ಚಿತ್ರದುರ್ಗ:ಹೆಂಡತಿಯ ನಡತೆಯನ್ನು ಪ್ರಶ್ನಿಸಿದ ವ್ಯಕ್ತಿ ಕಿವಿಯನ್ನು ಕತ್ತರಿಸಿರುವ ಆರೋಪ ಸಂತ್ರಸ್ತನ ಪತ್ನಿ, ಅತ್ತೆ ಮತ್ತು ಬಾಮೈದನ ವಿರುದ್ಧ ಕೇಳಿಬಂದಿದೆ.
ಚಳ್ಳಕೆರೆಯ ತ್ಯಾಗರಾಜನಗರದಲ್ಲಿ ಈ ಘಟನೆ ಸಂಭವಿಸಿದ್ದು, ಮೈಲಾರಿ(39) ಕಿವಿ ಕಟ್​ ಆಗಿದೆ. ಪತ್ನಿ ಹೇಮಶ್ರೀ, ಅತ್ತೆ ಚಂದ್ರಮ್ಮ, ಬಾಮೈದುನ ಸೇರಿ ಮೂವರು ಮೈಲಾರಿ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇನ್ನು ಮಾರಣಾಂತಿಕ ಹಲ್ಲೆಗೆ ಒಳಗಾದ ಮೈಲಾರಿ, ಕತ್ತರಿಸಿ ತುಂಡಾದ ಕಿವಿಯನ್ನ ಪ್ಲಾಸ್ಟಿಕ್ ಬಾಟಲಿಯಲ್ಲಿ ಹಾಕಿಕೊಂಡು ಚಿತ್ರದುರ್ಗ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.ಇದನ್ನೂ ಓದಿರಿಮೊದಲ ರಾತ್ರಿಯೇ ಮದುಮಗಳ ದುರಂತ ಸಾವು! ಮದ್ವೆ ಮನೆಯಲ್ಲಿ ಮುಗಿಲು ಮುಟ್ಟಿದ ಆಕ್ರಂದನ
ಮೈಲಾರಿಯ ಪತ್ನಿ ಹಲವು ಬಾರಿ ಬೇರೆಯವರೊಂದಿಗೆ ಓಡಾಡುತ್ತಿದ್ದರು ಎನ್ನಲಾಗಿದೆ. ಇದೇ ವಿಚಾರವಾಗಿ ನಡತೆ ಬಗ್ಗೆ ಅನುಮಾನಗೊಂಡ ಪತಿ, ಆಕೆಗೆ ವಾರ್ನಿಂಗ್​ ಕೊಟ್ಟಿದ್ದ. ಇದೇ ವಿಚಾರವಾಗಿ ಗಲಾಟೆ ನಡೆದಿದ್ದು, ತನ್ನ ಭಾವನ ಕಿವಿಯನ್ನ ಅಪ್ರಾಪ್ತ ವಯಸ್ಸಿನ ಬಾಮೈದುನ ಬಾಯಲ್ಲಿ ಕಚ್ಚಿ ತುಂಡರಿಸಿದ್ದಾನೆ.
ಕಿವಿ ಕಳೆದುಕೊಂಡ ಮೈಲಾರಿ ಸ್ಥಿತಿ ಕಂಡು ಸಂಬಂಧಿಕರು ಕಣ್ಣೀರು ಹಾಕಿದ್ದಾರೆ. ಚಳ್ಳಕೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೆಕ್ಸ್​ ವಿಡಿಯೋದಲ್ಲಿ ರಮೇಶ್​ ಜಾರಕಿಹೊಳಿಯ ಮಚ್ಚೆ ಹುಡುಕಿದ ಮಹೇಶ್​ ಕುಮಟಳ್ಳಿ!

ನಮ್ಮ ವಿರುದ್ಧ ತೇಜೋವಧೆ ನಡೆಯುತ್ತಿದೆ.. 6 ಜನ ಮಾತ್ರವಲ್ಲ, ಎಲ್ಲ ಸಚಿವರೂ ಕೋರ್ಟ್​ ಹೋಗ್ತಾರೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × five =
Remember me
