ಸೌಲಭ್ಯ ಮೂಲಕ ಪಡೆಯಲು ಸಾಧ್ಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಇ-ಸಂಜೀವಿನಿ ಟೆಲಿಮೆಡಿಸನ್ ಸೇವೆ ನೀಡುವಲ್ಲಿ ದೇಶದಲ್ಲೇ ಕರ್ನಾಟಕ ಮೂರನೇ ಸ್ಥಾನದಲ್ಲಿದೆ. ಕೋವಿಡ್ ಸಂದರ್ಭದಲ್ಲಿ ಎನ್​ಜಿಒ ಸೇವೆಯನ್ನು ಬಳಸಿ 40 ಲಕ್ಷ ಕರೆ ಸ್ವೀಕರಿಸಲಾಗಿತ್ತು, ಕೇಂದ್ರ ಇದನ್ನು ಪರಿಗಣಿಸಿಲ್ಲ. ನಮ್ಮ ಪೋರ್ಟಲ್ ಮೂಲಕ ನೀಡಿದ ಸೇವೆ ಮಾತ್ರವೇ ಪರಿಗಣಿಸಿದೆ. ಆದರೂ ದೊಡ್ಡ ರಾಜ್ಯಗಳ ಪೈಕಿ ಕರ್ನಾಟಕದ ಸಾಧನೆ ಗಣನೀಯ. ಈ ಸೇವೆಯಿಂದ ಜನರ ಸಮಯ, ಹಣ ಉಳಿತಾಯವಾಗಲಿದೆ. ಮುಂದಿನ ದಿನಗಳಲ್ಲಿ ದೇಶದಲ್ಲಿ ಮಾದರಿಯಾಗುವಂತೆ ಮಾಡುತ್ತೇವೆ.
|ಡಾ.ಕೆ.ಸುಧಾಕರ್ಆರೋಗ್ಯ ಸಚಿವ
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:sixteen − 3 =
Remember me
