ಬೆಂಗಳೂರು:ಸೊಪ್ಪು ಆರೋಗ್ಯಕ್ಕೆ ಒಳ್ಳೆಯದು, ಔಷಧೀಯ ಗುಣಗಳು ದೇಹಕ್ಕೆ ತುಂಬಾ ಪ್ರಯೋಜನಕಾರಿ. ಹಾಗಾಗಿ ಆಹಾರದಲ್ಲಿ ಹಸಿರು ತರಕಾರಿ ಇರಬೇಕು ಎನ್ನುತ್ತಾರೆ ತಜ್ಞರು. ಆದರೆ ಮಳೆಗಾಲದಲ್ಲಿ ಸೊಪ್ಪನ್ನು ಸೇವಿಸಬಾರದು ಎಂದು ಹಲವರು ಭಾವಿಸುತ್ತಾರೆ.  ಆದರೆ ನಾವು ಈ ಕುರಿತಾಗಿ ಇಂದು ನಿಮಗೆ ತಿಳಿಸಿ ಕೊಡಲಿದ್ದೇವೆ.
ಪಾಲಾಕ್, ಅರಿವೆ ಸೊಪ್ಪು, ದಂಟಿನ ಸೊಪ್ಪು ಹಾಗೂ ಕೆಲವು ಹಸಿರು ತರಕಾರಿಗಳು ಮಳೆಗಾಲಕ್ಕೆ ಸೂಕ್ತ ಆಹಾರ ಅಲ್ವೇ ಅಲ್ಲ. ಪೋಷಕಾಂಶ, ವಿಟಮಿನ್ಸ್ ಎಲ್ಲಾ ಇರುವ ಈ ಆಹಾರಗಳು ಮಳೆಗಾಲಕ್ಕೆ ಸೂಕ್ತ ಆಹಾರವಲ್ಲ.
ಮಳೆಗಾಲದಲ್ಲಿ ಸೊಪ್ಪುಗಳನ್ನು ಸೇವಿಸುವುದರಿಂದ ಆರೋಗ್ಯ ಸಮಸ್ಯೆ ಉಂಟಾಗುತ್ತದೆ ಎಂಬುದು ಸಂಪೂರ್ಣ ಸತ್ಯವಲ್ಲದಿದ್ದರೂ ಸ್ವಲ್ಪ ಮಟ್ಟಿಗೆ ನಿಜ. ಮಳೆಗಾಲದಲ್ಲಿ ಹಸಿರು ತರಕಾರಿಗಳು ಕೆಸರಾಗುತ್ತದೆ. ಈ ಋತುವಿನಲ್ಲಿ ಗಾಲೆಯಲ್ಲಿ ತೇವಾಂಶವು ಅಧಿಕವಾಗಿರುತ್ತದೆ. ಈ ಕಾರಣದಿಂದಾಗಿ ವೈರಸ್ ಮತ್ತು ಬ್ಯಾಕ್ಟೀರಿಯಾಗಳು ಎಲೆಗಳ ಮೇಲೆ ಸಂಗ್ರಹಗೊಳ್ಳುತ್ತವೆ. ಮಳೆಗಾಲದಲ್ಲಿ, ಬ್ಯಾಕ್ಟೀರಿಯಾಗಳು ಹಸಿರು ಎಲೆ ಮೇಲೆ ಸಂತಾನೋತ್ಪತ್ತಿ ಮಾಡುತ್ತವೆ. ಹಾಗಾಗಿ ಹಸಿರು ತರಕಾರಿಗಳನ್ನು ಸ್ವಚ್ಛಗೊಳಿಸಿ ಸೇವಿಸದಿದ್ದರೆ ಸಮಸ್ಯೆಗಳು ಎದುರಾಗುತ್ತವೆ.

ಎಲೆಗಳ ತರಕಾರಿಗಳಿಂದ ಯಾವುದೇ ನೇರ ಅಪಾಯವಿಲ್ಲ. ಅವುಗಳ ಮೇಲೆ ಸಂಗ್ರಹವಾಗಿರುವ ವೈರಸ್ ಮತ್ತು ಬ್ಯಾಕ್ಟೀರಿಯಾಗಳಿಂದ ಆಹಾರ ವಿಷವಾಗುವ ಸಾಧ್ಯತೆಗಳಿವೆ.  ಅತಿಸಾರ, ಹೊಟ್ಟೆನೋವು ಮತ್ತಿತರ ಕರುಳು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ .ಶುಚಿಗೊಳಿಸಿ ತೆಗೆದುಕೊಂಡರೆ ಯಾವುದೇ ತೊಂದರೆಯಾಗುವುದಿಲ್ಲ.

ಹಸಿರು ತರಕಾರಿಗಳನ್ನು ಬೇಯಿಸುವ ಮೊದಲು ಸ್ವಲ್ಪ ಸಮಯದವರೆಗೆ ಉಪ್ಪುಸಹಿತ ನೀರಿನಲ್ಲಿ ಕುದಿಸುವುದು ಉತ್ತಮ. ಹೀಗೆ ಮಾಡುವುದರಿಂದ ಮಳೆಗಾಲದಲ್ಲಿ ಸೊಪ್ಪಿನ ಸೇವನೆಗೆ ಯಾವುದೇ ತೊಂದರೆಯಾಗುವುದಿಲ್ಲ.
ಸೊಪ್ಪಿನಲ್ಲಿ ಹುಳವಿದೆಯೇ ಎಂದು ಒಂದೊಂದು ಸೊಪ್ಪನ್ನು ಬಿಡಿಸಿ ನೋಡಿ, ನಂತರ ಸೊಪ್ಪನ್ನು ಚೆನ್ನಾಗಿ ಬೇಯಿಸಿ ತಿನ್ನಿ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:two × 2 =
Remember me
