
ಮಂಗಳೂರು: ಕಳೆದ ಮೂರು ಬಾರಿ ಭೂಮಿ ಕಂಪಿಸಿ ಆತಂಕ ಸೃಷ್ಟಿಯಾದ ಸುಳ್ಯ ಹಾಗೂ ಕೊಡಗು ಗಡಿ ಭಾಗದಲ್ಲಿ ನಿನ್ನೆ ಮಧ್ಯರಾತ್ರಿ ವೇಳೆಗೆ ಮತ್ತೆ ಭೂಕಂಪನವಾಗಿದೆ.
ಮಧ್ಯ ರಾತ್ರಿ 1.15ರ ಸುಮಾರಿಗೆ ಈ ಕಂಪನ ಉಂಟಾಗಿದ್ದು ಗಾಢ ನಿದ್ರೆಯಲ್ಲಿದ್ದ ಜನ ಒಮ್ಮಲೇ ಎಚ್ಚರಗೊಂಡು ಭಯಭೀತರಾಗಿದ್ದಾರೆ.
ಆರಂಭದಲ್ಲಿ ದೊಡ್ಡ ಶಬ್ದ ಕೇಳಿತು. ಜತೆಗೆ ಅಲುಗಾಡಿದ ಅನುಭವವಾಯಿತು ಎಂದು ಜನ ಹೇಳಿಕೊಂಡಿದ್ದಾರೆ. ಕೆಲವರಿಗೆ ಒಂದೆರಡು ಸೆಕೆಂಡುಗಳ ವ್ಯತ್ಯಾಸದಲ್ಲಿ ಎರಡು ಬಾರಿ ಈಅನುಭವವಾಗಿದೆ.ಸಂಪಾಜೆ, ಚೆಂಬು, ತೊಡಿಕಾನ, ಪೆರಾಜೆ, ಬಡ್ಡಡ್ಕ, ಸುಳ್ಯ, ಉಬರಡ್ಕ, ಎಲಿಮಲೆ, ಗುತ್ತಿಗಾರು ಪರಿಸರಗಳಲ್ಲಿ ಈ ಕಂಪನದ ಅನುಭವವಾಗಿದೆ.
ಕಳೆದ ಎರಡು ವಾರಗಳಲ್ಲಿ ಇದು ನಾಲ್ಕನೇ ಬಾರಿಯ ಕಂಪನವಾಗಿದ್ದು ನಿನ್ನೆಯ ಕಂಪನದ ತೀವ್ರತೆ ಇನ್ನಷ್ಟೇ ತಿಳಿದು ಬರಬೇಕಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − 1 =
Remember me
