ಪ್ರಸಕ್ತ ಹಣಕಾಸು ವರ್ಷ (2023-24) ಮಾರ್ಚ್ 31ಕ್ಕೆ ಮುಕ್ತಾಯವಾಗುತ್ತಿದ್ದು, ಈ ವರ್ಷದಲ್ಲಿ ತೆರಿಗೆ ಉಳಿತಾಯದ ಕಸರತ್ತು ನಡೆಸುವುದಕ್ಕೆ ಇನ್ನು ಐದು ದಿನವಷ್ಟೇ ಬಾಕಿ ಉಳಿದಿವೆ. ತೆರಿಗೆ ಉಳಿಸುವ ಸರಳ ಉಪಾಯಗಳ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಕಡಿಮೆ ಅವಧಿಯಲ್ಲಿ ತೆರಿಗೆ ಉಳಿತಾಯ ಮಾಡುವುದಕ್ಕೆ ಮ್ಯೂಚುವಲ್ ಫಂಡ್​ನಿಂದ ಹಿಡಿದು ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್) ತನಕ ಹಲವು ಹೂಡಿಕೆ ಯೋಜನೆಗಳಿವೆ. ಈ ಪೈಕಿ ಈಕ್ವಿಟಿ ಲಿಂಕ್ಡ್ ಸೇವಿಂಗ್ ಸ್ಕೀಮ್ಲ್ಲಿ ಹಣ ಹೂಡಿಕೆ ಮಾಡಿದರೆ ಅದು ಹಂಚಿಕೆಯಾಗಲು ಐದಾರು ದಿನ ತೆಗೆದುಕೊಳ್ಳುವ ಕಾರಣ ಕ್ಷಿಪ್ರ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಇನ್ನುಳಿದಂತೆ, ಪಿಪಿಎಫ್ (ಶೇಕಡ 7.1ಬಡ್ಡಿದರ), ಐದು ವರ್ಷದ ತೆರಿಗೆ ಉಳಿತಾಯದ ನಿಶ್ಚಿತ ಠೇವಣಿ (ಎಫ್​ಡಿ), ನ್ಯಾಷನಲ್ ಸೇವಿಂಗ್ ಸರ್ಟಿಫಿಕೇಟ್ (ಎನ್​ಎಸ್​ಸಿ), ಜೀವವಿಮೆ, ಅವಧಿ ವಿಮೆ, ವೈದ್ಯಕೀಯ ವಿಮೆ, ಹಿರಿಯ ನಾಗರಿಕರ ಉಳಿತಾಯ ಯೋಜನೆ (ಶೇ. 7.4 ಬಡ್ಡಿದರ), ಆಯ್ದ ಮ್ಯೂಚುವಲ್ ಫಂಡ್​ಗಳಲ್ಲಿ ಹಣ ಹೂಡಿಕೆ ಮಾಡಬಹುದು.
ಸೆಕ್ಷನ್ 80 ಡಿ ಪ್ರಕಾರ ಉಳಿತಾಯ: ಆರೋಗ್ಯ ವಿಮೆಯ ಪ್ರೀಮಿಯಂ ಮೇಲೆ ಗರಿಷ್ಠ 50,000 ರೂಪಾಯಿ (ಪತಿ/ಪತ್ನಿ, ಮಕ್ಕಳಿಗೆ 25 ಸಾವಿರ ರೂಪಾಯಿ ಮತ್ತು 60 ವರ್ಷದೊಳಗಿನ ಅವಲಂಬಿತ ಪಾಲಕರಿಗೆ 25 ಸಾವಿರ ರೂ.)ವರೆಗೆ ತೆರಿಗೆ ವಿನಾಯಿತಿ ಪಡೆಯಬಹುದು. ಹಿರಿಯ ನಾಗರಿಕರಿಗೆ ವರ್ಷಕ್ಕೆ 1 ಲಕ್ಷ ರೂ. ಮಿತಿಯವರೆಗೆ ಪಾವತಿಸಿದ ವೈದ್ಯಕೀಯ ವಿಮಾ ಪ್ರೀಮಿಯಂಗಳ ಮೇಲೆ ತೆರಿಗೆ ವಿನಾಯಿತಿಗೆ ಕ್ಲೇಮ್ ಮಾಡಬಹುದು.ಹಿರಿಯ ನಾಗರಿಕರು ಯಾವುದೇ ಆರೋಗ್ಯ ವಿಮೆಗೆ ಒಳಪಡದಿದ್ದರೆ, ನಂತರ ವೈದ್ಯಕೀಯ ವೆಚ್ಚವನ್ನು ಸೆಕ್ಷನ್ 80ಡಿ ಅಡಿಯಲ್ಲಿ ಗರಿಷ್ಠ 50,000 ರೂಪಾಯಿವರೆಗೆ ತೆರಿಗೆ ವಿನಾಯಿತಿ ಪಡೆಯಬಹುದು.
ಉಳಿತಾಯದ ದಾರಿ:ಸೆಕ್ಷನ್ 80 ಸಿ ಅಡಿಯಲ್ಲಿ ಲಭ್ಯವಿರುವ ವಿನಾಯಿತಿಗಳು ಹೊರತು ಪಡಿಸಿಯೂ, ತೆರಿಗೆ ಉಳಿಸಲು ಸರಳ ತಂತ್ರಗಳಿವೆ. ಆರೋಗ್ಯ ವಿಮೆಗೆ ಪಾವತಿಸಿದ ಮೊತ್ತ, ಗೃಹಸಾಲದ ಅಸಲು, ಬಡ್ಡಿ ಮೇಲೂ ತೆರಿಗೆ ವಿನಾಯಿತಿ ಪಡೆಯ ಬಹುದು. ಹಲವಾರು ಯೋಜನೆಗಳಲ್ಲಿ ಹೂಡಿಕೆಯೂ ಸೂಕ್ತ.

ಹಳೆಯ ತೆರಿಗೆ ಪದ್ಧತಿಯಲ್ಲಿ ಸೆಕ್ಷನ್ 80ಸಿ ಅಡಿಯಲ್ಲಿ 1.5 ಲಕ್ಷ ರೂಪಾಯಿವರೆಗೆ ತೆರಿಗೆ ಉಳಿತಾಯ ಮಾಡಬಹುದು.
2. ನಿರ್ದಿಷ್ಟ ಹಣಕಾಸು ಸಂಸ್ಥೆಯಿಂದ ಪಡೆದ ಹೋಮ್ೋನ್ ಪ್ರಿನ್ಸಿಪಲ್ ಮೊತ್ತ.
3. ಪ್ರತಿವರ್ಷ ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್)ಗೆ 500 ರೂ.ನಿಂದ 1.5 ಲಕ್ಷ ರೂ. ತನಕ ದೇಣಿಗೆ.
4. ಎರಡು ಮಕ್ಕಳ ಶಾಲೆಯ ಟ್ಯೂಷನ್ ಶುಲ್ಕ.
5.  ಜೀವವಿಮೆಯ ಪ್ರೀಮಿಯಂ ಸ್ವಂತದ್ದು, ಪತ್ನಿ (ಪತಿ) ಮತ್ತು ಮಕ್ಕಳದು.
6. ಯುಲಿಪ್ ಮೇಲಿನ ಹೂಡಿಕೆಯ ಪ್ರೀಮಿಯಂ.
7. ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್ (ಎನ್​ಎಸ್​ಸಿ).
8. ಐದು ವರ್ಷದ ಅವಧಿಯ ಬ್ಯಾಂಕ್/ ಅಂಚೆ ಕಚೇರಿ ಠೇವಣಿ.
9. ಸುಕನ್ಯಾ ಸಮೃದ್ಧಿ ಯೋಜನೆಗೆ ಪ್ರತಿವರ್ಷ 1.5 ಲಕ್ಷ ರೂಪಾಯಿ ಹೂಡಿಕೆ (ಗರಿಷ್ಠ ಇಬ್ಬರು ಮಕ್ಕಳಿಗೆ ಸೀಮಿತ).
10. ಸೆಕ್ಷನ್ 80ಇಇಈ ಅಡಿಯಲ್ಲಿ ಎನ್​ಪಿಎಸ್ ಕೊಡುಗೆಗಳಿಗೆ 50 ಸಾವಿರ ರೂ. ಹೆಚ್ಚುವರಿ ಕಡಿತವನ್ನು ಕ್ಲೈಮ್ ಮಾಡಬಹುದು. ಅಲ್ಲದೆ, ಶಿಕ್ಷಣ ಸಾಲಗಳ ಮೇಲಿನ ಬಡ್ಡಿಯ ಮೇಲೂ ತೆರಿಗೆ ವಿನಾಯಿತಿ ಪಡೆಯಬಹುದು.
2. 80ಈ- ಸ್ವಯಂ, ಸಂಗಾತಿ ಮತ್ತು ಅವಲಂಬಿತ ಪಾಲಕರಿಗೆ ವೈದ್ಯಕೀಯ ವಿಮಾ ಪ್ರೀಮಿಯಂಗಾಗಿ.
3. ವಿಭಾಗ 80ಉಉ- ಮೊದಲ ಮನೆಯ ಮಾಲೀಕರಿಗೆ ಗೃಹಸಾಲದ ಬಡ್ಡಿ ಪಾವತಿಗೆ ಕಡಿತ
4.  ವಿಭಾಗ 24- ರೂ 2 ಲಕ್ಷದವರೆಗಿನ ಗೃಹಸಾಲಕ್ಕೆ ಬಡ್ಡಿ ಕಡಿತ
5.  ವಿಭಾಗ 80ಉಉಆ- ಎಲೆಕ್ಟ್ರಿಕ್ ವಾಹನ ಖರೀದಿಗಾಗಿ ವಾಹನ ಸಾಲಕ್ಕೆ ಬಡ್ಡಿ ಕಡಿತ
6. 80ಎ- ದತ್ತಿ ಸಂಸ್ಥೆಗಳಿಗೆ ದೇಣಿಗೆ.
7.  80ಎಎ-ನಿಮ್ಮ ಆದಾಯವು ಏಅ ಘಟಕವನ್ನು ಒಳಗೊಂಡಿರದಿದ್ದರೆ, ನೀವು 80ಎಎ ಅಡಿಯಲ್ಲಿ ಬಾಡಿಗೆ ಕಡಿತವನ್ನು ಪಡೆಯಬಹುದು.
8. ಸೆಕ್ಷನ್ 80ಖಖಅ- ಉಳಿತಾಯ ಬ್ಯಾಂಕ್ ಖಾತೆಯಲ್ಲಿ ಪಡೆದ ಬಡ್ಡಿಗೆ ರೂ 10,000ವರೆಗೆ ತೆರಿಗೆ ವಿನಾಯ್ತಿ.
1ಹೋಮ್​ಲೋನ್​ (ಉದ್ಯೋಗದಾತ, ಸ್ನೇಹಿತ, ಖಾಸಗಿ ಸಾಲದಾತ) ನಲ್ಲಿ ಬಡ್ಡಿಗೆ ತೆರಿಗೆ ವಿನಾಯಿತಿ ಇದೆ. ಆದರೆ, ಮೂಲ ಮೊತ್ತಕ್ಕೆ ಅಲ್ಲ. ಇದಕ್ಕಾಗಿ ಬೇಕಾಗಿರುವುದು ಸಾಲ ನೀಡಿದವರಿಂದ ಪ್ರಮಾಣಪತ್ರ.
2ನಿರ್ವಣ ಹಂತದ ಅಪಾರ್ಟ್​ವೆುಂಟ್ ಖರೀದಿ ಮಾಡಿದಾಗಲೂ ಹಸ್ತಾಂತರಕ್ಕೆ ಮುಂಚಿನ ಅವಧಿಯಲ್ಲಿ ಪಾವತಿಸಿದ ಒಟ್ಟು ಬಡ್ಡಿಯನ್ನು ತೆರಿಗೆ ವಿನಾಯಿತಿಗೆ ಸೇರಿಸಬಹುದು. ಆದರೆ, ಇದು ಹಣಕಾಸುವರ್ಷದಲ್ಲಿ 5 ಸಮಾನ ಕಂತಿನಲ್ಲಿ ಪಾವತಿ ಆಗಿದ್ದು, ನಿರ್ಮಾಣ ಮುಗಿದಿರಬೇಕು ಅಥವಾ ಅಪಾರ್ಟ್​ವೆುಂಟ್ ಹಸ್ತಾಂತರಗೊಂಡಿರಬೇಕು. ಇದರಂತೆ ಸ್ವತಃ ವಾಸವಿರುವ ಅಪಾರ್ಟ್​ವೆುಂಟ್​ಗೆ ಗರಿಷ್ಠ 2 ಲಕ್ಷ ರೂಪಾಯಿ ವಿನಾಯಿತಿ ಸಿಗಲಿದೆ. (ಒಂದೊಮ್ಮೆ ಮೊದಲ ಮನೆಗೆ 1.5 ಲಕ್ಷ ರೂಪಾಯಿ ಬಡ್ಡಿ ವಿನಾಯಿತಿ ಸಿಕ್ಕಿದ್ದರೂ)
3ಪತಿ-ಪತ್ನಿ ಜಂಟಿ ಮಾಲೀಕತ್ವ: ಹೊಸ ಅಪಾರ್ಟ್​ವೆುಂಟ್ ಅನ್ನು ಪತಿ ಮತ್ತು ಪತ್ನಿ ಜಂಟಿಯಾಗಿ ಮಾಲೀಕತ್ವ ಹೊಂದಿ ಖರೀದಿ ಮಾಡಿದಾಗ ಇಬ್ಬರಿಗೂ ಬಡ್ಡಿ ಮೇಲೆ ತಲಾ 2 ಲಕ್ಷ ರೂಪಾಯಿ ತನಕ ತೆರಿಗೆ ವಿನಾಯಿತಿ ಸಿಗಲಿದೆ. ಆದಾಯ ಗಳಿಸುವ ಪುತ್ರ ಅಥವಾ ಪುತ್ರಿ ಇದ್ದರೆ ಆಗ ಸಾಲವನ್ನು ಮೂವರಿಗೆ ಹಂಚಲಾಗುತ್ತದೆ. ಮೂವರು ಕೂಡ ತಲಾ 2 ಲಕ್ಷ ರೂಪಾಯಿ ತನಕ ತೆರಿಗೆ ವಿನಾಯಿತಿ ಪಡೆಯಬಹುದು.
4ಬಾಡಿಗೆ ಮೇಲೆ ತೆರಿಗೆ:ಸ್ವಂತ ವಾಸವಾಗಿರುವ ಎರಡನೆ ಮನೆಯ ಆದಾಯ ತೆರಿಗೆಯ ವ್ಯಾಪ್ತಿಗೆ ಬರುವುದಿಲ್ಲ. ಆದರೆ ಮೂರನೇ ಮನೆ ಇದ್ದು, ಅದನ್ನು ಬಾಡಿಗೆಗೆ ಕೊಡದೇ ಇದ್ದರೂ, ಅದರ ನಿರೀಕ್ಷಿತ ಬಾಡಿಗೆ ಆದಾಯವನ್ನು ತೆರಿಗೆ ಆದಾಯಕ್ಕೆ ಪರಿಗಣಿಸಲಾಗುತ್ತದೆ.
5ಮನೆ ಆಸ್ತಿಯಿಂದ ಒಟ್ಟು ನಷ್ಟ ಉಂಟಾಗಿದ್ದರೆ, ಇದನ್ನು ಇತರ ಆದಾಯ (ವೇತನ ಮತ್ತು ಇತರ ಮೂಲ)ದ ಮೂಲಕ ಗರಿಷ್ಠ 2 ಲಕ್ಷ ರೂಪಾಯಿ ಮಿತಿಯಲ್ಲಿ ಸರಿದೂಗಿಸಬಹುದು. ಈ ರೀತಿ ಲೆಕ್ಕವನ್ನು ಗರಿಷ್ಠ 8 ಹಣಕಾಸು ವರ್ಷ ತನಕ ಮುಂದುವರಿಸಬಹುದು.
ಶಸ್ತ್ರಚಿಕಿತ್ಸೆಯಿಂದ ಚೇತರಿಕೆ: ವಿಡಿಯೋ ಹಂಚಿಕೊಂಡ ಜಗ್ಗಿ ವಾಸುದೇವ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + 6 =
Remember me
