|ಡಾ.ಎ.ಪಿ. ಭಟ್ಉಡುಪಿ, ಖಗೋಳ ತಜ್ಞರು
ಉಕ್ಕಿ ಚಿಮ್ಮುವ ಶಕ್ತಿ ಪ್ರವಾಹ ಸೌರಮಾರುತ ಸೂರ್ಯನ ಆವರ್ತಿತ ನರ್ತನವಾಗಿದೆ. ಶತ, ಸಹಸ್ರಮಾನಗಳಿಂದಲೂ ಈ ಪ್ರಕ್ರಿಯೆ ನಡೆಯುತ್ತಿದ್ದು, ಪ್ರಸ್ತುತ ಅಪ್ಪಳಿಸಿ ಬರುತ್ತಿರುವ ಸೌರಮಾರುತಕ್ಕೂ ಭೂಮಿ ಸೆಡ್ಡು ಹೊಡೆಯಲಿದೆ.
ಸೌರಮಾರುತದ ಬಗ್ಗೆ ಇತ್ತೀಚೆಗೆ ಭಾರಿ ಚರ್ಚೆಯಾಗುತ್ತಿದೆ. 2020ರಲ್ಲಿ ಪ್ರಾರಂಭವಾಗಿರುವ 11 ವರ್ಷಗಳ ಈ ಹೊಸ ಆವರ್ತನೆಯಲ್ಲಿ, ಈ ಸೌರಮಾರುತಗಳನ್ನು ಅತಿ ಹೆಚ್ಚಿನ ಶಕ್ತಿಯ ಎಕ್ಸ್1 ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ. ಈ ಶಕ್ತಿಯನ್ನು ಎ, ಬಿ, ಸಿ, ಎಂ ಮತ್ತು ಎಕ್ಸ್ ಎಂದು ವಿಂಗಡಿಸಲಾಗಿದೆ. 2011ರಲ್ಲೂ ಈಗಿನಂತೆ ಶಕ್ತಿಯುತ ಮಾರುತ ಭೂಮಿಗೆ ಅಪ್ಪಳಿಸಿತ್ತು. ಸೌರಮಾರುತ ಹೊಸತಲ್ಲ. ಸೂರ್ಯನ ಆವರ್ತನೆಗಳಲ್ಲಿ ಮಾಮೂಲಿ. ಪ್ರತಿದಿನವೂ ಈ ರೀತಿಯ ಪ್ರಕ್ರಿಯೆ ಸೂರ್ಯನಲ್ಲಿ ಶತ, ಸಹಸ್ರಮಾನಗಳಿಂದ ಅಂಕೆ ಇಲ್ಲದೆ ನಡೆಯುತ್ತಲೇ ಇದೆ. ಜುಲೈ 3ರಂದು ಈ ರೀತಿಯ ಪ್ರಕ್ರಿಯೆ ವಿಜ್ಞಾನಿಗಳ ಗಮನಕ್ಕೆ ಬಂತು. ಇದೊಂದು ಪ್ರಬಲ ಸೌರಮಾರುತವಾಗಲಿದೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.
ಭೂಮಿ ಈ ರೀತಿಯ ಹೊಡೆತಗಳನ್ನು ಪ್ರಾರಂಭದಿಂದಲೂ ಸಹಿಸಿಕೊಂಡು ಬಂದಿದೆ. ಭೂಮಿಯ ಸುತ್ತ ಇರುವ ಭೂ ಅಯಾನುಗಳ ಕವಚಗಳು (ವಾನ್ ಅಲೆನ್ ಬೆಲ್ಟ್) ಸೂರ್ಯ ಮಾರುತಗಳಿಗೆ ನೇರ ನುಗ್ಗಲು ಅವಕಾಶ ಕೊಡದೆ ಸೆಡ್ಡು ಹೊಡೆಯಲಿವೆ. ಭೂಮಿಯ ಸುತ್ತ ಸುಮಾರು 5 ಸಾವಿರ ಹಾಗೂ 15 ಸಾವಿರ ಕಿ.ಮೀ. ದೂರದಲ್ಲಿ ಕಾಂತ ಕ್ಷೇತ್ರದಂತೆ ಸುತ್ತಿಕೊಂಡಿವೆ ಈ ಕವಚಗಳು. ಇವು ಸಮಭಾಜಕ ವೃತ್ತದ ಸುತ್ತ ಉಬ್ಬಿ, ಧ್ರುವ ಪ್ರದೇಶಗಳಲ್ಲಿ ಒಳಸೇರಿವೆ. ಹಾಗಾಗಿ ಈ ಸೌರ ಮಾರುತಗಳು ಭೂಮಿಯ ಧ್ರುವ ಪ್ರದೇಶದಲ್ಲಿ ಹೆಚ್ಚು ಅಪ್ಪಳಿಸುತ್ತವೆ. ಭೂಮಿ ತನ್ನ ಸುತ್ತಲಿನ ಎಲ್ಲ ಜೀವರಾಶಿಗಳನ್ನು ಈ ಮಾರುತಗಳಿಂದ ರಕ್ಷಿಸಿದರೂ ಮನುಷ್ಯ ಸೃಷ್ಟಿಸಿದ ಆಕಾಶದಲ್ಲಿರುವ ಆಧುನಿಕ ತಂತ್ರಜ್ಞಾನಗಳು ಮಾತ್ರ ತೊಂದರೆಗೊಳಪಡುವ ಸಾಧ್ಯತೆ ಇದೆ. ಗಗನಯಾತ್ರಿಗಳಿಗೆ, ಕೃತಕ ಉಪಗ್ರಹಗಳ ಕಾರ್ಯ ನಿರ್ವಹಣೆಗೆ ಸಮಸ್ಯೆಯಾಗಬಹುದು. ಈ ಸೌರಮಾರುತಗಳ ವಿದ್ಯುತ್ ಕಾಂತೀಯ ಶಕ್ತಿಯುತ ಕಣಗಳು ಕೃತಕ ಉಪಗ್ರಹಗಳ ಎಲೆಕ್ಟ್ರಾನಿಕ್ ಉಪಕರಣಗಳ ಮೇಲೆ ಪ್ರಭಾವ ಬೀರಬಹುದು.
ಉತ್ತರ ಆಕಾಶದಲ್ಲಿ ಬೆಳಕಿನ ವಿಸ್ಮಯ:ಈ ಮಾರುತಗಳ ಅಬ್ಬರದ ಕಾಲದಲ್ಲಿ ಉತ್ತರ ಹಾಗೂ ದಕ್ಷಿಣ ಧ್ರುವ ಪ್ರದೇಶಗಳಲ್ಲಿ ಸುಂದರ ಪ್ರಭೆ ಕಾಣಲಿದೆ. ಈ ಪ್ರದೇಶಗಳಲ್ಲಿ ಭೂಮಿಯ ವಾತಾವರಣದ ಒಳನುಸುಳಿದ ಮಾರುತ ಕಣಗಳು ವಾತಾವರಣದ ಕಣಗಳೊಂದಿಗೆ ಘರ್ಷಿಸಿ ಕಣ್ಣಿಗೆ ಕಾಣುವ ಬಣ್ಣ ಬಣ್ಣದ ಬೆಳಕನ್ನು ಬಿಡುಗಡೆ ಮಾಡುತ್ತವೆ. ಉತ್ತರ ಆಕಾಶದಲ್ಲಿ ಬೆಳಕಿನ ವಿಸ್ಮಯ ಇರಲಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + 20 =
Remember me
