ಬೆಂಗಳೂರು:ಹೆಚ್ಚಾಗುತ್ತಿರುವ ವಾಯು ಮಾಲಿನ್ಯದಿಂದ ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಎದುರಾಗುತ್ತಿವೆ.ಪರಿಸರ ಮಾಲಿನ್ಯವನ್ನು ನಿಯಂತ್ರಿಸುವುದಕ್ಕಾಗಿ ಸೈಕಲ್ ಬಳಕೆಯನ್ನು ಹೆಚ್ಚಿಸಬೇಕೆಂಬುದು ಸರ್ಕಾರದ ಚಿಂತನೆ.ಆದರೆ ಸೈಕಲ್ ಬಳಕೆ ಮತ್ತು ಬ್ಯಾಲೆನ್ಸ್ ಎಲ್ಲರಿಗೂ ಸಾಧ್ಯವಿಲ್ಲ.ಅದಕ್ಕಾಗಿ ಬರುತ್ತಿದೆ ಮೂರು ಚಕ್ರದ ಪರಿಸರ ಸ್ನೇಹಿ ಫ್ರಾಕ್ಟಲ್ ಸೈಕಲ್.
ಇದು ಕೇವಲ ಸೈಕಲ್ ಅಲ್ಲ.ಪಾದಚಾರಿಗಳಿಗಾಗಿ ಆವಿಷ್ಕರಿಸಿರುವ ನೂತನ ಮಾದರಿಯ ವಾಕಿಂಗ್ ವೆಹಿಕಲ್!ಇದರ ತಂತ್ರಜ್ಞಾನ ಸೈಕಲ್‌ನಂತೆಯೇ ಕಾರ್ಯ ನಿರ್ವಹಿಸುತ್ತದೆಯಾದರೂ,ಸೈಕಲ್‌ಗಿಂತ ವಿಭಿನ್ನ.ಈ ವಾಹನಕ್ಕೆ ಮೂರು ಚಕ್ರಗಳಿರುವುದರಿಂದ ಬ್ಯಾಲೆನ್ಸ್ ಮಾಡುವುದು ಸುಲಭ.ಎಲ್ಲ ವಯೋಮಾನದವರು ಇದನ್ನು ಬಳಸಬಹುದು.ವಿಶೇಷವೆಂದರೆ ಇದಕ್ಕೆ ಯಾವುದೇ ಇಂಧನದ ಅವಶ್ಯಕತೆ ಇರುವುದಿಲ್ಲ.ಆದ್ದರಿಂದ ಈ ವಾಹನ ವಾಯು ಮಾಲಿನ್ಯಕ್ಕೆ ಕಾರಣವಾಗುವ ಹೊಗೆಯುಗುಳುವುದಿಲ್ಲ.
ಆರೋಗ್ಯಕ್ಕೆ ಪೂರಕವಾಗಿ ದೇಹಕ್ಕೆ ಉತ್ತಮ ವ್ಯಾಯಾಮ ನೀಡುವ ಸೈಕ್ಲಿಂಗ್ ಬಗ್ಗೆ ತಜ್ಞ ವೈದ್ಯರೇ ಸಲಹೆ ನೀಡುತ್ತಾರೆ.ಹೊಸದಾಗಿ ಆವಿಷ್ಕರಿಸಲ್ಪಟ್ಟಿರುವ ಈ ತ್ರಿಚಕ್ರ ಸೈಕಲ್‌ನಲ್ಲಿ ಕುಳಿತುಕೊಳ್ಳುವ ಸೀಟ್ ಇರುವುದಿಲ್ಲ.ಬದಲಾಗಿ ನಿಂತುಕೊಂಡೆ ಪೆಡಲ್ ತುಳಿಯಬೇಕು.ಪ್ರತಿ ಒಂದೊಂದು ಪೆಡಲ್ ತುಳಿಯುತ್ತಿದ್ದಂತೆ ವಾಹನವು ಮುಂದೆ ಹೋಗುತ್ತದೆ.
ವೃತ್ತಿಯಲ್ಲಿ ಆರ್ಕಿಟೆಕ್ಚರ್ ಆಗಿರುವ ಕೆ.ಜಯರಾಮ್ ಅವರು ಕ್ರಿಯಾಶೀಲ,ರಚನಾತ್ಮಕ ವ್ಯಕ್ತಿತ್ವದ ಸಾಧಕ.ವಿಭಿನ್ನ ಮತ್ತು ವಿಶಿಷ್ಟ ತಂತ್ರಜ್ಞಾನದ ಮೂಲಕ ಸಮಾಜದಲ್ಲಿ ಹೊಸತೇನಾದರೂ ಆವಿಷ್ಕರಿಸಬೇಕೆಂಬ ಹಂಬಲದಿಂದ ವಿನೂತನ ಪರಿಕಲ್ಪನೆಯ ಪಾದಚಾರಿ ವಾಹನವನ್ನು ನಿರ್ಮಿಸಿದ್ದಾರೆ.ಇದರ ಬೆಲೆ12ರಿಂದ15ಸಾವಿರ ತಗುಲಲಿದ್ದು,ಗ್ರಾಹಕರ ಬೇಡಿಕೆಗನುಗುಣವಾಗಿ ಪೂರೈಕೆ ಮಾಡಲು ಸಿದ್ಧರಿರುವುದಾಗಿ ಜಯರಾಮ್ ಹೇಳಿಕೊಂಡಿದ್ದಾರೆ.ತಮ್ಮ ಈ ಆವಿಷ್ಕಾರಕ್ಕೆ ಪತ್ನಿ ಸಂಧ್ಯಾ ಮತ್ತು ಪುತ್ರರಾದ ಸಮ್ಯಕ್ ಹಾಗೂ ವಿಹಾರ್ ಸಹಕಾರವಿದೆ ಎನ್ನುತ್ತಾರೆ ಜಯರಾಮ್.
ಕೆ.ಜಯರಾಮ್ ಅವರು ಹೊಸದಾಗಿ ಆವಿಷ್ಕರಿಸಿದ ಫ್ರಾಕ್ಟಲ್ ಸೈಕಲ್ ವಿಶೇಷವಾಗಿ ಪಾದಚಾರಿಗಳಿಗಾಗಿಯೇ ವಿನ್ಯಾಸಗೊಳಿಸಲಾಗಿದೆ.ನಗರದಲ್ಲಿ ಪಾದಚಾರಿಗಳ ನಡಿಗೆ ಸುರಕ್ಷಿತವಾಗಿಲ್ಲ.ಫುಟ್‌ಪಾತನಲ್ಲಿ ವಾಹನ ನಿಲುಗಡೆ,ನಿರ್ವಹಣೆ ಇಲ್ಲದೆ ಬಾಯ್ದೆರಿದಿರುವ ಚರಂಡಿಗಳ ಅಪಾಯಗಳನ್ನು ಪರಿಗಣಿಸಿ ಬಹುತೇಕ ಪಾದಚಾರಿಗಳು ರಸ್ತೆಯ ಮೇಲೆ ವಾಕಿಂಗ್ ಮಾಡುತ್ತಾರೆ.ಇದರಿಂದ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿವೆ.ಅಂತಹ ಪಾದಚಾರಿಗಳು ಈ ವಾಹನದ ಮೂಲಕ ತಮ್ಮ ವಾಕಿಂಗ್ ಮಾಡುವುದರಿಂದ ಸುರಕ್ಷಿತ,ಇಂಧನ ರಹಿತ,ಪರಿಸರ ಸ್ನೇಹಿ ಹಾಗೂ ಉತ್ತಮ ವ್ಯಾಯಾಮವು ದೊರೆಯುತ್ತದೆ ಎಂಬುದು ಜಯರಾಮ್ ಅವರ ಅಭಿಪ್ರಾಯ.
“ನಗರದ ರಸ್ತೆ ವಿನ್ಯಾಸವು ವಾಹನಗಳ ಸಂಚಾರಕ್ಕೆ ಸುರಕ್ಷಿತವಾಗಿಲ್ಲ.ಹಾಗಂತ ಈಗ ರಸ್ತೆಗಳನ್ನು ಬದಲಿಸುವುದಕ್ಕೆ ಸಾಧ್ಯವಿಲ್ಲ.ಪರಿಸರ ಸಂರಕ್ಷಣೆಗಾಗಿ ಮುಂದಿನ ದಿನಗಳಲ್ಲಿ ಬೆಂಗಳೂರು ನಗರದ ಸುತ್ತಮುತ್ತ ಸುಮಾರು600ಕಿ.ಮೀ.ಸೈಕಲ್ ಪಾತ್ ನಿರ್ಮಿಸುವ ಗುರಿ ಸರ್ಕಾರ ಹೊಂದಿದೆ.ಅದು ಸಾಕಾರಗೊಂಡಲ್ಲಿ ಫ್ರಾಕ್ಟಲ್  ಸೈಕಲ್ ಹೆಚ್ಚು ಉಪಯೋಗವಾಗಲಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + 8 =
Remember me
