ಪ್ರತಿ ವರ್ಷ ಜೂ. 8ರಂದು ಬ್ರೖೆನ್ ಟ್ಯೂಮರ್ ಕುರಿತು ಜಾಗೃತಿ ಮೂಡಿಸಲಾಗುತ್ತದೆ. ಈ ವರ್ಷ ಮಿದುಳಿನ ಆರೋಗ್ಯ ಮತ್ತು ತಡೆಗಟ್ಟುವಿಕೆ (Brain Health and Prevention) ಘೋಷವಾಕ್ಯದೊಂದಿಗೆ ವಿಶ್ವ ಬ್ರೖೆನ್ ಟ್ಯೂಮರ್ ದಿನ ಆಚರಿಸಲಾಗುತ್ತಿದೆ.
| ಪಂಕಜ ಕೆ.ಎಂ. ಬೆಂಗಳೂರು
ಮಿದುಳಿನಲ್ಲಿ ಕೆಲವರಿಗೆ ಗಡ್ಡೆಗಳು ಕಾಣಿಸಿಕೊಳ್ಳುತ್ತವೆ. ಇದನ್ನು ಬ್ರೖೆನ್​ಟ್ಯೂಮರ್ ಎಂದು ಕರೆಯುತ್ತಾರೆ. ಇದರಲ್ಲಿ ಹಲವು ವಿಧಗಳಿವೆ. ಮಿದುಳಿನಲ್ಲಿ ಬೆಳೆಯುವ ಎಲ್ಲ ಗಡ್ಡೆಯೂ ಮಾರಣಾಂತಿಕವಲ್ಲ. ಆದರೆ ಟ್ಯೂಮರ್ ಇದೆ ಎಂದಾಕ್ಷಣ ರೋಗಿಗಳು ಮಾನಸಿಕವಾಗಿ, ದೈಹಿಕವಾಗಿ ಕುಗ್ಗಿ ಹೋಗುತ್ತಾರೆ. ಜೀವನವೇ ಮುಗಿದುಹೋಯಿತು ಎಂಬ ತೀರ್ವನಕ್ಕೆ ಬರುತ್ತಾರೆ. ಆದರೆ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಪಡೆಯುವುದರಿಂದ ಗುಣಹೊಂದಬಹುದು ಎನ್ನುತ್ತಾರೆ ನ್ಯೂರೋಆಂಕಾಲಜಿ ತಜ್ಞರು. ಕೆಲ ಅಧ್ಯಯನ ವರದಿಗಳ ಪ್ರಕಾರ, ಭಾರತದಲ್ಲಿ ಪ್ರತಿ ವರ್ಷ 50 ಸಾವಿರಕ್ಕೂ ಅಧಿಕ ಮಂದಿಯಲ್ಲಿ ಬ್ರೖೆನ್​ಟ್ಯೂಮರ್ ಪತ್ತೆಯಾಗುತ್ತದೆ. ಇವರಲ್ಲಿ ಶೇ. 20ರಷ್ಟು ಮಕ್ಕಳು. ಗಡ್ಡೆಗಳ ಗಾತ್ರ, ಬೆಳವಣಿಗೆ ಪ್ರಮಾಣ, ರೋಗಿಯ ವಯಸ್ಸು ಆಧರಿಸಿ ಚಿಕಿತ್ಸೆ ನೀಡಲಾಗುತ್ತದೆ. ಮಾರಣಾಂತಿಕವೆಂದು ಗುರುತಿಸಿದ ಪ್ರಕರಣಗಳಲ್ಲಿ ಬದುಕುಳಿಯುವ ಪ್ರಮಾಣ ಕೇವಲ ಶೇ. 34.4 ಇದೆ. ಹಾಗಾಗಿ ಆರಂಭದಲ್ಲೇ ರೋಗ ಪತ್ತೆ ಹಚ್ಚಿ ಚಿಕಿತ್ಸೆ ಪಡೆದರೆ ಒಳ್ಳೆಯದು.
ಬ್ರೖೆನ್​ಟ್ಯೂಮರ್​ಗೆ ಕಾರಣಗಳು:ಮಿದುಳಿನ ಕೋಶಗಳು ಇದ್ದಕ್ಕಿದ್ದಂತೆ ಅಸಹಜ ಬೆಳವಣಿಗೆ ಹೊಂದಿ ಒಂದೆಡೆ ಶೇಖರವಾಗಿ ಗಡ್ಡೆ ರೂಪ ಪಡೆಯುತ್ತವೆ. ಇದರಿಂದ ಮಿದುಳು, ನರಮಂಡಲದ ಕಾರ್ಯ ಕುಂಠಿತವಾಗಿ, ಆರೋಗ್ಯ ಹದಡೆಡುತ್ತದೆ. ಟ್ಯೂಮರ್​ಗಳಲ್ಲಿ 2 ಬಗೆ. ಮ್ಯಾಲಿಗ್ನನ್ಟ್ ಟ್ಯೂಮರ್ (ಕ್ಯಾನ್ಸರ್​ಕಾರಕ) ಮತ್ತು ಬೆನಿಗ್ನ್ ಟ್ಯೂಮರ್.

120 ವಿಧದ ಗಡ್ಡೆಗಳು:ಬ್ರೖೆನ್ ಟ್ಯೂಮರ್ ಕುರಿತಾಗಿ ನಿರಂತರ ಅಧ್ಯಯನ ಹಾಗೂ ಸಂಶೋಧನೆಗಳು ನಡೆಯುತ್ತಿದ್ದು, ಮಿದುಳಿನ ಅಂಗಾಂಶದ ಆಧಾರದ ಮೇಲೆ ಸಂಶೋಧಕರು ಸುಮಾರು 120 ವಿಧದ ಮಿದುಳಿನ ಗಡ್ಡೆಗಳನ್ನು ಗುರುತಿಸಿದ್ದಾರೆ. ಈ ನಿಟ್ಟಿನಲ್ಲಿ ಅಧ್ಯಯನ ನಿರಂತರವಾಗಿ ನಡೆಯುತ್ತಿದೆ.
ಚಿಕಿತ್ಸಾ ವಿಧಾನ:ಆರಂಭಿಕ ಹಂತದಲ್ಲೇ ಪತ್ತೆ ಹಚ್ಚಿದರೆ ಸೂಕ್ತ ಚಿಕಿತ್ಸೆಯೊಂದಿಗೆ ಬೇಗ ಗುಣಪಡಿಸಬಹುದು. ಕೆಲವರಲ್ಲಿ ಟ್ಯೂಮರ್ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತದೆ. ಕೆಲವರಿಗೆ ಆರಂಭದಲ್ಲಿ ಗೊತ್ತೇ ಆಗದೆ ಗಂಭೀರ ಸ್ಥಿತಿಯಲ್ಲಿ ಗೋಚರಿಸುತ್ತದೆ. ಗಡ್ಡೆ ಚಿಕ್ಕದರಿಂದ ವಿವಿಧ ಗಾತ್ರಗಳನ್ನು ಹೊಂದಿರುತ್ತದೆ. ವ್ಯಕ್ತಿಯಿಂದ ವ್ಯಕ್ತಿಗೆ ವ್ಯತ್ಯಾಸ ಇರುತ್ತದೆ. ಗಡ್ಡೆ ಹಾಗೂ ರೋಗದ ತೀವ್ರತೆ ಆಧರಿಸಿ ಶಸ್ತ್ರಚಿಕಿತ್ಸೆ ಹಾಗೂ ವಿಕಿರಣ ಚಿಕಿತ್ಸೆಯಿಂದ ಗುಣಪಡಿಸಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಬಹಳಷ್ಟು ಬೆಳವಣಿಗೆ ಆಗಿರುವ ಕಾರಣ ಗಡ್ಡೆ ಇರುವ ನಿರ್ದಿಷ್ಟ ಭಾಗದಲ್ಲಿ ಸಣ್ಣ ಛೇದ ಮಾಡಿಯೂ ಶಸ್ತ್ರಚಿಕಿತ್ಸೆ ನಡೆಸಲಾಗುತ್ತದೆ. ಇದರಿಂದ ಚಿಕಿತ್ಸೆ ಅವಧಿ ಹಾಗೂ ರೋಗಿಯ ಚೇತರಿಕೆ ಅವಧಿ ಎರಡೂ ಕಡಿಮೆಯಾಗಲಿದೆ ಎನ್ನುತ್ತಾರೆ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ನ್ಯೂರೋ ಅಂಕಾಲಜಿ ತಜ್ಞ ಡಾ. ನವೀನ್.
ದಿನಾಚರಣೆ ಇತಿಹಾಸ:ಬ್ರೖೆನ್​ಟ್ಯೂಮರ್​ಗೆ ಚಿಕಿತ್ಸೆ ಜತೆ ಅಗತ್ಯ ಪರಿಹಾರ ಕಂಡು ಹಿಡಿಯುವ, ಸಂಶೋಧನೆಗೆ ಉತ್ತೇಜಿಸುವ ಉದ್ದೇಶ ದಿಂದ ಜರ್ಮನ್ ಬ್ರೖೆನ್ ಟ್ಯೂಮರ್ ಅಸೋಸಿಯೇಷನ್ ಬೃಹತ್ ಅಭಿಯಾನ ಕೈಗೊಂಡಿತು. 2000 ಜೂ. 8ರಂದು ಮೊದಲ ಬಾರಿಗೆ ವಿಶ್ವ ಬ್ರೖೆನ್ ಟ್ಯೂಮರ್ ದಿನ ಆಚರಿಸಲಾಯಿತು. ನಂತರ ಅಂತಾರಾಷ್ಟ್ರೀಯ ಬ್ರೖೆನ್ ಟ್ಯೂಮರ್ ಅಲಯನ್ಸ್ ಜಗತ್ತಿನಾದ್ಯಂತ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿದೆ.
. ಅಗಾಗ ತೀವ್ರ ತಲೆನೋವು
. ವಾಕರಿಕೆ ಅಥವಾ ವಾಂತಿ
. ನೋವಿನ ಮಾತ್ರೆ ಸೇವಿಸಿದರೂ ನಿಲ್ಲದ ತಲೆ ನೋವು
. ಆಲೋಚಿಸುವಲ್ಲಿ, ಮಾತಾಡುವುದರಲ್ಲಿ ತೊಂದರೆ
. ವೈಯಕ್ತಿಕ ನಡವಳಿಕೆಯಲ್ಲಿ ಬದಲಾವಣೆ
. ಕ್ಷೀಣಿಸುವ ನೆನಪಿನ ಶಕ್ತಿ
. ಕಣ್ಣಿನ ದೃಷ್ಟಿ ಏರುಪೇರು
. ಕುಂದುವ ಶ್ರವಣ ಶಕ್ತಿ
. ನಡೆಯುವಾಗ ಸ್ನಾಯು ದೌರ್ಬಲ್ಯ
. ದೇಹದ ಯಾವುದಾದರೂ ಭಾಗದಲ್ಲಿ ಪಾರ್ಶ್ವವಾಯು
. ತಲೆ ತಿರುಗುವಿಕೆ, ಮೂರ್ಛೆ
. ಮಾನಸಿಕ ಸ್ಥಿಮಿತ ಕಳೆದುಕೊಳ್ಳುವುದು
ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ಒಂದರಲ್ಲೇ ಪ್ರತಿ ವರ್ಷ 260 ಬ್ರೖೆನ್ ಕ್ಯಾನ್ಸರ್ ಪ್ರಕರಣಗಳು ದಾಖಲಾಗುತ್ತವೆ. ಇವರಲ್ಲಿ ಶೇ. 8 ಮಕ್ಕಳಿದ್ದಾರೆ. ಕಳೆದ ವರ್ಷ ಸಂಸ್ಥೆಯಲ್ಲಿ 259 ಬ್ರೖೆನ್ ಟ್ಯೂಮರ್ ಪ್ರಕರಣಗಳು ದಾಖಲಾಗಿದ್ದು, ಇವರಲ್ಲಿ ಶೇ. 14.9 ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸಂಸ್ಥೆಯಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಉಚಿತ ಚಿಕಿತ್ಸೆ ಲಭ್ಯವಿದೆ.
| ಡಾ. ನವೀನ್ ವೈದ್ಯಕೀಯ ಅಧೀಕ್ಷಕ, ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ
ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿಯಾಗಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ನರೇಂದ್ರ ಮೋದಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + 1 =
Remember me
