|ಪಂಕಜ ಕೆ.ಎಂ.ಬೆಂಗಳೂರು
ಬದಲಾದ ಜನರ ಜೀವನ ಶೈಲಿ ಹಾಗೂ ಆಹಾರ ಕ್ರಮದಿಂದಾಗಿ ಹೆಚ್ಚುತ್ತಿರುವ ಕಾಯಿಲೆಗಳಲ್ಲಿ ಕ್ಯಾನ್ಸರ್ ಮುಂಚೂಣಿಯಲ್ಲಿದೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ ರೋಗ ಪತ್ತೆ ಮತ್ತು ಚಿಕಿತ್ಸೆಯಲ್ಲಿ ಬಹಳಷ್ಟು ಸುಧಾರಣೆ ಆಗಬೇಕಿದೆ. ಈ ನಿಟ್ಟಿನಲ್ಲಿ ಜಗತ್ತಿನಾದ್ಯಂತ ನಿರಂತರವಾಗಿ ಸಂಶೋಧನೆಗಳು ನಡೆಯುತ್ತಿದ್ದು, ನಿತ್ಯವೂ ಒಂದಿಲ್ಲೊಂದು ವರದಿ ಪ್ರಕಟವಾಗುತ್ತಿವೆ. ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲೂ ಕ್ಯಾನ್ಸರ್ ಪ್ರಕರಣಗಳು ದಿನೇದಿನೆ ಏರಿಕೆಯಾಗುತ್ತಿವೆ. ಅದರಲ್ಲೂ ಸ್ತನ ಕ್ಯಾನ್ಸರ್ ಮಹಿಳೆಯರಲ್ಲಿ ಆತಂಕ ಸೃಷ್ಟಿಸಿದೆ. ಕೆಲ ಆರೋಗ್ಯ ಸಂಸ್ಥೆಗಳ ಅಧ್ಯಯನ ಪ್ರಕಾರ 2030ರ ವೇಳೆಗೆ ದೇಶದಲ್ಲಿ ಸ್ತನ ಕ್ಯಾನ್ಸರ್ ಪೀಡಿತರ ಸಂಖ್ಯೆ ದುಪ್ಪಟ್ಟಾಗಲಿದೆ ಎಂದು ಅಂದಾಜಿಸಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಮುಂಬೈನ ಟಾಟಾ ಮೆಮೋರಿಯಲ್ ಸೆಂಟರ್ (ಟಿಎಂಸಿ) ಅತಿ ಕಡಿಮೆ ದರದಲ್ಲಿ ಸ್ತನ ಕ್ಯಾನ್ಸರ್ ಗುಣಪಡಿಸುವ ಹಾಗೂ ರೋಗಿಯ ಜೀವಿತಾವಧಿ ಹೆಚ್ಚಿಸುವ ನಿಟ್ಟಿನಲ್ಲಿ ಸರಳವಾದ ಚಿಕಿತ್ಸಾ ಮಾರ್ಗವನ್ನು ಕಂಡುಹಿಡಿದಿದೆ. ಇತ್ತೀಚಿಗೆ ಪ್ಯಾರಿಸ್​ನಲ್ಲಿ ನಡೆದ ಯುರೋಪಿಯನ್ ಸೊಸೈಟಿ ಆಫ್ ಮೆಡಿಕಲ್ ಆಂಕಾಲಜಿ ಕಾಂಗ್ರೆಸ್​ನಲ್ಲಿ ಟಾಟಾ ಮೆಮೋರಿಯಲ್ ಸೆಂಟರ್ ಸ್ತನ ಕ್ಯಾನ್ಸರ್ ಕುರಿತು ನಡೆಸಿರುವ ಈ ಅಧ್ಯಯನ ವರದಿಯನ್ನು ಮಂಡಿಸಿದೆ. ಸ್ತನ ಕ್ಯಾನ್ಸರ್ ಹೊಂದಿರುವ ಮಹಿಳೆಯರ ಮೇಲೆ ನಡೆಸಲಾಗಿರುವ ಈ ಪ್ರಯೋಗ ಜಾಗತಿಕವಾಗಿ ಮೊದಲ ಅಧ್ಯಯನವಾಗಿದೆ. ಈ ಅಧ್ಯಯನದಲ್ಲಿ 30ರಿಂದ 70 ವಯಸ್ಸಿನ ಕಾಯಿಲೆ ಹಂತ-1, 2, 3 ಹಾಗೂ ಆರಂಭಿಕ ಹಂತ ಸೇರಿ ಒಟ್ಟು 1,600 ರೋಗಿಗಳು ಸೇರಿದ್ದಾರೆ.
ಕ್ಯಾನ್ಸರ್ ಕುರಿತು ಜಗತ್ತಿನಾದ್ಯಂತ ನಿರಂತರವಾಗಿ ಅಧ್ಯಯನಗಳು ನಡೆಯುತ್ತಿವೆ. ಮುಂಬೈನ ಟಾಟಾ ಮೆಮೋರಿಯಲ್ ಸೆಂಟರ್​ನಿಂದ ಸ್ತನ ಕ್ಯಾನ್ಸರ್ ಕುರಿತು ನಡೆಸಿರುವ ಅಧ್ಯಯನದಲ್ಲಿ ಕಡಿಮೆ ದರದಲ್ಲಿ ಪರಿಣಾಮಕಾರಿ ಚಿಕಿತ್ಸೆ ನೀಡುವ ಬಗ್ಗೆ ತಿಳಿಸಿದೆ. ಇಂತಹ ಅಧ್ಯಯನಗಳು ಇನ್ನಷ್ಟು ನಡೆಯಬೇಕಿದ್ದು, ಕ್ಯಾನ್ಸರ್ ಕುರಿತು ಜನಜಾಗೃತಿಯೂ ಹೆಚ್ಚಬೇಕಿದೆ.
|ಡಾ. ಅರವಿಂದ್ಸರ್ಜಿಕಲ್ ಅಂಕಾಲಜಿ ತಜ್ಞ, ಎಂ.ಎಸ್.ರಾಮಯ್ಯ ಆಸ್ಪತ್ರೆ
ಅರಿವಳಿಕೆಯಾಗಿ ಲಿಡೋಕೇನ್ ಬಳಕೆ:ವಿಶ್ವದಾದ್ಯಂತ ಸ್ತನ ಕ್ಯಾನ್ಸರ್​ಗೆ ಒಳಗಾಗುವ ಮಹಿಳೆಯರ ಸಂಖ್ಯೆ ಏರುತ್ತಿದೆ. ಅರಿವಿನ ಕೊರತೆಯಿಂದ ಸ್ತನ ಕ್ಯಾನ್ಸರ್​ಗೆ ಬಲಿಯಾಗುವವರ ಸಂಖ್ಯೆಯೂ ಹೆಚ್ಚುತ್ತಿದೆ. ಇದರ ಹೊರತಾಗಿಯೂ ಕೆಲ ಮುನ್ನೆಚ್ಚರಿಕೆ ಕ್ರಮಗಳ ಮೂಲಕ ಮಹಿಳೆಯರು ತಮ್ಮ ಜೀವವನ್ನು ಉಳಿಸಿಕೊಳ್ಳಬಹುದು. ಈ ನಿಟ್ಟಿನಲ್ಲಿ ಟಾಟಾ ಮೆಮೋರಿಯಲ್ ಕೇಂದ್ರದ ವೈದ್ಯರು ದಶಕ ಕಾಲ (2011- 2022) ನಡೆಸಿದ ಅಧ್ಯಯನದಲ್ಲಿ ಸ್ತನ ಕ್ಯಾನ್ಸರ್ ಶಸ್ತ್ರಚಿಕಿತ್ಸೆಗೆ ಸ್ವಲ್ಪ ಮೊದಲು ಸ್ಥಳೀಯ ಅರಿವಳಿಕೆ (0.5 ರಷ್ಟು ಲಿಡೋಕೇನ್)ಯನ್ನು ಕ್ಯಾನ್ಸರ್ ವಿರೋಧಿ ಅಂಶವಾಗಿ ಬಳಕೆ ಮಾಡುವುದರಿಂದ ಸಾವಿನ ಪ್ರಮಾಣ ಶೇ. 29 ಹಾಗೂ ಕಾಯಿಲೆ ಮರುಕಳಿಸುವಿಕೆ ಅಪಾಯವನ್ನು ಶೇ. 30 ತಡೆಯಬಹುದು ಎಂದು ಅಭಿಪ್ರಾಯಪಟ್ಟಿದೆ.
ಚಿಕಿತ್ಸಾ ವಿಧಾನ:ಸಾಮಾನ್ಯ ಅರಿವಳಿಕೆಯಲ್ಲಿರುವ ರೋಗಿಯನ್ನು ಶಸ್ತ್ರಚಿಕಿತ್ಸೆಗೆ ಕೊಂಡೊಯ್ಯುವ ಕೆಲ ನಿಮಿಷಗಳ ಮೊದಲು, ಶಸ್ತ್ರಚಿಕಿತ್ಸೆ ನಡೆಸುವ ಸ್ಥಳೀಯ ಭಾಗಕ್ಕೆ ಅರಿವಳಿಕೆ ಚುಚ್ಚಲಾಗುತ್ತದೆ. ಅಂದರೆ ವೈದ್ಯರು ಶಸ್ತ್ರಚಿಕಿತ್ಸೆ ನಡೆಸುವ 5 ನಿಮಿಷಗಳ ಮೊದಲು ಸ್ತನದಲ್ಲಿರುವ ಕ್ಯಾನ್ಸರ್ ಗಡ್ಡೆಯ ಸುತ್ತಲೂ ಅರಿವಳಿಕೆಯನ್ನು ನೀಡಲಾಗುತ್ತದೆ. ಇದು ಗಡ್ಡೆಯ ಸೂಕ್ಷ್ಮ ಪರಿಸರದಲ್ಲಿ ಕ್ಯಾನ್ಸರ್ ಕೋಶಗಳು ಪರಸ್ಪರ ಸಂವಹನ ನಡೆಸುವುದನ್ನು ತಡೆದು ಗಡ್ಡೆಯನ್ನು ನಿದ್ರೆಗೆ ದೂಡುತ್ತದೆ. ಇದರಿಂದ ರೋಗ ಮರುಕಳಿಸುವ (ಕ್ಯಾನ್ಸರ್ ಕೋಶಗಳು ದೇಹದ ಇತರೆ ಭಾಗಗಳಿಗೆ ಹರಡುವ ಪ್ರಕ್ರಿಯೆ) ಸಾಧ್ಯತೆಯನ್ನು ತಗ್ಗಿಸುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.
ಇಂಜೆಕ್ಷನ್​ಗೆ ನೂರು ರೂಪಾಯಿ:ಈ ಪ್ರಕ್ರಿಯೆಯಿಂದ ಶಸ್ತ್ರಚಿಕಿತ್ಸೆಯಿಂದ ಉಂಟಾಗುವ ಹಾನಿಕಾರಕ ಪ್ರತಿಕ್ರಿಯೆಗಳನ್ನು ತಡೆಗಟ್ಟಿ, ರೋಗ ಮರುಕಳಿಸುವುದನ್ನು ತಪ್ಪಿಸಬಹುದಾಗಿದೆ. ಈ ಇಂಜೆಕ್ಷನ್ ಬಗ್ಗೆ ತಿಳಿಯಲು ಅಥವಾ ರೋಗಿಗಳಿಗೆ ನೀಡಲು ಹೆಚ್ಚುವರಿ ಪರಿಣತಿಯ ಅಗತ್ಯವಿಲ್ಲ. ಪ್ರತಿ ರೋಗಿಗೆ ನೂರು ರೂ. ಗಿಂತಲೂ ಕಡಿಮೆ ದರದಲ್ಲಿ ಈ ಚಿಕಿತ್ಸೆ ನೀಡಬಹುದಾಗಿದೆ. ವಿಶ್ವದಾದ್ಯಂತ ಈ ವಿಧಾನ ಅನುಸರಿಸಿದಲ್ಲಿ ವಾರ್ಷಿಕ ಒಂದು ಲಕ್ಷ ಜೀವಗಳನ್ನು ಉಳಿಸಬಹುದಾಗಿದೆ ಎಂದು ಅಧ್ಯಯನ ವರದಿ ಹೇಳಿದೆ.
ರೈಲಲ್ಲಿ ಪ್ಲಾಸ್ಟಿಕ್ ಕವರ್​ನೊಳಗೆ ಮೈಮುಚ್ಚಿಕೊಂಡು ಬಾಳೆಹಣ್ಣು ತಿಂದ ಮಹಿಳೆ!; ಅಷ್ಟಕ್ಕೂ ಆಕೆ ಹಾಗೆ ಮಾಡಿದ್ದೇಕೆ?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × three =
Remember me
